ಬಿಗ್ ಬಾಸ್‌ನಿಂದ ಅರ್ಧಕ್ಕೇ ಹೊರಹೋದ ಗೋಲ್ಡ್ ಸುರೇಶ್... ದೊಡ್ಮನೆಗೆ ಮತ್ತೆ ಬರ್ತಾರಾ?
ಬಿಗ್ ಬಾಸ್ ಸೀಸನ್ 11 ಪ್ರಾರಂಭವಾಗಿ ಎರಡು ತಿಂಗಳುಗಳೇ ಕಳೆದಿವೆ. ಇನ್ನೇನು ಫಿನಾಲೆ ಸಮೀಪವಾಗಿದ್ದು, ದಿನೇ ದಿನೇ ಆಟದ ಗಮತ್ತು ಜೋರಾಗುತ್ತಿದೆ. ಇನ್ನು ಕಳೆದ ದಿನ ಎಲಿಮಿನೇಷನ್ ಪ್ರಕ್ರಿಯೆ ಮುಕ್ತಾಯಗೊಂಡಿದೆ.
ಈ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ನಿಯಮಾನುಸಾರ ಕಡಿಮೆ ಮತ ಪಡೆದು ಶಿಶಿರ್ ಶಾಸ್ತ್ರಿ ಹೊರಬಂದಿದ್ದಾರೆ. ಆದರೆ ಕುಟುಂಬದ ಕಾರಣದಿಂದ ಗೋಲ್ಡ್ ಸುರೇಶ್ ಅವರನ್ನು ಬಿಗ್‌ಬಾಸ್ ಹೊರಕರೆದಿದ್ದಾರೆ.
ಈ ಬೆನ್ನಲ್ಲೇ ಸುರೇಶ್ ಅವರು ಹೊರಬಂದಿದ್ದೇಕೆ? ಅವರು ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿಕೊಡ್ತಾರಾ? ಎಂಬ ಚರ್ಚೆಗಳು ಜೋರಾಗಿವೆ.
ಗೋಲ್ಡ್ ಸುರೇಶ್ ಅವರ ಮನೆಯಲ್ಲಿ ತುರ್ತು ಪರಿಸ್ಥಿತಿ ಎದುರಾದ ಕಾರಣದಿಂದ ಅವರನ್ನು ತಕ್ಷಣವೇ ಬಿಗ್ ಬಾಸ್‌ನಿಂದ ಹೊರಬರುವಂತೆ ಬಿಗ್ ಬಾಸ್ ಸೂಚಿಸಿದ್ದರು. ಈ ಬೆನ್ನಲ್ಲೇ ಕೆಲವೊಂದು ಮಾಧ್ಯಮಗಳು, ಸುರೇಶ್ ಅವರ ತಂದೆ ನಿಧನರಾಗಿದ್ದಾರೆ ಎಂದು ಸುದ್ದಿ ಹಬ್ಬಿತ್ತು. ಆದರೆ ಆ ಬಳಿಕ ಸ್ಪಷ್ಟನೆ ನೀಡಿದ ಅವರು, ನಾನು ಇನ್ನೂ ಬದುಕಿದ್ದೇನೆ ಎಂದು ಹೇಳಿದ್ದರು.
ಕಾಲು ನೋವು ಇರುವ ಕಾರಣದಿಂದ ಹೊರ ಬಂದಿರಬಹುದು ಎಂದು ಅವರ ತಂದೆ ಅನುಮಾನ ಹೊರಹಾಕಿದ್ದಾರೆ. ಇನ್ನುಇಂದಿನ ಎಪಿಸೋಡ್ನಲ್ಲಿ ಈ ಬಗ್ಗೆ ಮಾಹಿತಿ ಸಿಗುವ ಸಾಧ್ಯತೆ ಇದೆ.
ಇನ್ನೊಂದೆಡೆ ಫಿನಾಲೆ ವಾರ ಸಮೀಪಿಸುತ್ತಿದೆ. ದೊಡ್ಮನೆಯಿಂದ ಗೋಲ್ಡ್ ಸುರೇಶ್ ಹೊರಬಂದಿದ್ದು, ಮತ್ತೆ ಒಳ ಹೋಗ್ತಾರಾ? ಎಂಬುದು ಅನೇಕ ಪ್ರಶ್ನೆ. ಇದುವರೆಗಿನ ಸೀಸನ್‌ಗಳಲ್ಲಿ ಇಂತಹ ಘಟನೆಗಳು ನಡೆದಿರಲಿಲ್ಲ. ಈ ಹಿಂದೆ ವಾಸುಕಿ ವೈಭವ್ ಅವರ ಸಂಬಂಧಿ ಅಸುನೀಗಿದ್ದ ಸಂದರ್ಭದಲ್ಲಿ ಬಿಗ್ ಬಾಸ್ ಅವರಿಗೆ ಆ ವಿಷಯವನ್ನು ತಿಳಿಸಿದ್ದರು. ಇದರ ಹೊರತಾಗಿ ಮನೆಯಿಂದ ಹೊರಕಳುಹಿಸಿರಲಿಲ್ಲ.
ಇನ್ನೊಂದೆಡೆ ಬಿಗ್ ಬಾಸ್ ಒಟಿಟಿಯಲ್ಲಿ ಸಂದರ್ಭದಲ್ಲಿ ಅರ್ಜುನ್ ರಮೇಶ್ ಎಂಬವರು ಸಹ ಅರ್ಧಕ್ಕೆ ಬಿಗ್ ಬಾಸ್‌ನಿಂದ ಹೊರಬಂದಿದ್ದರು. ಕೈಗೆ ಗಾಯವಾಗಿದ್ದ ಕಾರಣಕ್ಕೆ ಹೊರಬಿದ್ದಿದ್ದಾರೆ ಎನ್ನಲಾಗಿತ್ತು. ಆದರೆ ಆ ಬಳಿಕ ಅವರನ್ನು ಬಿಗ್ ಬಾಸ್ ಮನೆಗೆ ಮತ್ತೆ ಕರೆತಂದಿರಲಿಲ್ಲ.
ಇದೀಗ ಗೋಲ್ಡ್ ಸುರೇಶ್ ಅವರು ಸ್ಪಷ್ಟವಾಗಿ ಯಾವ ಕಾರಣಕ್ಕೆ ಮನೆಯಿಂದ ಹೊರಬಿದ್ದಿದ್ದಾರೆ ಎಂದು ತಿಳಿದುಬಂದಿಲ್ಲ. ಫಿನಾಲೆ ವೀಕ್ ಸಮೀಪವಾಗುತ್ತಿರುವ ಹಿನ್ನೆಲೆಯಲ್ಲಿ ಇನ್ನು ಅವರು ಬಿಗ್ ಬಾಸ್‌ಗೆ ಎಂಟ್ರಿ ಕೊಡೋದು ಕೂಡ ಕಷ್ಟ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಮತ್ತೆ ಬಂದಲ್ಲಿ ಅವರ ಅಭಿಮಾನಿಗಳಿಗೆ ಸಂತಸ ತರೋದಂತು ಗ್ಯಾರಂಟಿ.