20 ದಿನಗಳವರೆಗೆ ಧನ-ಕುಬೇರನ ಕೃಪೆಯಿಂದ ಈ ಜನರಿಗೆ ಸಿಗಲಿದೆ ಅಪಾರ ಧನ-ದೌಲತ್ತು! ಕಾರಣ ಇಲ್ಲಿದೆ!
Budh Vakri 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ವ್ಯಾಪಾರ ಹಾಗೂ ಬುದ್ಧಿ ಕರುಣಿಸುವಾತ ಬುಧ ಪ್ರಸ್ತುತ ತನ್ನ ವಕ್ರ ನಡೆ ಆರಂಭಿಸಿದ್ದಾನೆ. ಇದರಿಂದ ಒಟ್ಟು ಮೂರು ರಾಶಿಗಳ ಜಾತಕದವರ ವ್ಯಾಪಾರ ಹಾಗೂ ವೃತ್ತಿಜೀವನದಲ್ಲಿ ಉನ್ನತಿಯ ಯೋಗ ನಿರ್ಮಾಣಗೊಳ್ಳಲಿದೆ.
ವೃಷಭ ರಾಶಿ: ನಿಮ್ಮ ಗೋಚರ ಜಾತಕದ ಧನಭಾವಕ್ಕೆ ಬುಧ ಅಧಿಪತಿ, ಹೀಗಾಗಿ ನಿಮಗೆ ಆಕಸ್ಮಿಕ ಧನಲಾಭ ಪ್ರಾಪ್ತಿಯಾಗಲಿದೆ. ನಿಂತುಹೋದ ಹಣ ನಿಮ್ಮತ್ತ ಮರಳಲಿದೆ. ಕೆಲಸ ಕಾರ್ಯಗಳಲ್ಲಿ ನಿಮ್ಮ ಘನತೆ-ಗೌರವ ಹೆಚ್ಚಾಗಲಿದೆ. ವ್ಯಾಪಾರಿಗಳಿಗೆ ಉತ್ತಮ ಧನಲಾಭವಾಗಲಿದೆ. ನೌಕರಿ ಬದಲಾಯಿಸಲು ಬಯಸುವವರಿಗೆ ಇದು ಉತ್ತಮ ಕಾಲವಾಗಿದೆ.
ಕರ್ಕ ರಾಶಿ: ಬುಧನ ವಕ್ರ ಸಂಚಾರದಿಂದ ನಿಮಗೆ ಭೌತಿಕ ಸುಖಗಳು ಪ್ರಾಪ್ತಿಯಾಗಲಿವೆ. ವಾಹನ-ಆಸ್ತಿಪಾಸ್ತಿ ಖರೀದಿಸುವಿರಿ. ಸುಖಸಾಧನಗಳು ಹೆಚ್ಚಾಗಲಿವೆ. ಹೊಸ ಕೆಲಸ ಆರಂಭಿಸುವವರಿಗೆ ಕಾಲ ಸಕಾಲವಾಗಿದೆ. ಆತ್ಮವಿಶ್ವಾಸ ಹೆಚ್ಚಾಗಿ, ನಿಮ್ಮ ಎಲ್ಲಾ ಯೋಜನೆಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಕೆಲಸ ಕಾರ್ಯಗಗಳಲ್ಲಿಯೂ ಕೂಡ ಯಶಾಸು ನಿಮ್ಮದಾಗಲಿದೆ.
ತುಲಾ ರಾಶಿ: ನಿಮ್ಮ ಗೋಚರ ಜಾತಕದ ಏಕಾದಶ ಭಾವದಲ್ಲಿ ಬುಧ ವಕ್ರನಾಗಿ ಸಂಚರಿಸುತ್ತಿದ್ದಾನೆ. ಇದರಿಂದ ಈ ಜಾತಕದ ವ್ಯಾಪಾರಿಗಳಿಗೆ ಉತ್ತಮ ಧನಲಾಭ ಉಂಟಾಗಲಿದೆ. ವ್ಯಾಪಾರ ವಿಸ್ತರಿಸಲಿದೆ. ಆಸೆ ಆಕಾಂಕ್ಷೆಗಳು ಈಡೇರಲಿವೆ. ಮಕ್ಕಳೇ ಏಳ್ಗೆ ಸಂಭವಿಸಲಿದೆ, ಘನತೆ ಗೌರವ ಹೆಚ್ಚಾಗಲಿದೆ. ಷೇರುಪೇಟೆ, ಲಾಟರಿ ವ್ಯವಹಾರಗಳಿಂದ ಲಾಭ ಸಿಗಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)