ಕೆ ಎಲ್ ರಾಹುಲ್ ಹೆಸರೆತ್ತುತ್ತಿದ್ದಂತೆ ಕೆರಳಿ ಕೆಂಡವಾದ ಗೌತಮ್ ಗಂಭೀರ್ !ಟೀಂ ಇಂಡಿಯಾ ಪ್ಲೇಯಿಂಗ್ 11 ಇದೇ ಎಂದ ಕೋಚ್
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 3 ಟೆಸ್ಟ್ ಸರಣಿಯ ಎರಡನೇ ಪಂದ್ಯ ಗುರುವಾರ ಪುಣೆಯಲ್ಲಿ ಆರಂಭವಾಗಲಿದೆ.ಈ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾದ ಪ್ಲೇಯಿಂಗ್-11 ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ದೊಡ್ಡ ಇನ್ನಿಂಗ್ಸ್ ಆಡುವಲ್ಲಿ ವಿಫಲರಾಗಿರುವ ಕೆಎಲ್ ರಾಹುಲ್ ಅವರನ್ನು ತಂಡದಿಂದ ಕೈಬಿಡಬಹುದು ಎನ್ನಲಾಗುತ್ತಿದೆ.ಇವರ ಬದಲು ಕಳೆದ ಪಂದ್ಯದಲ್ಲಿ 150 ರನ್ ಗಳ ಇನಿಂಗ್ಸ್ ಆಡಿದ ಸರ್ಫರಾಜ್ ಖಾನ್ ಗೆ ಅವಕಾಶ ಸಿಗಲಿದೆ.
ಶುಭಮನ್ ಗಿಲ್ ವಾಪಸಾತಿಯಿಂದಾಗಿ ರಾಹುಲ್ ಮತ್ತು ಸರ್ಫರಾಜ್ ಅವರಲ್ಲಿ ಒಬ್ಬರು ಹೊರಗುಳಿಯಬೇಕಾಗಬಹುದು ಎನ್ನುವ ಮಾತು ಕೇಳಿ ಬರುತ್ತಿದೆ. ರಾಹುಲ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.
ರಾಹುಲ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಗಂಭೀರ್, "ಸಾಮಾಜಿಕ ಮಾಧ್ಯಮವು ಪ್ಲೇಯಿಂಗ್-11 ಅನ್ನು ನಿರ್ಧರಿಸುವುದಿಲ್ಲ. ಸಾಮಾಜಿಕ ಮಾಧ್ಯಮ ಅಥವಾ ತಜ್ಞರು ಏನು ಯೋಚಿಸುತ್ತಾರೆ ಎಂಬುದು ಮುಖ್ಯವಲ್ಲ ಎಂದು ಕೋಪದ ದಾಟಿಯಲ್ಲಿಯೇ ಉತ್ತರಿಸಿದ್ದಾರೆ.
ತಮ್ಮ ಈ ಹೇಳಿಕೆ ಮೂಲಕ ಮುಂದಿನ ಪಂದ್ಯದಲ್ಲಿ ರಾಹುಲ್‌ಗೆ ಮತ್ತೊಮ್ಮೆ ಆಡುವ ಅವಕಾಶ ಸಿಗಲಿದೆ ಎಂದು ಗಂಭೀರ್ ಸೂಚಿಸಿದ್ದಾರೆ.
ಕಾನ್ಪುರದ ಕಠಿಣ ಪಿಚ್‌ನಲ್ಲಿ ರಾಹುಲ್ ಉತ್ತಮ ಇನ್ನಿಂಗ್ಸ್ ಆಡಿದ್ದಾರೆ. ಟೀಮ್ ಮ್ಯಾನೇಜ್‌ಮೆಂಟ್ ರಾಹುಲ್‌ಗೆ ಬೆಂಬಲ ನೀಡುತ್ತದೆ. ವಿಕೆಟ್‌ಕೀಪರ್ ರಿಷಬ್ ಪಂತ್ ಅವರು ಸಂಪೂರ್ಣವಾಗಿ ಫಿಟ್ ಆಗಿದ್ದು, ಪಂದ್ಯದಲ್ಲಿ ಆಡುತ್ತಾರೆ ಎಂದು ಗಂಭೀರ್ ದೃಢಪಡಿಸಿದರು.
ನಾಯಕ ರೋಹಿತ್ ಶರ್ಮಾ ಜತೆಗೆ ಟೀಮ್ ಮ್ಯಾನೇಜ್ ಮೆಂಟ್ ಕೂಡಾ ರಾಹುಲ್ ಜೊತೆಗಿದೆ ಎಂಬುದು ಗಂಭೀರ್ ಹೇಳಿಕೆಯಿಂದ ಸ್ಪಷ್ಟವಾಗಿದೆ. ಅಂದರೆ ಕೆಎಲ್ ರಾಹುಲ್ ಗೆ ಇನ್ನೂ ಹೆಚ್ಚಿನ ಅವಕಾಶಗಳು ಸಿಗಲಿವೆ.