ಎಂಟು ವರ್ಷಗಳಿಂದ ಸೈಕಲ್ ಮೇಲೆ ಮಹಿಳೆಯಿಂದ ಯೋಗ ಸಾಧನೆ! See Photos
ಮಹಾರಾಷ್ಟ್ರದ ನಾಗ್ಪುರದ ದಂತೊಲಾ ಪ್ರದೇಶದ ನಿವಾಸಿಯಾದ ಯೋಗ ಶಿಕ್ಷಕಿ ಮಂಗಳಾ ಪಾಟೀಲ್(43) ಅವರು, ಸೈಕಲ್ ಮೇಲೆ ಯೋಗಾಭ್ಯಾಸ ಮಾಡುವ ಮೂಲಕ ಯೋಗ ಕ್ಷೇತ್ರದಲ್ಲಿ ತಮ್ಮನ್ನು ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ. ಇವರು ಪ್ರತಿದಿನ ಬೆಳಿಗ್ಗೆ ಸೈಕ್ಲಿಂಗ್ ಮಾಡುವಾಗ ಸೂಕ್ಷ್ಮ ವ್ಯಾಯಾಮ, ಪ್ರಾಣಾಯಾಮ ಮತ್ತು ಯೋಗಾಭ್ಯಾಸವನ್ನು ಮಾಡುತ್ತಾರೆ.
ಸೈಕಲ್ ಮೇಲೆ ಯೋಗವನ್ನು ಮಾಡುವಾಗ ಸಮತೋಲನವನ್ನು ಕಾಯ್ದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಮಂಗಳಾ ಪಾಟೀಲ್ ಬಾಲ್ಯದಿಂದಲೂ ಸೈಕ್ಲಿಂಗ್‌ನಲ್ಲಿ ಆಸಕ್ತಿ ಹೊಂದಿದ್ದರು. ಅಲ್ಲದೆ, ಕಳೆದ 20 ವರ್ಷಗಳಿಂದ ಯೋಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಎಂಟು ವರ್ಷಗಳ ಹಿಂದೆ ಸೈಕಲ್ ತುಳಿಯುತ್ತಲೇ ಯೋಗಾಭ್ಯಾಸ ಮಾಡುವ ಆಲೋಚನೆ ಹೊಂದಿದ ಮಂಗಳಾ ಅವರು, ಅಂದಿನಿಂದಲೇ ಸೈಕಲ್ ಮೇಲೆ ಯೋಗಾಭ್ಯಾಸ ಮಾಡುವ ಪ್ರಯತ್ನ ಆರಂಭಿಸಿದರು. ಆರಂಭದಲ್ಲಿ ಸ್ವಲ್ಪ ಕಷ್ಟ ಎನಿಸಿತಾದರೂ ಸತತ ಪರಿಶ್ರಮ ಮತ್ತು ನಿಯಮಿತ ಯೋಗಾಭ್ಯಾಸದಿಂದ ಅದನ್ನು ಸಾಧಿಸಿ, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ ಬರೆದಿದ್ದಾರೆ.
ಉತ್ತಮ ಆರೋಗ್ಯಕ್ಕಾಗಿ ಯೋಗ ಮಾಡುವುದು ಅತ್ಯಗತ್ಯ ಎಂದು ಹೇಳುವ ಯೋಗ ಶಿಕ್ಷಕಿ ಮಂಗಳಾ ಪಾಟೀಲ್ ಅವರು, ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.