ಮಹಿಳೆಯೊಬ್ಬಳು ತನ್ನ ಮಗನಿಗೆ ಈ ರೀತಿ ಹೆಸರಿಟ್ಟಿದ್ದಾಳೆ: ಇದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ!
ಮಹಿಳೆಯೊಬ್ಬರು ತಮ್ಮ ಗಂಡುಮಗುವಿಗೆ ಇಡಬೇಕೆಂದು ಆರಿಸಿಕೊಂಡಿರುವ ಹೆಸರಿನಿಂದ ಸಂದಿಗ್ಧ ಪರಿಸ್ಥಿತಿ ತಂಡುಕೊಂಡಿದ್ದಾರೆ. ಮಗುವಿಗಾಗಿ ತಾನು ಆರಿಸಿಕೊಂಡಿರುವ ಹೆಸರು ಆಂಗ್ಲ ಭಾಷೆಯಲ್ಲಿ ಬೇರೆಯದೇ ಅರ್ಥವಿದೆ ಅಂತಾ ಇತ್ತೀಚೆಗಷ್ಟೇ ಅವರಿಗೆ ತಿಳಿದುಬಂದಿದೆ.
ಮಗುವಿಗೆ ನಾಮಕರಣ ಮಾಡುವ ವಿಷಯದಲ್ಲಿ ತನಗಾದ ನೋವನ್ನು ಮಹಿಳೆ ಮಾಧ್ಯಮಗಳ ಮುಂದೆ ವ್ಯಕ್ತಪಡಿಸಿದ್ದಾಳೆ. ತಾನು ಮತ್ತು ಪತಿ ಮೂಲತಃ ಹಂಗೇರಿಯವರು ಎಂದು ತಿಳಿಸಿದ್ದಾರೆ. ತನ್ನ ಪತಿಯೇ ಮಗನಿಗೆ ನಿಮ್ರಾಡ್(Nimród) ಎಂಬ ಹೆಸರನ್ನು ನಾಮಕರಣ ಮಾಡುವಂತೆ ಸೂಚಿಸಿದ್ದರಂತೆ. ಅದು ಜನಪ್ರಿಯ ಹಂಗೇರಿಯನ್ ಹೆಸರಂತೆ.
ಪತಿ-ಪತ್ನಿ ಸೇರಿ ಚರ್ಚಿಸಿ ತಮ್ಮ ಗಂಡುಮಗುವಿಗೆ ನಿಮ್ರಾಡ್ ಎಂಬ ಹೆಸರನ್ನು ನಾಮಕರಣ ಮಾಡಿದ್ದಾರೆ. ಆದರೆ ನಿಮ್ರಾಡ್ ಇಂಗ್ಲಿಷ್ ನಲ್ಲಿ ಬೇರೆಯದೇ ಅರ್ಥವಿದೆಯಂತೆ. ಅಂದರೆ ನಿಮ್ರಾಡ್ ಎಂದರೆ ಇಂಗ್ಲಿಷ್ ಆಡುಭಾಷೆಯಲ್ಲಿ ಈಡಿಯಟ್ ಎಂದು ಅರ್ಥ ನೀಡುತ್ತದಂತೆ. ತಮ್ಮ ಮಗುವಿಗೆ ಈಡಿಯಟ್ ಎಂದು ಕರೆಯಲು ಇಷ್ಟಪಡದ ಹಂಗೇರಿಯನ್ ದಂಪತಿ ಇದೀಗ ಮತ್ತೊಂದು ಒಳ್ಳೆಯ ಹೆಸರು ಮರುನಾಮಕರಣ ಮಾಡಲು ಯೋಚಿಸಿದ್ದಾರಂತೆ.
ಮಹಿಳೆ ತನ್ನ ಮಗುವಿಗೆ ನಿಮ್ರಾಡ್ ಹೆಸರಿನ ಬದಲು ಲಾಸ್ಲಾ(László), ಜೊಲ್ಟಾನ್(Zoltán) ಮತ್ತು ವಾಜ್ಕ್(Vajk)ನಂತಹ ಇತರ ಹೆಸರುಗಳನ್ನು ಇಡಬೇಕೆಂದು ಯೋಚಿಸಿದ್ದಾಳೆ. ಆದರೆ ದಂಪತಿ ತಮ್ಮ ಮಗುವಿಗೆ ನಿಮ್ರಾಡ್ ಹೆಸರೇ ಚೆನ್ನಾಗಿತ್ತು, ಆ ಹೆಸರಿನಿಂದಲೇ ಕರೆಯಲು ತಾವು ಬಯಸುತ್ತೇವೆ ಅಂತಾ ತಿಳಿಸಿದ್ದಾರೆ.
ನಿಮ್ರಾಡ್ ಹೆಸರಿನ ಕುರಿತು ಮಹಿಳೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಪೋಸ್ಟ್ ಗೆ ಅನೇಕರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರಂತೆ. ಮಗುವಿಗೆ ನಿಮ್ರಾಡ್ ಎಂದು ಹೆಸರಿಡುವುದು ತುಂಬಾ ಕೆಟ್ಟ ಆಲೋಚನೆ ಎಂದು ಕೆಲವರು ಹೇಳಿದರೆ, ಆ ಹೆಸರು ಹಂಗೇರಿಯಲ್ಲಿ ಜನಪ್ರಿಯವಾಗಿದೆ. ಅದಕ್ಕೂ ಇಂಗ್ಲಿಷ್ ಆಡುಭಾಷೆಯ ಅರ್ಥಕ್ಕೂ ಯಾವುದೇ ಸಂಬಂಧವಿಲ್ಲವೆಂದು ಹೇಳಿದ್ದಾರೆ.