ಎಲಿಮಿನೇಷನ್ ಅಲ್ಲ.. ʼಈʼ ಕಾರಣದಿಂದ ಕನ್ನಡ ಬಿಗ್‌ಬಾಸ್ ಮನೆಯಿಂದ ಹೊರಬರುತ್ತಾರಾ ಸ್ಟ್ರಾಂಗ್ ಲೇಡಿ ಸ್ಪರ್ಧಿ!?
ಬಿಗ್‌ಬಾಸ್ ಸ್ಪರ್ಧಿ ಚೈತ್ರಾ ಕುಂದಾಪುರ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.. ಇವರ ಮೇಲೆ ಉದ್ಯಮಿ ಗೋವಿಂದ ಪೂಜಾರಿ ಅವರಿಗೆ ವಿಧಾನ ಸಭಾ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚಿಸಿದ್ದಾರೆ ಎನ್ನುವ ಆರೋಪವಿದೆ.. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚೈತ್ರಾ ಅವರು ಕೆಲಸ ದಿನಗಳ ಕಾಲ ಜೈಲುವಾಸವನ್ನೂ ಅನುಭವಿಸಿದ್ದರು..
ಚೈತ್ರ ಕುಂದಾಪುರ ಮತ್ತು ಟೀಂ ಉದ್ಯಮಿ ಗೋವಿಂದ ಪೂಜಾರಿ ಅವರಿಗೆ ಬಿಜೆಪಿ ವಿಧಾನ ಸಭಾ ಕ್ಷೇತ್ರದ ಟಿಕೆಟ್ ಕೊಡಿಸುವುದಾಗಿ ವಂಚಿಸಿದ್ದಾರೆ ಎನ್ನುವ ಆರೋಪದಡಿಗೆ ಚೈತ್ರಾ ಅವರ ಮೇಲೆ ಸಿಸಿಬಿ ಚಾರ್ಜ್ ಶೀಟ್ ಸಲ್ಲಿಸಿದೆ..
ಚೈತ್ರ ಕುಂದಾಪುರ ಮತ್ತು ಟೀಂ ಉದ್ಯಮಿ ಗೋವಿಂದ ಪೂಜಾರಿ ಅವರಿಗೆ ಬಿಜೆಪಿ ವಿಧಾನ ಸಭಾ ಕ್ಷೇತ್ರದ ಟಿಕೆಟ್ ಕೊಡಿಸುವುದಾಗಿ ವಂಚಿಸಿದ್ದಾರೆ ಎನ್ನುವ ಆರೋಪದಡಿಗೆ ಚೈತ್ರಾ ಅವರ ಮೇಲೆ ಸಿಸಿಬಿ ಚಾರ್ಜ್ ಶೀಟ್ ಸಲ್ಲಿಸಿದೆ..
ಸದ್ಯಕ್ಕೆ ಬಿಗ್‌ಬಾಸ್ ಮನೆಯಲ್ಲಿರುವ ಚೈತ್ರ ಕುಂದಾಪುರ ಇಂದು ನಡೆದ ಟ್ರಯಲ್‌ಗೆ ಕೋರ್ಟ್‌ಗೆ ಹಾಜರಾಗಿಲ್ಲ.. ಇದಲ್ಲದೇ ಮುಂದಿನ ವಿಚಾರಣೆಗೆ ಅವರು ಹಾಜರಿರುತ್ತಾರೆ ಎಂದು ಚೈತ್ರಾ ಅವರ ಪರ ವಕೀಲರು ಹೇಳಿದ್ದಾರೆ..
ಇನ್ನು ಚೈತ್ರಾ ಕುಂದಾಪುರ ಅವರ ಈ ಪ್ರಕರಣಕ್ಕೆ ಸಂಬಂಧಪಟ್ಟ ವಿಚಾರಣೆಯನ್ನು ನ್ಯಾಯಾಧೀಶರು ಡಿಸೆಂಬರ್ 3ಕ್ಕೆ ಮುಂದೂಡಿಕೆ ಮಾಡಿದ್ದಾರೆ. ಹೀಗಾಗಿ ಆ ದಿನದಂದು ಅವರು ಕೋರ್ಟ್‌ಗೆ ಹಾಜರಾಗಬೇಕಿದೆ..
ಹಾಗಾದರೇ ಒಂದು ವೇಳೆ ಚೈತ್ರಾ ಕುಂದಾಪುರ ಅವರು ವಿಚಾರಣೆಗೆ ಹಾಜರಾಗುವುದಾದರೇ ಅವರು ಬಿಗ್‌ಬಾಸ್ ಮನೆಯಿಂದ ಹೊರಬರುತ್ತಾರಾ? ಅಥವಾ ಕೋರ್ಟ್‌ನಲ್ಲಿ ಕಾಲಾವಕಾಶ ಕೇಳುತ್ತಾರಾ? ಈ ಸಂಕಷ್ಟದಿಂದ ಚೈತ್ರ ಅವರು ಹೇಗೆ ಪಾರಾಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ..