ಸೌಂದರ್ಯದಲ್ಲಿ ನಟಿಯರನ್ನೇ ಮೀರಿಸುತ್ತಾರೆ ಈ ಪಾಕ್ ಕ್ರಿಕೆಟಿಗರ ಪತ್ನಿಯರು!

Thu, 03 Mar 2022-9:53 pm,

ಪಾಕಿಸ್ತಾನದ ಅಪಾಯಕಾರಿ ಬ್ಯಾಟ್ಸ್‌ಮನ್ ಶೋಯೆಬ್ ಮಲಿಕ್ 2010ರಲ್ಲಿ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ವಿವಾಹವಾದರು. ಆಗ ಇವರಿಬ್ಬರ ಮದುವೆ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ವಿವಾದಗಳು ಹರಿದಾಡುತ್ತಿದ್ದರೂ ಯಾರಿಗೂ ತಲೆಕೆಡಿಸಿಕೊಳ್ಳದೆ ಇಬ್ಬರೂ ಮದುವೆಯಾದರು. ಅನೇಕ ವರ್ಷಗಳ ನಂತರವೂ ಇಬ್ಬರೂ ತಮ್ಮ ಸಂತೋಷದ ದಾಂಪತ್ಯ ಜೀವನವನ್ನು ನಡೆಸುತ್ತಿದ್ದಾರೆ. ಇವರಿಬ್ಬರ ಪ್ರೀತಿಗೆ ಸಾಕ್ಷಿಯಾಗಿ ಪುತ್ರನಿದ್ದಾನೆ.

ಪಾಕಿಸ್ತಾನದ ವೇಗದ ಬೌಲರ್ ಹಸನ್ ಅಲಿ ಕಳೆದ ವರ್ಷ ಅಂದರೆ 2019ರಲ್ಲಿ ಭಾರತದ ಶಾಮಿಯಾ ಅರ್ಜೂ ಅವರನ್ನು ವಿವಾಹವಾದರು. ಹರಿಯಾಣದ ನುಹ್ ಜಿಲ್ಲೆಯ ಚಾಂದೇನಿ ಗ್ರಾಮದಲ್ಲಿ ಶಾಮಿಯಾ ಕುಟುಂಬ ವಾಸಿಸುತ್ತಿದೆ. ಆದರೆ ಶಾಮಿಯಾ ಹಲವು ವರ್ಷಗಳಿಂದ ದುಬೈನಲ್ಲಿ ಫ್ಲೈಟ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಶಾಮಿಯಾ ಮತ್ತು ಹಸನ್ ಅಲಿ ಕೂಡ ದುಬೈನಲ್ಲಿ ವಿವಾಹವಾದರು. ಮೊದಮೊದಲು ಇವರಿಬ್ಬರ ನಡುವೆ ತುಂಬಾ ಆತ್ಮೀಯ ಸ್ನೇಹವಿತ್ತು, ನಂತರ ಸ್ನೇಹ ಸಂಬಂಧಕ್ಕೆ ತಿರುಗಿತ್ತು.

ಪಾಕಿಸ್ತಾನದ ಆರಂಭಿಕ ಆಟಗಾರ ಅಹ್ಮದ್ ಶೆಹಜಾದ್ ಅವರು ತಮ್ಮ ಬಾಲ್ಯದ ಗೆಳತಿ ಸನಾ ಮುರಾದ್ ಅವರನ್ನು 19 ಸೆಪ್ಟೆಂಬರ್ 2015ರಂದು ವಿವಾಹವಾದರು. ಇಬ್ಬರೂ ಬಹಳ ಪ್ರಸಿದ್ಧ ದಂಪತಿಗಳು. ಸನಾ ಅವರ ಸೌಂದರ್ಯವೂ ಅದ್ಭುತವಾಗಿದೆ. ಇಬ್ಬರಿಗೂ ಅಲಿ ಅಹ್ಮದ್ ಎಂಬ ಮಗನಿದ್ದಾನೆ.

ಮಿಸ್ಬಾ ಉಲ್ ಹಕ್ 2004ರಲ್ಲಿ ಉಜ್ಮಾ ಖಾನ್ ಅವರನ್ನು ವಿವಾಹವಾದರು. ಮಿಸ್ಬಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ. ಅವರ ಮಗನ ಹೆಸರು ಫೈಜಾನ್. ಮಿಸ್ಬಾ ಪಾಕಿಸ್ತಾನದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿದ್ದಾರೆ.

ಪಾಕಿಸ್ತಾನಿ ಕ್ರಿಕೆಟಿಗ ವಹಾಬ್ ರಿಯಾಜ್ 2013ರಲ್ಲಿ ಜೈನಾಬ್ ಅವರನ್ನು ವಿವಾಹವಾದರು. ವಹಾಬ್ ಪಾಕಿಸ್ತಾನದ ಶ್ರೇಷ್ಠ ಬೌಲರ್ ಆಗಿದ್ದಾರೆ. ಇವರ ಬೌಲಿಂಗ್ ದಾಳಿಯನ್ನು ಎದುರಿಸುವುದು ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಸುಲಭವಾಗಿರಲಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link