Winter Foods For Cold Relief: ಶೀತದಿಂದ ಪರಿಹಾರಕ್ಕಾಗಿ ಚಳಿಗಾಲದಲ್ಲಿ ನಿತ್ಯ ಈ 5 ಆಹಾರ ಸೇವಿಸಿ

Fri, 12 Jan 2024-12:20 pm,

ಚಳಿಗಾಲದ ಡಯಟ್:  ಚಳಿಗಾಲದಲ್ಲಿ ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆಯಿಂದಾಗಿ ರೋಗಗಳ ಅಪಾಯ ಹೆಚ್ಚಾಗಿರುತ್ತದೆ. ಅದರಲ್ಲೂ ಸ್ವಲ್ಪ ಶೀತ ಜಾಸ್ತಿಯಾದರೂ ಇದರಿಂದ ರೋಗಗಳ ಅಪಾಯವೂ ಹೆಚ್ಚಾಗುತ್ತದೆ. ಇದರಿಂದ ರಕ್ಷಣೆ ಪಡೆಯಲು ನಿಮ್ಮ ಆಹಾರ ಪದ್ದತಿಯ ಬಗ್ಗೆಯೂ ನಿಗಾವಹಿಸುವುದು ಬಹಳ ಅಗತ್ಯ. ಚಳಿಗಾಲದಲ್ಲಿ ಕೆಲವು ಆಹಾರಗಳ ಸೇವನೆಯು ದೇಹವನ್ನು ಬೆಚ್ಚಗಿಡುವುದರ ಜೊತೆಗೆ ಅದು ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ. ಅಂತಹ 5 ಪ್ರಮುಖ ಆಹಾರಗಳು ಯಾವುವು ಎಂದು ತಿಳಿಯೋಣ... 

ನೆನೆಸಿದ ಬಾದಾಮಿ:  ಪ್ರತಿದಿನ ನಾಲ್ಕೈದು ನೆನೆಸಿಟ್ಟ ಬಾದಾಮಿ ತಿನ್ನುವುದರಿಂದ ಮೆದುಳು ಚುರುಕಾಗುವುದರ ಜೊತೆಗೆ ಇದು ರೋಗನಿರೋಧಕ ಶಕ್ತಿಯನ್ನು ಕೂಡ ವೃದ್ಧಿಸುತ್ತದೆ. 

ಜೇನುತುಪ್ಪ ಬೆರೆಸಿದ ಉಗುರು ಬೆಚ್ಚಗಿನ ನೀರು:  ಬೆಳಿಗ್ಗೆ ಜೇನುತುಪ್ಪ ಬೆರೆಸಿದ ಉಗುರು ಬೆಚ್ಚಗಿನ ನೀರು ಕುಡಿಯುವುದರಿಂದ ತೂಕ ಇಳಿಕೆಗೆ ಸಹಾಯಕ ಎಂದು ನಿಮಗೆ ತಿಳಿದಿರಬಹುದು. ಆದರೆ, ಈ ಮ್ಯಾಜಿಕಲ್ ಡ್ರಿಂಕ್ ನಂನ್ಮ ದೇಹವನ್ನು ಅನೇಕ ಕಾಯಿಲೆಗಳಿಂದಲೂ ರಕ್ಷಿಸುತ್ತದೆ. 

ನೆನೆಸಿದ ವಾಲ್ನಟ್ಸ್:  ನೆನೆಸಿದ ವಾಲ್ನಟ್ಸ್ ಜೀವಸತ್ವಗಳು, ಖನಿಜಗಳು, ಪೊಟ್ಯಾಸಿಯಮ್ ಮತ್ತು ಫೈಬರ್ ನಿಂದ ಸಮೃದ್ಧವಾಗಿರುತ್ತದೆ. ಚಳಿ ವಾತಾವರಣದಲ್ಲಿ ಪ್ರತಿದಿನ ಬೆಳಿಗ್ಗೆ ಸೇವಿಸುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಇದು ಸಹಕಾರಿಯಾಗಲಿದೆ. 

ಪರಂಗಿಹಣ್ಣು:  ಸಾಮಾನ್ಯವಾಗಿ ಶೀತ ವಾತಾವರಣದಲ್ಲಿ ಹಣ್ಣು ತಿನ್ನುವುದರಿಂದ ಶೀತ, ನೆಗಡಿಯಾಗಬಹುದು ಎಂಬ ಭಯದಿಂದ ಕೆಲವರು ಹಣ್ಣುಗಳ ಸೇವನೆ ತಪ್ಪಿಸುತ್ತಾರೆ. ಆದರೆ, ಪರಂಗಿಹಣ್ಣು ಸ್ವಭಾವತಃ ದೇಹವನ್ನು ಬೆಚ್ಚಗಿರಲು ಸಹಕಾರಿಯಾದ ಹಣ್ಣು. ಪ್ರತಿದಿನ ನಿರ್ದಿಷ್ಟ ಪ್ರಮಾಣದಲ್ಲಿ ಪರಂಗಿಹಣ್ಣನ್ನು ಸೇವಿಸುವುದರಿಂದ ಉದರ ಬಾಧೆಗಳಿಂದ ಪರಿಹಾರ ಪಡೆಯಬಹುದು. 

ಓಟ್ಸ್:  ಸಾಮಾನ್ಯವಾಗಿ ತೂಕ ಇಳಿಸಿಕೊಳ್ಳಲು ಇಚ್ಛಿಸುವ ಜನರು ಮುಂಜಾನೆ ಓಟ್ಸ್ ಸೇವಿಸುತ್ತಾರೆ. ಓಟ್ಸ್ ಕಡಿಮೆ ಕ್ಯಾಲೋರಿ ಮತ್ತು ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಆಹಾರವಾಗಿರುವುದರಿಂದ ಬೆಳಿಗ್ಗೆ ಹೊತ್ತು ಇದನ್ನು ತಿನ್ನುವುದರಿಂದ ಚಳಿಗಾಲದಲ್ಲಿ ಅತಿಯಾಗಿ ತಿನ್ನುವುದನ್ನು ತಪ್ಪಿಸಬಹುದು. 

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link