ಸ್ಯಾಂಡಲ್ ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ ನಿಜವಾದ ವಯಸ್ಸೆಷ್ಟು ಗೊತ್ತಾ? ಅವರು ರಾಜಕೀಯಕ್ಕೆ ಎಂಟ್ರಿಕೊಡ್ತಾರಾ?

Mon, 11 Nov 2024-10:40 am,

ರಾಧಿಕಾ ಕುಮಾರಸ್ವಾಮಿ ತಮ್ಮ ಮಾಸದ ಸೌಂದರ್ಯದಿಂದ ‘ಸ್ಯಾಂಡಲ್ ವುಡ್ ಸ್ವೀಟಿ’ ಮತ್ತು ‘ಸಂತೂರ್ ಮಮ್ಮಿ’ ಎಂದೇ ಹೆಸರುವಾಸಿಯಾಗಿದ್ದಾರೆ. ನವೆಂಬರ್ 11 ರಾಧಿಕಾ ಕುಮಾರಸ್ವಾಮಿ ಅವರ ಹುಟ್ಟುಹಬ್ಬ. ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಅವರಿಗೆ ಇಂದು ಚಿತ್ರರಂಗದ ಗಣ್ಯರು, ಅಭಿಮಾನಿಗಳು ಸೇರಿದಂತೆ ಹಲವಾರು ಶುಭಾಶಯ ಕೋರಿದ್ದಾರೆ.

ರಾಧಿಕಾ ಕುಮಾರಸ್ವಾಮಿ ಮೂಲತಃ ತುಳುನಾಡಿನವರು. 2002ರಲ್ಲಿ ‘ನಿನಗಾಗಿ’ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು. ನಂತರ ಕನ್ನಡದ ಬಹುತೇಕ ಸ್ಟಾರ್ ನಟರಿಗೆ ನಾಯಕಿಯಾಗಿ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡರು.

ರಾಧಿಕಾ ಕುಮಾರಸ್ವಾಮಿ ಅವರು ತವರಿಗೆ ಬಾ ತಂಗಿ, ರಿಷಿ, ಮಂಡ್ಯ, ಆಟೋ ಶಂಕರ್, ಅಣ್ಣ ತಂಗಿ ಮತ್ತಿತರ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ನಟನೆ ಬಳಿಕ ಈಗ ನಿರ್ಮಾಪಕಿಯಾಗಿಯೂ ರಾಧಿಕಾ ಕುಮಾರಸ್ವಾಮಿ ಗಮನ ಸೆಳೆದಿದ್ದಾರೆ. 

ಚಿತ್ರರಂಗದಲ್ಲಿ ಮಾತ್ರವಲ್ಲದೆ ರಾಧಿಕಾ ಕುಮಾರಸ್ವಾಮಿ ಅವರ ಲವ್ ಲೈಫ್ ಹಾಗೂ ಮದುವೆ ವಿಚಾರಗಳೂ ಭಾರೀ ಸದ್ದು ಮಾಡಿದ್ದವು. ರಾಧಿಕಾ ಕುಮಾರಸ್ವಾಮಿ ಅವರ ಹೆಸರು ಪ್ರಮುಖ ರಾಜಕಾರಣಿಯ ಜೊತೆ ತಳುಕುಹಾಕಿಕೊಂಡು ಸಂಚಲನವನ್ನು ಸೃಷ್ಟಿಮಾಡಿತ್ತು.

2002ರಲ್ಲಿ  ರಾಧಿಕಾ ಕುಮಾರಸ್ವಾಮಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಾಗ 9ನೇ ತರಗತಿ ಓದುತ್ತಿದ್ದರು, ಕೇವಲ 14 ವರ್ಷ. ಆದರೆ 22 ವರ್ಷಗಳ ಅವಧಿಯಲ್ಲಿ 30ಕ್ಕೂ ಹೆಚ್ಚು ಸಿನಿಮಾ ಮಾಡಿದ ಮೇಲೂ ಈಗ ಸ್ವೀಟ್ ಸಿಕ್ಸ್ಟಿನ್ ಎನ್ನುವ ರೀತಿಯಲ್ಲಿ ಕಾಣುತ್ತಾರೆ. 

2007ರ ಬಳಿಕ ಸ್ವಲ್ಪ ಗ್ಯಾಪ್ ಪಡೆದುಕೊಂಡ ರಾಧಿಕಾ ಕುಮಾರಸ್ವಾಮಿ ಅವರು 2012ರಲ್ಲಿ ಸ್ವತಃ ‘ಲಕ್ಕಿ’ ಎಂಬ ಸಿನಿಮಾವನ್ನು ನಿರ್ಮಿಸಿ ಆ ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡಿದರು. ‘ಲಕ್ಕಿ’ ಅವರಿಗೆ ನಾಯಕಿಯಾಗಿ ಮತ್ತು ನಿರ್ಮಾಪಕಿಯಾಗಿ ಯಶಸ್ಸು ತಂದುಕೊಟ್ಟಿತು.

ರಾಧಿಕಾ ಕುಮಾರಸ್ವಾಮಿ ‘ದಮಯಂತಿ’ ಎಂಬ ವಿಭಿನ್ನ ಸಿನಿಮಾದಲ್ಲಿ ನಟನೆ ಮತ್ತು ನಿರ್ಮಾಣ ಎರಡೂ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಸೈ ಎನಿಸಿಕೊಂಡರು. ಇದೀಗ ‘ಅಜಾಗ್ರತಾ’ ಎಂಬ ಸಿನಿಮಾದಲ್ಲಿ ಅಭಿನಯಿಸಿದ್ದು ಅದು ಏಳು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

ರಾಧಿಕಾ ಕುಮಾರಸ್ವಾಮಿ ಅಘೋರಿ ಹಾಗೂ ದೇವಿ ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ‘ಭೈರಾದೇವಿ’ ಸಿನಿಮಾ ಬಿಡುಗಡೆಯಾಗಿದ್ದು ಚಿತ್ರದ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿತ್ತು.

ಸದ್ಯ ರಾಧಿಕಾ ಕುಮಾರಸ್ವಾಮಿ ಪುತ್ರಿ ಶಮಿಕಾ ಕುಮಾರಸ್ವಾಮಿ ಜೊತೆ ಮಂಗಳೂರಿನಲ್ಲಿ ನೆಲೆಸಿದ್ದಾರೆ. ರಾಜಕೀಯಕ್ಕೆ ಬರುವ ಕುರಿತಾದ ಸುದ್ದಿಗಳನ್ನು ನಿರಾಕರಿಸಿರುವ ರಾಧಿಕಾ ಕುಮಾರಸ್ವಾಮಿ ಮಗಳು ಚಿತ್ರರಂಗಕ್ಕೆ ಬರುವ ವಿಷಯವನ್ನೂ ಬಿಟ್ಟುಕೊಟ್ಟಿಲ್ಲ. ಜೊತೆಗೆ ತಮ್ಮ ವಯಸ್ಸಿನ ಗುಟ್ಟನ್ನೂ ಕೂಡ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link