Happy Birth Day Prakash Rai: ಪ್ರಕಾಶ್ ರೈ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು
Wanted (2009): ಈ ಚಿತ್ರದಲ್ಲಿ ಪ್ರಕಾಶ್ ರೈ ಮುಂಬೈ ಭೂಗತ ಪ್ರಪಂಚವನ್ನು ತನ್ನ ಕೈವಶ ಮಾಡಿಕೊಳ್ಳಲು ನಿರ್ಧರಿಸಿರುವ ನಿರ್ದಯಿ ಡಾನ್ ಗನಿ ಭಾಯ್ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದ ನಾಯಕ ನಟ ಸಲ್ಮಾನ್ ಖಾನ್ ಗೆ ಓರ್ವ ಅಸಾಧಾರಣ ಎದುರಾಳಿಯ ಪಾತ್ರದಲ್ಲಿ ಪ್ರಕಾಶ್ ರೈ ಅವರ ಅಭಿನಯ ಅದ್ಭುತವಾಗಿದೆ.
Singham (2011): ಅಜಯ್ ದೇವ್ಗನ್ ನಾಯಕ ನಟನಾಗಿ ಅಭಿನಯಿಸಿರುವ ಈ ಸಾಹಸ ಭರಿತ ಸಿನಿಮಾದಲ್ಲಿ ಪ್ರಕಾಶ್ ರೈ ಓರ್ವ ಭ್ರಷ್ಟಾಚಾರಿ ರಾಜಕೀಯ ನಾಯಕ ಜೈಕಾಂತ್ ಶಿಖರೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿನ ಅವರ ಪವರ್ ಪ್ಯಾಕ್ದ್ ಪರ್ಫಾರ್ಮೆನ್ಸ್ ಬಾಲಿವುಡ್ ನ ಇತಿಹಾಸದಲ್ಲಿಯೇ ಅವರನ್ನು ಮತ್ತೊರ್ವ ಅವಿಸ್ಮರಣೀಯ ಖಳನಾಯಕನ ಪಟ್ಟಿಗೆ ಸೇರಿಸಿದೆ.
Dabangg 2 (2012): ಖ್ಯಾತ ಬಾಲೀವುಡ್ ನಟ ಸಲ್ಮಾನ್ ಖಾನ್ ಅಭಿನಯಿಸಿರುವ 'ದಬಂಗ್' ಚಿತ್ರದ ಎರಡನೇ ಅವತರಿಣಿಕೆ ಇದಾಗಿದೆ. ಈ ಚಿತ್ರದಲ್ಲಿಯೂ ಕೂಡ ಪ್ರಕಾಶ್ ರೈ ಅವರು ಓರ್ವ ಪವರ್ಫುಲ್ ರಾಜಕಾರಣಿ ಠಾಕೂರ್ ಬಚ್ಚಾ ಸಿಂಗ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರ ಬೆದರಿಕೆಯೊಡ್ಡುವ ಮತ್ತು ಸಾಕಷ್ಟು ಮನರಂಜನೆಯನ್ನು ನೀಡುವ ಅಭಿನಯ ಚಿತ್ರ ಬಿಡುಗಡೆಯಾದ ಬಳಿಕ ಅವರನ್ನು ಚಿತ್ರದ ಪ್ರಮುಖ ಹೈಲೈಟ್ ಗಳ ಪಟ್ಟಿಯನ್ನು ಸೇರಿಸಿದೆ.
Bhaag Milkha Bhaag (2013): ಭಾರತದ ದಂತಕತೆ ಎಂದೇ ಬಿಂಬಿಸಲಾಗುವ ಭಾರತೀಯ ಅಥ್ಲೀಟ್ ಮಿಲ್ಖಾಸಿಂಗ್ ಅವರ ಜೀವನಾಧಾರಿತ ಈ ಚಿತ್ರದಲ್ಲಿ ಒಂದೆಡೆ ಫರ್ಹಾನ್ ಅಖ್ತರ್ ಚಿತ್ರದ ಪ್ರಮುಖ ಪಾತ್ರ ಮಿಲ್ಖಾ ಸಿಂಗ್ ಪಾತ್ರಕ್ಕೆ ಜೀವ ತುಂಬಿದರೆ, ಇನ್ನೊಂದೆಡೆ ಪ್ರಕಾಶ್ ರೈ ಕೂಡ ವೀರಪಂಡಿಯನ್ ಪಾತ್ರವನ್ನು ನಿರ್ವಹಿಸಿ ಪಾತ್ರಕ್ಕೆ ಅಮೋಘ ಜೀವ ತುಂಬಿದ್ದಾರೆ. ಚಿತ್ರದಲ್ಲಿನ ಅವರ ಅಭಿನಯ ಅವಿಸ್ಮರಣೀಯವಾಗಿದೆ.
Major (2022): ಆದಿವಿ ಶೇಷ ನಾಯಕನಟನಾಗಿ ನಟಿಸಿರುವ ತೆಲಗು-ಹಿಂದಿ ಬೈಲಿಂಗುವಲ್ ಚಿತ್ರ ಮೇಜರ್ ಭಾರತೀಯ ಸೇನಾಧಿಕಾರಿ ಮೇಜರ್ ಉನ್ನಿಕೃಷ್ಣನ್ ಅವರ ಜೀವನಾಧಾರಿತ ಬಯೋಪಿಕ್ ಡ್ರಾಮಾ ಆಗಿದೆ. ಮೇಜರ್ ಉನ್ನಿಕೃಷ್ಣನ್ 26/11 ಮುಂಬೈ ಉಗ್ರದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಲ್ಲಿ ಒಬ್ಬರು. ಈ ಚಿತ್ರದಲ್ಲಿ ಪ್ರಕಾಶ್ ರೈ ಉನ್ನಿಕೃಷ್ಣನ್ ಅವರ ತಂದೆಯ ಪಾತ್ರ ನಿರ್ವಹಿಸಿದ್ದು, ಅವರ ಅದ್ಭುತ ನಟನಾ ಕೌಶಲ್ಯಕ್ಕೆ ಹಿಡಿದ ಮತ್ತೊಂದು ಕನ್ನಡಿ ಇದಾಗಿದೆ ಎಂದರೆ ತಪ್ಪಾಗಲಾರದು.