ಮೃತಪಟ್ಟರೆ ಎಷ್ಟು ಜನ ಸೇರುತ್ತಾರೆ ಎಂದು ಪರೀಕ್ಷಿಸಲು ಸತ್ತಂತೆ ನಟಿಸಿದ ಮಹಿಳೆ

Fri, 14 May 2021-6:33 pm,

ನಾವು ಜೀವನದಲ್ಲಿ ಎಷ್ಟು ಒಳ್ಳೆಯ ಕೆಲಸ ಮಾಡಿದ್ದೇವೆ ಎನ್ನುವುದು ನಾವು ಸತ್ತ ನಂತರ ತಿಳಿಯುತ್ತದೆ ಎನ್ನುತ್ತಾರೆ. ಅಂತಿಮ ಯಾತ್ರೆಯಲ್ಲಿ ಎಷ್ಟು ಜನ ಸೇರುತ್ತಾರೆ ಎನ್ನುವುದರ ಮೂಲಕ ಎಷ್ಟು ಜನರ ಪ್ರೀತಿ ಗಳಿಸಿದ್ದೇವೆ ಎನ್ನುವುದನ್ನು ಅಂದಾಜಿಸಬಹುದು ಎನ್ನಲಾಗುತ್ತದೆ. ಈ ಮಹಿಳೆಯ ತಲೆಗೆ ಬಂದಿದ್ದೂ ಅದೇ ಯೋಚನೆ. ಹಾಗಾಗಿ ಈ ವಿಚಿತ್ರ ಕೆಲಸಕ್ಕೆ ಮಹಿಳೆ ಕೈ ಹಾಕಿಬಿಟ್ಟಿದ್ದಾರೆ.   

ಈ ಘಟನೆ ನಡೆದದ್ದು ಚಿಲಿಯಲ್ಲಿ. ಮಯಾರಾ ಅಲೋಂಜಾ ಎಂಬ ಮಹಿಳೆ, ತನ್ನ ಸಾವಿನ ಸುದ್ದಿಯನ್ನು ತನ್ನ ಎಲ್ಲಾ ಬಂಧುಗಳಿಗೆ ತಲುಪಿಸುತ್ತಾರೆ. ಸುದ್ದಿ ತಿಳಿಯುತ್ತಿದ್ದಂತೆ ಎಲ್ಲರೂ ಅಲೋಂಜಾ ನಿವಾಸಕ್ಕೆ ಆಗಮಿಸಿಯೇ ಬಿಟ್ಟಿದ್ದಾರೆ. 

ಮಹಿಳೆಯ ಈ ನಾಟಕ ಸುಮಾರು 4 ಗಂಟೆಗಳವರೆಗೆ ನಡೆದಿದೆ. ಮಹಿಳೆ ಎಲ್ಲರೂ ಮನೆಗೆ ಬರುತ್ತಿರುವಂತೆ ಶವ ಪೆಟ್ಟಿಗೆಯಲ್ಲಿ ಮಲಗಿಬಿಟ್ಟಿದ್ದಾರೆ. ತನ್ನ ಇಚ್ಛೆಯಂತೆ ಬಹಳಷ್ಟು ಜನ ಸೇರಿದ್ದಾರೆ ಎಂದು ಖಾತ್ರಿಯಾಗುತ್ತಿದ್ದಂತೆ, ಶವ  ಪೆಟ್ಟಿಗೆಯಿಂದ ಎದ್ದಿದ್ದಾರೆ.

ಈ ಕರೋನಾ ಕಾಲದಲ್ಲಿ ಮೃತದೇಹಕ್ಕೆ ಹೆಗಲು ಕೊಡಲು 4 ಜನ ಸಿಗುತ್ತಿಲ್ಲ. ಹಾಗಾಗಿ ತಾನು ಸತ್ತರೆ ಯಾರೆಲ್ಲಾ ಬರುತ್ತಾರೆ ಎನ್ನುವುದನ್ನಿ ನೋಡಬೇಕಿತ್ತು. ಈ ಕಾರಣಕ್ಕಾಗಿ ತಾನು ಸತ್ತಂತೆ ನಟಿಸಿರುವುದಾಗಿ ಮಹಿಳೆ ಹೇಳಿದ್ದಾರೆ.

ಈ ನಾಟಕಕ್ಕೆ ಮಹಿಳೆ ಒಂದು ಲಕ್ಷಕ್ಕೂ ಅಧಿಕ ಹಣವನ್ನು ವ್ಯಯಿಸಿದ್ದಾರೆ. ಈ ವೇಳೆ ಪ್ರೋಪೇಶನಲ್ ಫೋಟೋಗ್ರಾಫರ್ ನನ್ನು ಕೂಡಾ ಕರೆಸಲಾಗಿತ್ತು. ಬಂದ ಎಲ್ಲಾ ನೆಂಟರಿಷ್ಟ ಜೊತೆ ಫೋಟೋ ಕ್ಲಿಕ್ಕಿಸಲಾಗಿತ್ತು. ನಾಟಕ ಮುಗಿದ ನಂತರ ಮಹಿಳೆ ಎಲ್ಲರ ಜೊತೆ ಪಾರ್ಟಿ ಮಾಡಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link