ಮೊಟ್ಟೆಯ ಹಳದಿ ಭಾಗ ತಿನ್ನುವುದರಿಂದ ಕೊಲೆಸ್ಟ್ರಾಲ್, ತೂಕ ಹೆಚ್ಚಾಗುತ್ತಾ?
ಮೊಟ್ಟೆ ಪ್ರೋಟೀನ್‌ನ ಅತ್ಯುತ್ತಮ ಮೂಲ. ಇದರಲ್ಲಿ ಕ್ಯಾಲ್ಸಿಯಂ, ವಿಟಮಿನ್ ಬಿ2, ಬಿ12, ಎ, ಡಿ ಸೇರಿದಂತೆ ಹಲವು ಪೋಷಕಾಂಶಗಳಿವೆ. ಆದರೆ, ಮೊಟ್ಟೆಯ ಹಳದಿ ಭಾಗ ಆರೋಗ್ಯಕ್ಕೆ ಒಳ್ಳೆಯದಲ್ಲ ಇದರಿಂದ ಕೊಲೆಸ್ಟ್ರಾಲ್, ತೂಕ ಹೆಚ್ಚಾಗುತ್ತದೆ ಎಂದು ಹಲವರು ನಂಬುತ್ತಾರೆ. ಆದರೆ, ಮೊಟ್ಟೆಯ ಹಳದಿ ಭಾಗ ನಿಜಕ್ಕೂ ಆರೋಗ್ಯಕ್ಕೆ ಒಳ್ಳೆಯದಲ್ಲವೇ?
ಮೊಟ್ಟೆಯ ಹಳದಿ ಭಾಗವು ವಿಟಮಿನ್ ಎ, ಬಿ12, ಡಿ, ಇ ಮತ್ತು ಕೆ ಜೊತೆಗೆ ಖನಿಜಗಳಿಂದ ಸಮೃದ್ಧವಾಗಿದೆ.
ದಿನಕ್ಕೆ ಒಬ್ಬ ವ್ಯಕ್ತಿಗೆ 300ಮಿಲಿಗ್ರಾಂನಷ್ಟು ಕೊಲೆಸ್ಟ್ರಾಲ್ ಬೇಕಾಗುತ್ತದೆ. ಒಂದು ಮೊಟ್ಟೆಯಲ್ಲಿ ಕೇವಲ 186 ಮಿಲಿಗ್ರಾಂ ನಷ್ಟು ಮಾತ್ರ ಕೊಲೆಸ್ಟ್ರಾಲ್ ಇರುತ್ತದೆ.
ಅಧ್ಯಯನಗಳ ಪ್ರಕಾರ, ಮೊಟ್ಟೆಯಲ್ಲಿರುವ ಕೊಲೆಸ್ಟ್ರಾಲ್ ನಮ್ಮ ರಕ್ತದಲ್ಲಿನ ಕೊಲೆಸ್ಟ್ರಾಲ್ ಮೇಲೆ ಯಾವುದೇ ರೀತಿಯ ನಕಾರಾತ್ಮಕ ಪರಿಣಾಮವನ್ನು ಬೀರುವುದಿಲ್ಲ.
ಆರೋಗ್ಯ ತಜ್ಞರ ಪ್ರಕಾರ, ಮೊಟ್ಟೆಯ ಹಳದಿ ಭಾಗದಲ್ಲಿ ಒಮೆಗಾ ತ್ರೀ ಕೂಡ ಕಂಡು ಬರುವುದರಿಂದ ಇದರಿಂದ ತೂಕ ಹೆಚ್ಚಾಗುವುದಿಲ್ಲ.
ಆರೋಗ್ಯವಂತ ವ್ಯಕ್ತಿ ದಿನಕ್ಕೆ ಎರಡರಿಂದ ಮೂರು ಮೊಟ್ಟೆಗಳನ್ನು ತಿನ್ನಬಹುದು.
ಮೊಟ್ಟೆಯ ಹಳದಿ ಭಾಗದಲ್ಲಿ ನಮ್ಮ ದೇಹಕ್ಕೆ ಅಗತ್ಯವಾದ ಹತ್ತು ಪೋಷಕಾಂಶಗಳು ಕಂಡು ಬರುತ್ತವೆ. ಹಾಗಾಗಿ ದಿನಕ್ಕೆ ಒಂದು ಮೊಟ್ಟೆ ಸೇವನೆ ತುಂಬಾ ಪ್ರಯೋಜನಕಾರಿ ಎನ್ನುತ್ತಾರೆ ವೈದ್ಯರು.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.