2,809 ವಿಕೆಟ್, 126 ಶತಕ... ತನ್ನ 50 ವರ್ಷದಲ್ಲೂ ಕ್ಯಾಪ್ಟನ್ ಆಗಿದ್ದ ಕ್ರಿಕೆಟಿಗ ಈತ ಇಂದು ವಿಶ್ವಕ್ರಿಕೆಟ್ ಲೋಕಕ್ಕೇ ʼಗಾಡ್ ಫಾದರ್ʼ! ಆ ದಿಗ್ಗಜ ಯಾರೆಂದು ಗೊತ್ತಾಯ್ತಾ?
ಕ್ರಿಕೆಟ್‌ನಲ್ಲಿ ಇಂತಿಷ್ಟೇ ವಯಸ್ಸಿನಲ್ಲಿ ನಿವೃತ್ತಿ ಹೊಂದಬೇಕು ಎಂಬ ನಿಯಮವಿಲ್ಲ. ಅನೇಕರು ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಒಂದೆರಡು ವರ್ಷದಲ್ಲೇ ನಿವೃತ್ತಿ ಪಡೆಯುತ್ತಾರೆ. ಅದಕ್ಕೆ ವೈಯಕ್ತಿಕ ಕಾರಣಗಳೂ ಇರಬಹುದು ಅಥವಾ ಅವಕಾಶಗಳ ಕೊರತೆಯೂ ಇರಬಹುದು. ಆದರೆ ಇನ್ನೂ ಕೆಲ ಕ್ರಿಕೆಟಿಗರು 40-50 ವರ್ಷವಾದರೂ ಈ ಕ್ರೀಡೆಗಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.
ಅಂದಹಾಗೆ ಓರ್ವ ದಿಗ್ಗಜ, ತನ್ನ 50 ವರ್ಷ ವಯಸ್ಸಿನಲ್ಲಿ ಕ್ರಿಕೆಟ್ ತಂಡವೊಂದರ ಕ್ಯಾಪ್ಟನ್ಸಿ ವಹಿಸಿ ಕ್ರಿಕೆಟ್ ಲೋಕಕ್ಕೇ ಗಾಡ್ ಫಾದರ್ ಎನಿಸಿಕೊಂಡಿದ್ದಾರೆ. ಆ ಕ್ರಿಕೆಟಿಗನ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.
ವಿಲಿಯಂ ಗಿಲ್ಬರ್ಟ್ ಗ್ರೇಸ್ ವಿಕ್ಟೋರಿಯನ್ ಇಂಗ್ಲೆಂಡ್‌ನ ಶ್ರೇಷ್ಠ ಕ್ರಿಕೆಟಿಗರಾಗಿದ್ದರು. ಹುಟ್ಟಿದ್ದು ಜುಲೈ 18, 1848 ಡೌನ್‌ನೆಂಡ್, ಗ್ಲೌಸೆಸ್ಟರ್‌ಶೈರ್ ಎಂಬಲ್ಲಿ.
ವಿಲಿಯಂ ಅವರ ವೃತ್ತಿಜೀವನದಲ್ಲಿ (1865–1908) ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ, 54,896 ರನ್ ಗಳಿಸಿದ್ದು ಅದರಲ್ಲಿ, 126 ಶತಕಗಳು ಸೇರಿವೆ. ಜೊತೆಗೆ ಬೌಲರ್ ಆಗಿ 2,809 ವಿಕೆಟ್‌ಗಳನ್ನು ಪಡೆದಿದ್ದಾರೆ.
ಇನ್ನು ಕ್ರಿಕೆಟ್ ಆಟ ಕಂಡ ಮೊದಲ ಸೂಪರ್‌ಸ್ಟಾರ್ ಡಾ. ವಿಲಿಯಂ ಗಿಲ್ಬರ್ಟ್ ಗ್ರೇಸ್. ಅವರು 50 ನೇ ವಯಸ್ಸಿನಲ್ಲಿಯೂ ಇಂಗ್ಲೆಂಡ್ ತಂಡದ ನಾಯಕರಾಗಿದ್ದರು. ಅಷ್ಟೇ ಅಲ್ಲದೆ, ಹಿರಿಯ ವಯಸ್ಸಿನಲ್ಲಿ ತಂಡವೊಂದರ ನಾಯಕತ್ವ ವಹಿಸಿದ್ದ ಆಟಗಾರ ಎಂಬ ಹೆಗ್ಗಳಿಕೆ ಇವರ ಹೆಸರಲ್ಲಿದೆ.