IPL 2024: ಪ್ಲೇಆಫ್ ಹಂತದಲ್ಲಿ ಸೋಲುಂಡು ಹೊರಬಿದ್ದ RCB ತಂಡಕ್ಕೆ ಸಿಕ್ಕ ಬಹುಮಾನ ಮೊತ್ತ ಎಷ್ಟು ಕೋಟಿ ಗೊತ್ತಾ?
ಐಪಿಎಲ್ 2024ರ ಅಂತಿಮ ಪಂದ್ಯವು ಭಾನುವಾರ, ಮೇ 26 ರಂದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆಯಲಿದೆ. ಕ್ವಾಲಿಫೈಯರ್ 1 ರಲ್ಲಿ ಹೈದರಾಬಾದ್ ಅನ್ನು ಸೋಲಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ ಫೈನಲ್ ತಲುಪಿದೆ.
ಸ್ಪೋರ್ಟ್ಸ್ ಸ್ಟಾರ್ ಪ್ರಕಾರ, ವಿಜೇತ ತಂಡವು ಐಪಿಎಲ್ 2024ರಲ್ಲಿ 20 ಕೋಟಿ ರೂ. ಮತ್ತು ರನ್ನರ್ ಅಪ್ ತಂಡ 13 ಕೋಟಿ ರೂಪಾಯಿ ಬಹುಮಾನ ಪಡೆಯಲಿದೆ.
ಐಪಿಎಲ್ 2023 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಮೊದಲ ಸೀಸನ್’ಗೆ ಹೋಲಿಸಿದರೆ, ಐಪಿಎಲ್ ವಿಜೇತ ತಂಡಗಳು ಪಡೆಯುವ ಬಹುಮಾನದ ಮೊತ್ತವು ಗಮನಾರ್ಹವಾಗಿ ಹೆಚ್ಚಾಗಿದೆ.
ಐಪಿಎಲ್ 2024 ರ ಒಟ್ಟು ಬಹುಮಾನದ ಮೊತ್ತ ಸುಮಾರು 46.5 ಕೋಟಿ. ವಿಜೇತರು ಮತ್ತು ರನ್ನರ್ ಅಪ್ ಮಾತ್ರವಲ್ಲದೆ, ಪ್ಲೇ ಆಫ್‌ಗೆ ಅರ್ಹತೆ ಪಡೆದ ತಂಡಗಳಿಗೂ ಬಹುಮಾನ ಮೊತ್ತ ಭರ್ಜರಿಯಾಗಿ ಸಿಗಲಿದೆ.
ಈ ಬಾರಿಯ ಟೂರ್ನಿಯಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ತಂಡಕ್ಕೆ 7 ಕೋಟಿ ರೂ., ನಾಲ್ಕನೇ ಸ್ಥಾನದಲ್ಲಿರುವ ತಂಡಕ್ಕೆ ಅಂದರೆ RCB 6.5 ಕೋಟಿ ರೂ. ಬಹುಮಾನ ಮೊತ್ತ ಪಡೆಯಲಿದೆ.
ಐಪಿಎಲ್ 2024 ರಲ್ಲಿ ವಿಜೇತ ತಂಡಗಳೊಂದಿಗೆ ಹೆಚ್ಚು ರನ್ ಗಳಿಸಿದ ಆಟಗಾರನಿಗೆ ಆರೆಂಜ್ ಕ್ಯಾಪ್ ನೀಡಲಾಗುತ್ತದೆ. ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್’ಗೆ ಪರ್ಪಲ್ ಕ್ಯಾಪ್ ನೀಡಲಾಗುತ್ತದೆ. ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ಗೆದ್ದ ಆಟಗಾರರಿಗೆ ತಲಾ 15 ಲಕ್ಷ ರೂಪಾಯಿ ಬಹುಮಾನ ಸಿಗಲಿದೆ.