ಭಗವಾನ್ ಶ್ರೀಕೃಷ್ಣ ಸ್ವತಃ ತಾನೇ ತನ್ನ ಕೊಳಲನ್ನು ಏಕೆ ಮುರಿದನು ಗೊತ್ತೆ..! ತಪ್ಪದೇ ತಿಳಿಯಿರಿ
ಮಧುವ ಮೋಹನ ಮುರುಳಿಯ ಕೊಳಲಿನ ನಾದ ಕೇಳಿ ಇಡೀ ಜಗತ್ತೇ ಮುದಗೊಂಡಿತು. ಆದರೆ, ಆಗ ಶ್ರೀಕೃಷ್ಣನು ತನ್ನ ಕೊಳಲನ್ನು ತಾನೇ ಮುರಿಯುತ್ತಾನೆ.. ಇದರ ಹಿಂದೆ ನಿಗೂಢ ಕಾರಣ ಇದೆ.
ಶ್ರೀಕೃಷ್ಣನ ಕೊಳಲನ್ನು ಪ್ರೀತಿ, ಸಂತೋಷ ಮತ್ತು ಆಕರ್ಷಣೆಯ ಸಂಕೇತವೆಂದು ಪರಿಗಣಿಸಲಾಗಿದೆ. ಅವರ ಕೊಳಲನ್ನು ಮಹಾನಂದ ಅಥವಾ ಸಮ್ಮೋಹಿನಿ ಎಂದು ಕರೆಯಲಾಯಿತು.
ಧಾರ್ಮಿಕ ನಂಬಿಕೆಗಳ ಪ್ರಕಾರ, ಶಿವನು ಮಹರ್ಷಿ ದಧೀಚಿಯ ಮೂಳೆಗಳಿಂದ ಕೊಳಲನ್ನು ರೂಪಿಸಿದನು. ನೀಲಕಂಠ ಬಾಲಕೃಷ್ಣನನ್ನು ಭೇಟಿಯಾಗಲು ಬಂದಾಗ, ಈ ಕೊಳಲನ್ನು ಅವನಿಗೆ ಉಡುಗೊರೆಯಾಗಿ ನೀಡಿದ್ದ ಎಂದು ಪುರಾಣಗಳಲ್ಲಿ ಹೇಳಲಾಗಿದೆ.
ಕಂಸನನ್ನು ಕೊಂದ ನಂತರ ಶ್ರೀಕೃಷ್ಣನು ರುಕ್ಮಣಿಯನ್ನು ಮದುವೆಯಾಗಿ ದ್ವಾರಕೆಯಲ್ಲಿ ನೆಲೆಸಿದನು. ರುಕ್ಮಣಿಯು ಪತ್ನಿಯ ಧರ್ಮವನ್ನು ಅನುಸರಿಸುತ್ತಿದ್ದಳು ಮತ್ತು ದೇವರ ಸೇವೆಯಲ್ಲಿ ಸದಾ ನಿರತಳಾಗಿದ್ದಳು. ಆದರೆ, ಶ್ರೀಕೃಷ್ಣನ ಮನಸ್ಸಿನಿಂದ ರಾಧೆ ದೂರವಾಗಲಿಲ್ಲ.
ಭಗವಾನ್ ಕೃಷ್ಣನು ತನ್ನ ಜೀವನದುದ್ದಕ್ಕೂ ತನ್ನ ಎಲ್ಲಾ ಜವಾಬ್ದಾರಿಗಳನ್ನು ಉತ್ತಮವಾಗಿ ನಿರ್ವಹಿಸಿದನು ಅಲ್ಲದೆ, ತನ್ನ ಜೀವನದ ಕೊನೆಯ ಕ್ಷಣಗಳಲ್ಲಿ ರಾಧೆಯೊಂದಿಗೆ ಸೇರುತ್ತಾನೆ ಎಂದು ನಂಬಲಾಗಿತ್ತು.
ಕೊನೆಯ ಘಳಿಗೆಯಲ್ಲಿ ರಾಧೆ ಶ್ರೀ ಕೃಷ್ಣನ ಕೊಳಲಿನ ಸಂಗೀತವನ್ನು ಕೇಳಿ ತನ್ನ ದೇಹವನ್ನು ತೊರೆದಳಂತೆ. ಇದರಿಂದಾಗಿ ಶ್ರೀಕೃಷ್ಣನು ರಾಧೆಯ ಅಗಲಿಕೆಯನ್ನು ಸಹಿಸಲಾರದೆ ತನ್ನ ಕೊಳಲನ್ನು ಒಡೆದನು ಎಂದು ಪುರಾಣಗಳಲ್ಲಿ ಹೇಳಲಾಗುತ್ತದೆ.