ಲೇಡಿ ಅಂಬಾನಿ ಎಂದೇ ಖ್ಯಾತಿ ಪಡೆದ ಈ ಮಹಿಳೆ ಯಾರು ಗೊತ್ತಾ? ಇವರು ಕ್ರಿಕೆಟ್ ಜಗತ್ತನ್ನೇ ಆಳುತ್ತಿರುವ ಕನ್ನಡದ ಸ್ಟಾರ್ ಕ್ರಿಕೆಟಿಗನ ಅತ್ತೆ!

Mon, 08 Apr 2024-3:35 pm,
Lady Ambani Mana Shetty

ತಮ್ಮ ಅದ್ಭುತ ನಟನೆ ಮತ್ತು ಆಕ್ಷನ್ ಮೂಲಕ ಹೆಸರು ಗಳಿಸಿರುವ ಬಾಲಿವುಡ್ ಸೆಲೆಬ್ರಿಟಿಗಳಲ್ಲಿ ಒಬ್ಬರು ಸುನೀಲ್ ಶೆಟ್ಟಿ. ಅಷ್ಟೇ ಅಲ್ಲದೆ, ಬಾಲಿವುಡ್‌’ನ ಶ್ರೀಮಂತ ನಟ ಕೂಡ ಹೌದು. ಚಲನಚಿತ್ರಗಳಲ್ಲಿ ಮಾತ್ರವಲ್ಲದೆ ಯಶಸ್ವಿ ಉದ್ಯಮಿ ಕೂಡ ಆಗಿದ್ದಾರೆ. ಅಂದಹಾಗೆ ಇವರ ಪತ್ನಿ ಮನ ಶೆಟ್ಟಿ ಬಾಲಿವುಡ್‌’ನ ಲೇಡಿ ಅಂಬಾನಿ ಎಂದು ಪ್ರಸಿದ್ಧಿ ಪಡೆದಿದ್ದಾರೆ.

Lady Ambani Mana Shetty

ಸುನೀಲ್ ಶೆಟ್ಟಿಯವರ ಪತ್ನಿ ಮಾನ ಶೆಟ್ಟಿ ಯಶಸ್ವಿ ಉದ್ಯಮಿ ಮಾತ್ರವಲ್ಲ, ಯಶಸ್ವಿ ಸಾಮಾಜಿಕ ಕಾರ್ಯಕರ್ತೆ ಮತ್ತು ರಿಯಲ್ ಎಸ್ಟೇಟ್ ಕ್ವೀನ್ ಕೂಡ ಹೌದು. ಆಕೆಯನ್ನು ಬಾಲಿವುಡ್‌ನ ಲೇಡಿ ಅಂಬಾನಿ ಎಂದು ಕರೆಯಲು ಇದೂ ಒಂದು ಕಾರಣ. ಆಕೆಯ ನಿವ್ವಳ ಮೌಲ್ಯ ಸುಮಾರು $2 ಮಿಲಿಯನ್.

Lady Ambani Mana Shetty

ವರದಿಗಳ ಪ್ರಕಾರ, ಮಾನ ಶೆಟ್ಟಿ ತನ್ನ ಪತಿ ಸುನಿಲ್ ಶೆಟ್ಟಿಯೊಂದಿಗೆ S2 ಎಂಬ ರಿಯಲ್ ಎಸ್ಟೇಟ್ ಯೋಜನೆಯನ್ನು ಪ್ರಾರಂಭಿಸಿದ್ದು, ಅದರ ಅಡಿಯಲ್ಲಿ ಮುಂಬೈನಲ್ಲಿ 21 ಐಷಾರಾಮಿ ವಿಲ್ಲಾಗಳನ್ನು ನಿರ್ಮಿಸಿದ್ದಾರೆ. ಪ್ರತಿಯೊಂದು ವಿಲ್ಲಾವು ಸುಮಾರು 6,500 ಚದರ ಅಡಿಗಳನ್ನು ಹೊಂದಿದ್ದು ಅದ್ದೂರಿಯಾಗಿದೆ.

