ದರ್ಶನ್ ಗೆಳತಿ ಪವಿತ್ರಾ ಗೌಡ ಮೊದಲ ಪತಿಯಿಂದ ದೂರವಾಗಿದ್ದೇಕೆ?
ವೃತ್ತಿ ಜೀವನಕ್ಕಿಂತ ವೈಯಕ್ತಿಕ ಜೀವನದಿಂದ ಹೆಚ್ಚು ಸುದ್ದಿಯಾಗಿರುವ ಪವಿತ್ರಾ ಗೌಡ.. ನಟ ದರ್ಶನ್ ಜೊತೆಗಿನ ಸಂಬಂಧದಿಂದ ಸಾಕಷ್ಟು ಸದ್ದು ಮಾಡಿದ್ದಾರೆ..
ನಟ ದರ್ಶನ್‌ಗೆ ಜಗ್ಗುದಾದಾ ಸಿನಿಮಾ ಶೂಟಿಂಗ್ ವೇಳೆ ಪರಿಚಯವಾಗಿದ್ದ ಪವಿತ್ರಾ ಗೌಡ.. ಅಲ್ಲಿಂದ ಶುರುವಾದ ಇವರ ಸ್ನೇಹ ಪ್ರೀತಿಗೆ ತಿರುಗಿದೆ ಎನ್ನುವ ಮಾತೂ ಇದೆ.. ಇದಲ್ಲದೇ ಸ್ವತಃ ಅವರೇ ದರ್ಶನ್ ಜೊತೆಗಿನ ಪೋಟೋಗಳನ್ನು ಬಿಡುಗಡೆ ಮಾಡುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದರು..
ಪವಿತ್ರಾ ಗೌಡ ನಟಿ ಎನ್ನುವುದಕ್ಕಿಂತ ಹೆಚ್ಚಾಗಿ ದರ್ಶನ್ ಗೆಳತಿ ಎಂದೇ ಹೆಚ್ಚು ಖ್ಯಾತಿ ಗಳಿಸಿದ್ದಾರೆ.. ಇವರ ಮೊದಲ ಪತಿ ಐಟಿ ಉದ್ಯೋಗಿ ಸಂಜಯ್ ಸಿಂಗ್.. ಈ ಮಾಜಿ ದಂಪತಿಗೆ ಖುಷಿ ಹೆಸರಿನ ಒಬ್ಬ ಮಗಳಿದ್ದಾಳೆ..
ಬೆಂಗಳೂರು ಗ್ರಾಮಾಂತರ ತಲಘಟ್ಟಾಪುರ ಗ್ರಾಮದ ನಿವಾಸಿಯಾದ ಪವಿತ್ರಾ ಗೌಡ ಜೆಪಿ ನಗರದಲ್ಲಿ ನೆಲೆಸಿದ್ದರು,, ಬಿಸಿಎ ಪದವೀಧರೆಯಾದ ಇವರು ಬೆಂಗಳೂರಿನ ಬಿಷಪ್ ಕಾಟನ್ ಕಾಲೇಜಿನಲ್ಲಿ ಎಜುಕೇಷನ್ ಮುಗಿಸಿದ್ದಾರೆ..
ನಟಿಯಾಗಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದ ಪವಿತ್ರಾ ಗೌಡ ಅಗಮ್ಯ ಸಿನಿಮಾದ ಮೂಲಕ ಸಿನಿರಂಗಕ್ಕೆ ಕಾಲಿಟ್ಟಿದ್ದರು.. ಆದರೆ ಅವರಿಗೆ ಬಣ್ಣದ ಲೋಕದಲ್ಲಿ ಹೆಸರು ಮಾಡಲಾಗಲಿಲ್ಲ..