ಕೆಲವೇ ಗಂಟೆಗಳಲ್ಲಿ ತೆರೆಯುವುದು ಈ ರಾಶಿಯವರ ಅದೃಷ್ಟದ ಬಾಗಿಲು ! ಮುಂದಿದೆ ಸಿರಿವಂತರಾಗುವ ಯೋಗ

Fri, 18 Aug 2023-1:04 pm,

ವೈದಿಕ ಜ್ಯೋತಿಷ್ಯದಲ್ಲಿ, ಶುಕ್ರನು ವೃಷಭ ಮತ್ತು ತುಲಾ ರಾಶಿಯ ಅಧಿಪತಿ. ಯಾರ ರಾಶಿಯಲ್ಲಿ ಶುಕ್ರನು ಉಚ್ಛನಾಗಿರುತ್ತಾನೆಯೋ ಅವರು ಜೀವನದಲ್ಲಿ ಐಷಾರಾಮಿ ಬದುಕು, ವೈವಾಹಿಕ ಸಂತೋಷ, ಭೌತಿಕ ಸಂತೋಷ ಮತ್ತು ಖ್ಯಾತಿಯನ್ನು ಪಡೆಯುತ್ತಾರೆ.   

ಕರ್ಕಾಟಕದಲ್ಲಿ ಶುಕ್ರನ ಉದಯದಿಂದಾಗಿ, ಕೆಲವು ರಾಶಿಯವರ ಜೀವನದಲ್ಲಿ ಸಮೃದ್ದಿಯ ಕಾಲ ಆರಂಭವಾಗಲಿದೆ. ಇಂದಿನಿಂದ ಈ ರಾಶಿಯವರ ಜೀವನದ ಪರ್ವಕಾಲ ಆರಂಭವಾಗಲಿದೆ. 

ಮೇಷ ರಾಶಿ :ಗೃಹಜೀವನದ ತೊಂದರೆಯಿಂದ ಪರಿಹಾರ ಸಿಗುತ್ತದೆ. ಇಲ್ಲಿಯವರೆಗೆ ಅನುಭವಿಸುತ್ತಿದ್ದ ಕಷ್ಟ ನಷ್ಟಗಳೆಲ್ಲಾ ಬದಿಗೆ ಸರಿಯುತ್ತವೆ. ಎಲ್ಲಾ  ತೊಂದರೆಗಳಿಂದ ಮುಕ್ತರಾಗುವ ಸಮಯ ಇದು. ನೀವು ಮಾಡುವ ಎಲ್ಲಾ  ಪ್ರಯತ್ನಗಳು ಶುಭ ಫಲಿತಾಂಶಗಳನ್ನೇ ನೀಡುತ್ತವೆ.    

ವೃಷಭ ರಾಶಿ :ಹಳೆಯ ಸಮಸ್ಯೆಗಳಿಂದ ಹೊರಬರಲು ಸಾಧ್ಯವಾಗುತ್ತದೆ. ಹೊಸ ಜೀವನ ಕಟ್ಟಿಕೊಳ್ಳುವುದು ಸಾಧ್ಯವಾಗುತ್ತದೆ. ಯಾವ ಕೆಲಸ ಮಾಡಬೇಕಾದರೂ ಅಂಜದೆ ಮುಂದೆ ನಡೆಯಿರಿ. ಜಯ ನಿಮ್ಮದಾಗುವುದು.

ಕಟಕ ರಾಶಿ : ಶುಕ್ರನು ನಿಮ್ಮ ರಾಶಿಚಕ್ರದ ಮೊದಲ ಮನೆಯಲ್ಲಿ ಅಂದರೆ ಲಗ್ನ ಮನೆಯಲ್ಲಿ ಉದಯಿಸುತ್ತಿರುವುದರಿಂದ ಈ ಸಮಯವು ನಿಮಗೆ ತುಂಬಾ ಶುಭಕರವಾಗಿರುತ್ತದೆ. ನಿಮ್ಮ ವ್ಯಕ್ತಿತ್ವದಿಂದ ಎಲ್ಲರನ್ನೂ ನಿಮ್ಮತ್ತ ಆಕರ್ಷಿಸುವುದು ಸಾಧ್ಯವಾಗುತ್ತದೆ. 

ಮೀನ ರಾಶಿ :ಜೀವನದಲ್ಲಿ ತಲೆದೋರಿದ್ದ ಸಮಸ್ಯೆಗಳಿಗೆ ಮುಕ್ತಿ ಸಿಕ್ಕಿ ನೆಮ್ಮದಿಯ ಬದುಕಿನತ್ತ ಹೆಜ್ಜೆ ಇಡುತ್ತೀರಿ. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರುವುದು. ಮದುವೆ ಮಾತುಕತೆಗೆ ಇದು ಒಳ್ಳೆಯ ಕಾಲ. ವೃತ್ತಿಜೀವನದ ದೃಷ್ಟಿಯಿಂದಲೂ ಇದು ಸಕಾರಾತ್ಮಕ ಸಮಯವಾಗಿರುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link