ಎಂ.ಎಸ್.ಧೋನಿಯಂತೆ ಬಿಗ್​ ಶಾಕ್ ಕೊಡ್ತಾರಾ ರೋಹಿತ್‌ ಶರ್ಮಾ? ಆಸ್ಟ್ರೇಲಿಯಾದಲ್ಲೇ ಅಂತ್ಯವಾಗುತ್ತಾ ʼಹಿಟ್​ ಮ್ಯಾನ್ʼ ಕರಿಯರ್?!!

Tue, 17 Dec 2024-8:30 pm,

2014ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಡ್ರಾಮಾ ಮತ್ತೆ ಪುನರಾವರ್ತನೆಯಾಗಬಹುದು ಅಂತಾ ಹೇಳಲಾಗುತ್ತಿದೆ. ನಾಯಕನಾಗಿ ಸತತ 5 ಟೆಸ್ಟ್​ಗಳಲ್ಲಿ ಹೀನಾಯ ಸೋಲು ಕಂಡಿರುವ ರೋಹಿತ್ ಶರ್ಮಾಗೆ ಸಂಕಷ್ಟ ಎದುರಾಗಿದೆ. ಮೂಲಗಳ ಪ್ರಕಾರ, ಹಿಟ್​ಮ್ಯಾನ್ ರೋಹಿತ್‌ ಶರ್ಮಾ ಕೂಡ ಎಂ.ಎಸ್.ಧೋನಿಯ‌ಂತೆ ಬಾರ್ಡರ್‌-ಗವಾಸ್ಕರ್ ಸರಣಿಯ ಮಧ್ಯದಲ್ಲಿ ಟೆಸ್ಟ್ ನಾಯಕತ್ವಕ್ಕೆ ರಾಜೀನಾಮೆ ಘೋಷಿಸಬಹುದು ಎನ್ನಲಾಗುತ್ತಿದೆ.

2014ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಕೂಲ್‌ ಕ್ಯಾಪ್ಟನ್‌ ಖ್ಯಾತಿಯ ಎಂ.ಎಸ್.ಧೋನಿ ಸಹ ನಾಯಕತ್ವಕ್ಕೆ ಗುಡ್‌ ಬೈ ಹೇಳಿದ್ದರು. ತಮ್ಮ ತಂತ್ರಗಾರಿಕೆ ವರ್ಕ್‌ ಆಗದಿದ್ದಾಗ ನಾಯಕನಾಗಿ ಉಳಿಯುವುದರಲ್ಲಿ ಯಾವುದೇ ಅರ್ಥವಿಲ್ಲವೆಂದು ನಾಯಕತ್ವದ ಜೊತೆಗೆ ಟೆಸ್ಟ್ ಮಾದರಿಗೂ ಅವರು ನಿವೃತ್ತಿ ಘೋಷಿಸಿದ್ದರು. ನಂತರ ವಿರಾಟ್ ಕೊಹ್ಲಿ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಇದೀಗ 10 ವರ್ಷಗಳ ನಂತರ 2014ರ ಸಂಗತಿಯೇ ಮತ್ತೆ ಮರುಕಳಿಸುವ ಸ್ಥಿತಿ ಬಂದಿದೆ. ಮೂಲಗಳ ಪ್ರಕಾರ, ರೋಹಿತ್ ಶರ್ಮಾ ಈ ಟೆಸ್ಟ್​ ಬಳಿಕ ನಾಯಕ ಸ್ಥಾನಕ್ಕೆ ಗುಡ್‌ ಬೈ ಹೇಳಬಹುದು ಎನ್ನಲಾಗಿದೆ.

ಅಡಿಲೇಡ್​ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯ 2ನೇ ಟೆಸ್ಟ್​ನಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಸೋಲು ಕಂಡಿದೆ. ಇದಕ್ಕೂ ಮುನ್ನ ಪರ್ತ್​ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ನಾಯಕತ್ವದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿತ್ತು. ಅಡಿಲೇಡ್​ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್​ನಲ್ಲಿ ಸೋತ ನಂತರ, ರೋಹಿತ್ ನಾಯಕತ್ವದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಪ್ರತಿ ಟೆಸ್ಟ್​ ಸೋಲಿನೊಂದಿಗೆ ರೋಹಿತ್ ಅವರ ನಾಯಕತ್ವ ಕುರಿತು ಟೀಕೆ ವ್ಯಕ್ತವಾಗುತ್ತಿದೆ.

