ಈ 4 ರಾಶಿಯ ಮಹಿಳೆಯರಿಗೆ ಕೋಪ ಜಾಸ್ತಿ; ಮದುವೆಯಾಗುವ ಮುನ್ನ ಎಚ್ಚರ ಗಂಡಸರು ತಪ್ಪದೇ ನೋಡಿ!
ಕೆಲವು ಹೆಣ್ಣುಮಕ್ಕಳಿಗೆ ಕೋಪ ಜಾಸ್ತಿ ಇರುತ್ತದೆ. ಅವರನ್ನ ಮದುವೆಯಾಗುವ ಮುನ್ನ ಗಂಡಸರು ಸ್ವಲ್ಪ ಎಚ್ಚರಿಕೆ ವಹಿಸುವುದು ಒಳಿತು. ಏಕೆಂದರೆ ಕೋಪ ಎನ್ನುವುದು ಸಂಸಾರವನ್ನೇ ಕೂಪಕ್ಕೆ ತಳ್ಳುತ್ತದೆ. ಕೋಪದ ಕೈಯಲ್ಲಿ ಬುದ್ಧಿ ಕೊಟ್ಟರೆ ದೊಡ್ಡ ಅನಾಹುತವೇ ಸಂಭವಿಸುತ್ತದೆ. ಹೀಗಾಗಿ ಕೋಪ ಹೊಂದಿರುವ ಮಹಿಳೆಯರನ್ನು ಮದುವೆಯಾಗುವ ಮುನ್ನ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಒಳಿತು. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ನಾಲ್ಕು ರಾಶಿಯ ಹೆಣ್ಣು ಮಕ್ಕಳಿಗೆ ಕೋಪ ಜಾಸ್ತಿ ಇರುತ್ತದಂತೆ.
ಮೇಷ ರಾಶಿಯ ಹೆಣ್ಣು ಮಕ್ಕಳಿಗೆ ಕುಜ ಇರುವುದರಿಂದ ಕೋಪ ಜಾಸ್ತಿ ಇರುತ್ತದೆ. ಆದರೆ ಇವರು ಉತ್ತಮ ನಾಯಕತ್ವ ಗುಣವನ್ನು ಹೊಂದಿರುತ್ತಾರೆ. ಎಲ್ಲವನ್ನು ತಮ್ಮ ಕಂಟ್ರೋಲ್‌ನಲ್ಲಿಯೇ ಇರಿಸಲು ಇವರು ಬಯಸುತ್ತಾರಂತೆ.
ವೃಶ್ಚಿಕ ರಾಶಿಯ ಹೆಣ್ಣು ಮಕ್ಕಳು ಪುರುಷ ಗುಣ ಹೊಂದಿದ್ದು, ಬಹಳ ಸಣ್ಣ ವಿಷಯಗಳನ್ನು ದೊಡ್ಡದಾಗಿ ತೆಗೆದುಕೊಳ್ಳುತ್ತಾರೆ. ಇವರು ಸ್ವತಂತ್ರವಾಗಿ ಇರುವುದಕ್ಕೆ ಬಯಸುತ್ತಾರೆ. ತಮ್ಮ ಶತ್ರುಗಳ ವಿರುದ್ಧ ಹಗೆ ಸಾಧಿಸುವುದರಲ್ಲಿ ಇವರು ಎತ್ತಿದ ಕೈ. ಈ ರಾಶಿಯ ಹೆಣ್ಣುಮಕ್ಕಳಿಗೆ ಸ್ವಲ್ಪ ಅಹಂಕಾರ ಮತ್ತು ಕೋಪ ಜಾಸ್ತಿ ಇರುತ್ತದಂತೆ.
ಮಕರ ರಾಶಿಯ ಹಣ್ಣುಮಕ್ಕಳಿಗೂ ಸಹ ಧೈರ್ಯ ತುಂಬಾ ಹೆಚ್ಚಿರುತ್ತದಂತೆ. ಇವರ ಬಳಿ ಯಾರಾದರೂ ಜಾಸ್ತಿ ಮಾತನಾಡಿದರೆ ಹಲ್ಲು ಮುರಿದು ಬಿಡುತ್ತಾರಂತೆ. ಇವರಿಗೆ ಹುಟ್ಟಿನಿಂದಲೂ ಧೈರ್ಯ ತುಂಬಾನೇ ಇರುತ್ತದೆ. ಹೀಗಾಗಿ ಇವರ ಬಳಿ ನೀವು ತುಂಬಾ ನಯವಾದ ಮಾತುಗಳನ್ನು ಆಡಿದರೆ ಖಂಡಿತ ಅಲ್ಲೇ ಸಿಕ್ಕಿ ಬೀಳುತ್ತೀರಿ. ಹೀಗಾಗಿ ಇವರೊಂದಿಗೆ ಬಹಳ ಎಚ್ಚರದಿಂದ ಇರಬೇಕು.
ಕುಂಭ ರಾಶಿಯವರು ಮನಸ್ಸಿನಲ್ಲಿ ಗೌಪ್ಯಾವಾಗಿ ವಿಷಯಗಳನ್ನ ಇಟ್ಟುಕೊಳ್ಳುತ್ತಾರಂತೆ. ಯಾರಿಗೂ ತಮ್ಮ ಸೀಕ್ರೆಟ್ ಅನ್ನು ತಿಳಿಸುವುದಕ್ಕೆ ಸಾಧ್ಯವಿಲ್ಲ. ಪುರುಷರನ್ನು ತಮ್ಮ ಅಸ್ತಿತ್ವಕ್ಕೆ ತೆಗೆದುಕೊಳ್ಳುವುದರಲ್ಲಿ ಹೆಚ್ಚು ಮುನ್ನುಗ್ಗುತ್ತಾರೆ. ಕೋಪ ಜಾಸ್ತಿ ಇದ್ದರೂ ಸಹ ಇವರು ಚೆನ್ನಾಗಿ ಸಂಸಾರ ನಡೆಸುತ್ತಾರೆಂದು ಹೇಳಲಾಗುತ್ತದೆ.