ಟೀಂ ಇಂಡಿಯಾ ಏಕದಿನ ಜೆರ್ಸಿ ಮೇಲೆ ಈ 3 ಸ್ಟಾರ್‌ʼಗಳು ಇರೋದೇಕೆ? ಕ್ರಿಕೆಟ್‌ ಅಭಿಮಾನಿಗಳೇ.. ಇದರ ಅರ್ಥ ನಿಮಗೇನಾದ್ರೂ ಗೊತ್ತಾ?

Sun, 04 Aug 2024-5:17 pm,

ಟೀಂ ಇಂಡಿಯಾದಲ್ಲಿ ಎಷ್ಟು ಬಾರಿ ಜೆರ್ಸಿ ಬದಲಾವಣೆಯಾದರೂ, ಪ್ರಮುಖ ಬಣ್ಣ ನೀಲಿಯೇ ಆಗಿರುತ್ತದೆ. ಆದರೆ ಎಂದಾದರೂ ಗಮನವಿಟ್ಟು ನೋಡಿದ್ದಿರಾ? ಭಾರತೀಯ ಪುರುಷರ ಕ್ರಿಕೆಟ್ ತಂಡದ ಜರ್ಸಿಯಲ್ಲಿ, BCCI ಲಾಂಛನದ ಮೇಲೆ ಮೂರು ನಕ್ಷತ್ರಗಳಿವೆ. ಒಂದು ವೇಳೆ ಗಮನಿಸಿಲ್ಲವಾದರೆ, ಈ ಮೇಲೆ ನೀಡಿರುವ ಫೋಟೋದಲ್ಲಿ ನೋಡಬಹುದು. ಆಟಗಾರರ ಜರ್ಸಿಯಲ್ಲಿ ಈ ಸ್ಟಾರ್‌ʼಗಳನ್ನು ಏಕೆ ಮಾಡಲಾಗಿದೆ ಎಂದು ನಿಮಗೆ ತಿಳಿದಿದೆಯೇ?

ಕೆಲ ಮಾಹಿತಿಗಳ ಪ್ರಕಾರ, ಈ ಸ್ಟಾರ್‌ʼಗಳು ತಮ್ಮದೇ ಆದ ಪ್ರಾಮುಖ್ಯತೆಯನ್ನು ಹೊಂದಿವೆ. ಇದು ಭಾರತೀಯ ಪುರುಷರ ಕ್ರಿಕೆಟ್ ತಂಡವು ಸಾಧಿಸಿದ ವಿಶೇಷ ವಿಜಯದ ಬಗ್ಗೆ ಸೂಚಿಸುತ್ತವೆ. ಅಂದರೆ ಟೀಂ ಇಂಡಿಯಾ ಗೆದ್ದ ವಿಶ್ವಕಪ್ ಅನ್ನು ನೆನಪಿಸುತ್ತವೆ.

 

ಇದುವರೆಗಿನ ಕ್ರಿಕೆಟ್ ಇತಿಹಾಸದಲ್ಲಿ ಭಾರತೀಯ ಪುರುಷರ ಕ್ರಿಕೆಟ್ ತಂಡವು 4 ಬಾರಿ ವಿಶ್ವಕಪ್ ಗೆದ್ದಿರುವುದು ನಮಗೆಲ್ಲ ತಿಳಿದಿದೆ. ಹಾಗಾದರೆ 4 ಸ್ಟಾರ್‌ ಇರಬೇಕಲ್ಲವೇ ಎಂಬುದು ಕೆಲವರ ವಾದ. ಅಷ್ಟೇ ಅಲ್ಲದೆ, ಟಿ20 ಜೆರ್ಸಿಯಲ್ಲಿ 2 ಸ್ಟಾರ್‌ಗಳಿದೆ. ಇದು ಎರಡು ಬಾರಿ ಟಿ20 ವಿಶ್ವಕಪ್ ಗೆದ್ದಿದ್ದೇವೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಆದರೆ ಒಡಿಐ ಜೆರ್ಸಿಯಲ್ಲಿ ಮೂರು ಸ್ಟಾರ್‌ʼಗಳಿದ್ದು, ಭಾರತ ಇದುವರೆಗೆ ಗೆದ್ದಿದ್ದು ಎರಡು ಒಡಿಐ ವಿಶ್ವಕಪ್. ಹಾಗಾದ್ರೆ ಆ ಮೂರನೇ ಸ್ಟಾರ್‌ ಯಾಕೆ ಎಂಬುದು ಸದ್ಯದ ಪ್ರಶ್ನೆ.

 

ಅಂದಹಾಗೆ ಈ ಪ್ರಶ್ನೆ ಮಾಡಿದವರ ಕಳಕಳಿ, ಟೀಂ ಇಂಡಿಯಾವನ್ನು ದೂಷಿಸುವುದಾಗಲಿ, ಟೀಕಿಸುವುದಾಗಲಿ ಅಲ್ಲ. ಬದಲಾಗಿ ಒಡಿಐ ಜೆರ್ಸಿಯಲ್ಲಿ ಮೂರನೇ ಸ್ಟಾರ್‌ ಯಾಕೆ ಇದೆ ಎಂದು ಯಾರಿಗಾದರೂ ತಿಳಿದಿದ್ದರೆ ತಿಳಿಸಿ ಎಂಬುದಾಗಿದೆ.

 

ಒಂದು ವೇಳೆ ಚಾಂಪಿಯನ್ಸ್‌ ಟ್ರೋಫಿಯನ್ನು ಪರಿಗಣನೆಗೆ ತೆಗೆದುಕೊಂಡರೆ, 4 ಸ್ಟಾರ್‌ʼಗಳು ಇರಬೇಕು. ಏಕೆಂದರೆ ಭಾರತ ಎರಡು ಬಾರಿ ಟ್ರೋಫಿ ಗೆದ್ದಿದೆ. ಸದ್ಯ ಇದು ಹಾಟ್‌ ಟಾಪಿಕ್‌ ಆಗಿದ್ದು. ಈ ವಿಷಯದ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link