Actress Ramya: ಟಾಪ್ ನಟಿಯಾಗಿದ್ದರೂ ಮೋಹಕತಾರೆ ರಮ್ಯಾ ಏಕಾಏಕಿ ನಟನೆ ನಿಲ್ಲಿಸಿದ್ದೇಕೆ?
ಅದ್ಭುತ ನಟನೆ ಹಾಗೂ ಸೌಂದರ್ಯದ ಮೂಲಕ ಅಭಿಮಾನಿಗಳ ಮನಗೆದ್ದ ಮೋಹಕತಾರೆ ರಮ್ಯಾ ಅವರಿಗೆ ಸಾಕಷ್ಟು ಸಿನಿಮಾ ಆಫರ್‌ಗಳು ಒಲಿದು ಬರುತ್ತಿದ್ದಾಗಲೇ ನಟಿ ರಾಜಕೀಯ ಪ್ರವೇಶ ಮಾಡಿದರು..
ನಂತರ ಸಿನಿಮಾಗಳಿಂದ ದೂರ ಉಳಿದ ನಟಿ ರಾಜಕೀಯದಿಂದಲೂ ಅಂತರ ಕಾಯ್ದುಕೊಂಡರು.. ಹಾಗಾದ್ರೆ ನಟಿ ರಮ್ಯಾ ಸಿನಿರಂಗದಿಂದ ದೂರ ಉಳಿಯಲು ಅಸಲಿ ಕಾರಣವೇನು?
ನಟಿ ರಮ್ಯ ಪಡ್ಡೆ ಹುಡುಗರ ಕನಸಿನ ಕನ್ಯೆಯಾಗಿದ್ದರು.. ತಮ್ಮದೇ ಆದ ಅಭಿಮಾನಿ ಬಳಗ ಸೃಷ್ಟಿಸಿಕೊಂಡ ಈ ಚೆಲುವೆಯ ಸಿನಿಮಾಗಾಗಿ ಸದ್ಯ ಅಭಿಮಾನಿಗಳು ಕಾದುಕುಳಿತಿದ್ದಾರೆ.. ಅಷ್ಟರ ಮಟ್ಟಿಗೆ ಕ್ರೇಜ್ ಗಿಟ್ಟಸಿಕೊಂಡಿದ್ದ ಸ್ಯಾಂಡಲ್‌ವುಡ್ ಕ್ವೀನ್ ಇವರು..
ಸಿನಿರಂಗದ ಆಫರ್‌ಗಳು ಕೈಯಲ್ಲಿ ಇರುವಾಗಲೇ ನಟಿ ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯಕ್ಕೆ ಎಂಟ್ರಿಕೊಟ್ಟರು.. 2013ರ ಎಲೆಕ್ಷನ್ ನಲ್ಲಿ ಗೆದ್ದು ಮಂಡ್ಯ ಕ್ಷೇತ್ರದ ಪಾರ್ಲಿಮೆಂಟ್ ಸದಸ್ಯೆಯೂ ಆಗಿದ್ದರು. ಹೀಗೆ ರಾಜಕೀಯ ಹಾಗೂ ಸಿನಿಮಾ ಎರಡನ್ನು ಸಂಬಾಳಿಸಲು ಸಾಧ್ಯವಾದ ಕಾರಣ ಸಿನಿರಂಗದಿಂದ ದೂರ ಉಳಿದರು ಎಂದು ಕೆಲವು ವರದಿಗಳಿವೆ..
ಆದರೆ ಮತ್ತೊಂದು ಮಾಹಿತಿಯ ಪ್ರಕಾರ ನಟಿ ರಮ್ಯಾ ಅವರು ಎ ಗಣೇಶ್ ಎನ್ನುವವರೊಂದಿಗೆ ಎದುರಾದ ಸಣ್ಣ ಭಿನ್ನಾಭಿಪ್ರಾಯ ಮಾಡಿಕೊಳ್ಳುತ್ತಾರೆ.. ಇದರಿಂದ ಅವರಿಗೆ ತಾವು ನೀಡಬೇಕಿದ್ದ 10 ಲಕ್ಷ ಸಾಲವನ್ನು ಮರುಪಾವತಿಸಿ ಯಾರ ಸಹವಾಸ ಬೇಡ ಎಂದು ದೂರ ಉಳಿದಿದ್ದಾರೆ ಎನ್ನಲಾಗಿದೆ..
ಇನ್ನು ಇತ್ತೀಚೆಗೆ ನಟಿ ರಮ್ಯಾ ಶೀಘ್ರದಲ್ಲೇ ಮತ್ತೆ ಸಿನಿಮಾ ನಿರ್ಮಾಣ ಹಾಗೂ ಬಣ್ಣಹಚ್ಚಲು ರೆಡಿಯಾಗಿದ್ದಾರೆ ಎನ್ನುವ ಸುದ್ದಿಯೊಂದು ಕೇಳಿಬರುತ್ತಿದೆ.. ಆದರೆ ಸ್ಯಾಂಡಲ್‌ವುಡ್ ಕ್ವೀನ್ ಮತ್ತೆ ನಮ್ಮನ್ನೆಲ್ಲಾ ರಂಜಿಸುತ್ತಾರಾ? ಇಲ್ಲವಾ? ಕಾದುನೋಡಬೇಕಿದೆ..