4 ವರ್ಷಗಳ ದಾಂಪತ್ಯದಲ್ಲಿ ಡಿವೋರ್ಸ್ ಬಿರುಗಾಳಿ: ಪತ್ನಿ ಶ್ರೀದೇವಿಗೆ ಯುವರಾಜ್ ಡಿವೋರ್ಸ್ ಕೊಡಲು ಕಾರಣ ಇದುವೇ..!?
ಸ್ಯಾಂಡಲ್ವುಡ್’ನಲ್ಲಿ ಮತ್ತೊಂದು ಡಿವೋರ್ಸ್ ಸುದ್ದಿ ಮುನ್ನೆಲೆಗೆ ಬಂದಿದೆ. ಇತ್ತೀಚೆಗೆಯಷ್ಟೇ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದರು. ಅದೇ ದಿನ ದೊಡ್ಮನೆ ಕುಡಿ ಯುವರಾಜ್ ಕುಮಾರ್ ಕೂಡ ಡಿವೋರ್ಸ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ ಎನ್ನಲಾಗಿದೆ.
ನಟ ಸಾರ್ವಭೌಮ ಡಾ. ರಾಜ್ ಕುಮಾರ್ ಮೊಮ್ಮಗ, ನಟ ರಾಘವೇಂದ್ರ ರಾಜ್ ಕುಮಾರ್ ಪುತ್ರ ಯುವರಾಜ್ ಕುಮಾರ್ ದಾಂಪತ್ಯದಲ್ಲಿ ಬಿರುಗಾಳಿ ಎದ್ದಿದೆ. ಮದುವೆಯಾಗಿ ನಾಲ್ಕು ವರ್ಷಗಳ ಬಳಿಕ ಪತ್ನಿ ಶ್ರೀದೇವಿಗೆ ಡಿವೋರ್ಸ್ ನೀಡಲು ಯುವರಾಜ್ ನಿರ್ಧರಿಸಿದ್ದಾರೆ. ಇದು ರಾಜ್ ಕುಮಾರ್ ಕುಟುಂಬದಲ್ಲೇ ಮೊದಲ ಡಿವೋರ್ಸ್.
ಅಂದಹಾಗೆ ಯುವರಾಜ್ ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ ಮೈಸೂರು ಮೂಲದವರು. ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟು ನಾಲ್ಕು ವರ್ಷಗಳಾಗಿವೆ. ಆದರೆ ಇದೀಗ ನಟ ಯುವರಾಜ್ ಜೂನ್ 6 ರಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಸದ್ಯ ಈ ಜೋಡಿ ಡಿವೋರ್ಸ್ ಮೊರೆ ಹೋಗಿದ್ದು, ಮುಂದೇನಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.
ಫ್ಯಾಮಿಲಿ ಕೋರ್ಟ್’ನಲ್ಲಿ ಕೇಸ್ ಮುಂದುವರೆಯುತ್ತಿದ್ದು, ಪತ್ನಿ ಶ್ರೀದೇವಿಗೆ ಡಿವೋರ್ಸ್ ನೋಟಿಸ್ ಕಳಿಸಿದ್ದಾರೆ ಎನ್ನಲಾಗಿದೆ. ಅಂದಹಾಗೆ ಶ್ರೀದೇವಿ ಭಾರತದಲ್ಲಿ ವಾಸ ಮಾಡುತ್ತಿಲ್ಲ. ಬದಲಾಗಿ ಅಮೇರಿಕಾಗೆ ತೆರಳಿದ್ದಾರೆ. ಅವರಿಗೆ ಉನ್ನತ ಶಿಕ್ಷಣ ಪಡೆಯುವ ಕನಸಿದ್ದು, ಇದೇ ವಿಚಾರವಾಗಿ ಮನಸ್ತಾಪ ಕಂಡುಬಂದಿದೆ. ಇದರಿಂದಾಗಿಯೇ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.
ಇನ್ನೊಂದೆಡೆ ಅಮೇರಿಕಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಶ್ರೀದೇವಿ, ಯುವ ಕಳುಹಿಸಿರುವ ಯಾವುದೇ ನೋಟಿಸ್’ಗೂ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ತಿಳಿದುಬಂದಿದೆ. ಸದ್ಯ ಕೌಟುಂಬಿಕ ಕೋರ್ಟ್;ನಲ್ಲಿರುವ ಯುವ ಮತ್ತು ಶ್ರೀದೇವಿ ಡಿವೋರ್ಸ್ ಪ್ರಕರಣ ಯಾವ ಹಂತಕ್ಕೆ ಬಂದು ನಿಲ್ಲುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ಶ್ರೀದೇವಿ ಭೈರಪ್ಪ ಮೈಸೂರಿನಲ್ಲೇ ಹುಟ್ಟಿ ಬೆಳೆದು ಉನ್ನತ ಶಿಕ್ಷಣ ಮುಗಿಸಿ, ಡಾ. ರಾಜ್ ಕುಮಾರ್ ಅವರ ಕುಟುಂಬ ನಡೆಸುತ್ತಿರುವ ಸಿವಿಲ್ ಸರ್ವೀಸ್ ಅಕಾಡೆಮಿ ಉಸ್ತುವಾರಿ ವಹಿಸಿಕೊಂಡಿದ್ದರು.