ಮಾನ ಶೆಟ್ಟಿ ಸಮಾಜಸೇವೆಯಲ್ಲೂ ತೊಡಗಿಸಿಕೊಂಡಿದ್ದುಮ ಲಾಭರಹಿತ ಸಂಸ್ಥೆ ಸೇವ್ ದಿ ಚಿಲ್ಡ್ರನ್‌’ನೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಈ NGO ಗಾಗಿ ಆಗಾಗ್ಗೆ ನಿಧಿಸಂಗ್ರಹಣೆ ಮತ್ತು ದತ್ತಿ ಕಾರ್ಯಕ್ರಮಗಳನ್ನು ಸಹ ಆಯೋಜಿಸುತ್ತಾರೆ.

ಹೆಚ್ಚುವರಿಯಾಗಿ, ಪ್ರದರ್ಶನಗಳನ್ನು ಆಯೋಜಿಸುತ್ತಾ, ಅದರಿಂದ ಬರುವ ಆದಾಯವನ್ನು ಬಡ ಮಹಿಳೆಯರಿಗೆ ಸಹಾಯ ಮಾಡಲು ಬಳಸುತ್ತಾರೆ. ಇನ್ನು ತನ್ನ ಸಹೋದರಿಯೊಂದಿಗೆ "ಮಾನ ಆಂಡ್ ಇಶಾ" ಎಂಬ ಬಟ್ಟೆ ಬ್ರಾಂಡ್ ಅನ್ನು ಸಹ ಹೊಂದಿದ್ದಾರೆ.

ಅಂದಹಾಗೆ ಸುನೀಲ್ ಶೆಟ್ಟಿ ಮೊದಲು ಮಾನ ಅವರನ್ನು ಭೇಟಿಯಾಗಿದ್ದು ಪೇಸ್ಟ್ರಿ ಪ್ಯಾಲೇಸ್‌’ನಲ್ಲಿ. ಮೊದಲ ನೋಟದಲ್ಲೇ ಪ್ರೀತಿಯ ಬಲೆಯಲ್ಲಿದ್ದ ಸುನಿಲ್, ಆಕೆಯನ್ನು ಪಟಾಯಿಸಲೆಂದು ಮೊದಲಿಗೆ ಇಶಾ ಜೊತೆ ಸ್ನೇಹ ಬೆಳೆಸಿದ್ದರು, ಅದಾದ ನಂತರ ಆಗಾಗ್ಗೆ ಭೇಟಿಯಾಗುತ್ತಿದ್ದ ಸುನಿಲ್, ಮಾನ ಅವರನ್ನು ತಮ್ಮ ಪಾರ್ಟಿಗಳಿಗೆ ಆಹ್ವಾನಿಸಲು ಮುಂದಾದರು.

ಅಲ್ಲಿಂದ ಶುರುವಾದ ಈ ಸ್ನೇಹ ನಂತರ ಸುಮಾರು ವರ್ಷಗಳ ಬಳಿಕ ಅಂದರೆ ಡಿಸೆಂಬರ್ 25, 1991 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲು ಮುಂದಾದರು,

ಈ ಜೋಡಿ  ಹಿಂದಿ ಚಿತ್ರರಂಗದಲ್ಲಿ ತನ್ನದೇ ಆದ ಸ್ಥಾನವನ್ನು ಕಾಯ್ದುಕೊಂಡಿದೆ. ಈ ಮುದ್ದಾದ ಜೋಡಿಗೆ ಅಥಿಯಾ ಶೆಟ್ಟಿ ಮತ್ತು ಅಹಾನ್ ಶೆಟ್ಟಿ ಎಂಬ ಇಬ್ಬರು ಮಕ್ಕಳಿದ್ದಾರೆ. ಇನ್ನು ಅಥಿಯಾ ಹಾಗೂ ಸ್ಟಾರ್ ಕ್ರಿಕೆಟಿಗ ಕೆ ಎಲ್ ರಾಹುಲ್ ವಿವಾಹವಾಗಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link