ರೋಹಿತ್ ಶರ್ಮಾ ನಾಯಕತ್ವದಲ್ಲಿ ಅಡಿಲೇಡ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್​ನಲ್ಲಿ ಸೋತ ನಂತರ ಟೀಂ ಇಂಡಿಯಾ ಬ್ರಿಸ್ಬೇನ್​ನಲ್ಲೂ ಸಂದಿಗ್ಧ ಪರಿಸ್ಥಿತಿ ಎದುರಿಸಿತ್ತಿದೆ. ಸತತ 4 ಟೆಸ್ಟ್ ಪಂದ್ಯಗಳನ್ನು ಸೋತ ಮೂರನೇ ಭಾರತೀಯ ನಾಯಕನೆಂಬ ಕೆಟ್ಟ ದಾಖಲೆಗೆ ರೋಹಿತ್ ಪಾತ್ರರಾಗಿದ್ದಾರೆ. ಮನ್ಸೂರ್ ಅಲಿ ಖಾನ್ ಪಟೌಡಿ 1967-68ರಲ್ಲಿ ನಾಯಕನಾಗಿದ್ದಾಗ ಸತತ 6 ಟೆಸ್ಟ್ ಪಂದ್ಯಗಳನ್ನು ಸೋತ ಭಾರತದ ನಾಯಕನೆಂಬ ಕೆಟ್ಟ ದಾಖಲೆಯನ್ನು ಹೊಂದಿದ್ದಾರೆ.

ಸಚಿನ್ ತೆಂಡೂಲ್ಕರ್ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಸಚಿನ್ 1999-2000ರಲ್ಲಿ ಭಾರತದ ನಾಯಕನಾಗಿ ಸತತ ಐದು ಟೆಸ್ಟ್ ಪಂದ್ಯಗಳನ್ನು ಸೋತಿದ್ದರು. ದತ್ತಾ ಗಾಯಕ್ವಾಡ್ (1959), ಎಂ.ಎಸ್.ಧೋನಿ (2011 ಮತ್ತು 2014), ವಿರಾಟ್ ಕೊಹ್ಲಿ (2020-21) ಮತ್ತು ರೋಹಿತ್ ಶರ್ಮಾ (2024) ಸತತ 4 ಸೋಲುಗಳೊಂದಿಗೆ ಜಂಟಿ ಮೂರನೇ ಸ್ಥಾನದಲ್ಲಿದ್ದಾರೆ. ಒಂದು ವೇಳೆ ರೋಹಿತ್ ಬ್ರಿಸ್ಬೇನ್​ ಟೆಸ್ಟ್​ನಲ್ಲಿ ಡ್ರಾ ಸಾಧಿಸದೇ ಹೋದರೆ ಸಚಿನ್​ ಜೊತೆ 5 ಪಂದ್ಯಗಳ ಸೋತ ನಾಯಕನೆಂಬ ಕೆಟ್ಟ ದಾಖಲೆಗೆ ಸೇರಲಿದ್ದಾರೆ.

ಬ್ರಿಸ್ಬೇನ್​ ಟೆಸ್ಟ್​ನಲ್ಲಿ ಪ್ಯಾಟ್ ಕಮಿನ್ಸ್ ಓವರ್​ನಲ್ಲಿ ಔಟಾದ ರೋಹಿತ್‌ ಶರ್ಮಾ​ ಪೆವಿಲಿಯನ್ ಹಾದಿಯಲ್ಲಿ ಸಾಗುತ್ತಿರುವಾಗ ಅವರ ಒಂದು ಅಪರೂಪದ ನಡೆಯು ಅಭಿಮಾನಿಗಳನ್ನು ಗೊಂದಲಕ್ಕೀಡು ಮಾಡಿದೆ. ಹಿಟ್‌ಮ್ಯಾನ್‌ ತಮ್ಮ ಗ್ಲೌಸ್​ಗಳನ್ನು ಡಗ್‌ಔಟ್‌ನ ಹೊರಗೆ ಅಂದರೆ ಜಾಹೀರಾತು ಫಲಕದ ಹಿಂದೆ ಎಸೆದು ಹೋದರು. ರೋಹಿತ್ ಶರ್ಮಾರ ಈ ನಡೆ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸೌಂಡ್‌ ಮಾಡುತ್ತಿದೆ. ಅನೇಕರು ರೋಹಿತ್​ ನಿವೃತ್ತಿಯ ಸೂಚನೆ ಕೊಟ್ಟಿದ್ದಾರೆ ಅಂತಾ ಕಾಮೆಂಟ್‌ ಮಾಡುತ್ತಿದ್ದಾರೆ.

Rohit Sharma left his gloves in front of the dugout. Signs of retirement? pic.twitter.com/7aeC9qbvhT

— Div🦁 (@div_yumm) December 17, 2024

ZEENEWS TRENDING STORIES

By continuing to use the site, you agree to the use of cookies. You can find out more by Tapping this link