ಮಲಗುವ ಮುನ್ನ ಮಹಿಳೆಯರು ನಿತ್ಯ ಈ ಕಾರ್ಯ ಮಾಡಿದರೆ ಆಗಲಿದೆ ಧನ ವೃಷ್ಠಿ

Mon, 17 Jan 2022-2:23 pm,

ಪ್ರತಿದಿನ ಮಲಗುವ ಮುನ್ನ ಇಡೀ ಮನೆಯಲ್ಲಿ ಕರ್ಪೂರವನ್ನು ಬೆಳಗಿಸಬೇಕು. ಹೀಗೆ ಮಾಡುವುದರಿಂದ ಮನೆಯ ಋಣಾತ್ಮಕ ಶಕ್ತಿ ಕೊನೆಗೊಳ್ಳುತ್ತದೆ. ಇದಲ್ಲದೇ ಮಲಗುವ ಕೋಣೆಯಲ್ಲಿ ಕರ್ಪೂರ ಹಚ್ಚಿದರೆ  ಪತಿ-ಪತ್ನಿಯರ ನಡುವೆ ಜಗಳ ನಡೆಯುವುದಿಲ್ಲ. ಅಲ್ಲದೆ ಕುಟುಂಬವು ಸಂತೋಷದಿಂದ ಇರುತ್ತದೆ. 

ರಾತ್ರಿ ಮಲಗುವ ಮುನ್ನ ಮನೆಯ ಹೆಂಗಸರು ಮನೆಯ ಪಶ್ಚಿಮ ಮತ್ತು ದಕ್ಷಿಣ ಮೂಲೆಗಳಲ್ಲಿ ದೀಪವನ್ನು ಹಚ್ಚಬೇಕು. ಈ ದಿಕ್ಕಿನಲ್ಲಿ ಬೆಳಕಿದ್ದರೆ ಪೂರ್ವಜರ ಆಶೀರ್ವಾದ ಸಿಗುತ್ತದೆ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ.

ಮಹಿಳೆಯರು ರಾತ್ರಿ ಮಲಗುವ ಮುನ್ನ ಪೂಜಾ ಸ್ಥಳದಲ್ಲಿ ದೀಪವನ್ನು ಹಚ್ಚಬೇಕು. ಮಹಿಳೆ ಪ್ರತಿದಿನ ಈ ಕೆಲಸವನ್ನು ಮಾಡುವ ಮನೆಯಲ್ಲಿ ಲಕ್ಷ್ಮಿ ದೇವಿಯು ಯಾವಾಗಲೂ ನೆಲೆಸುತ್ತಾಳೆ ಎಂದು ನಂಬಲಾಗಿದೆ. 

ಯಾವ ಮನೆಯಲ್ಲಿ ತಂದೆ-ತಾಯಿ ಮತ್ತು ಹಿರಿಯರ ಸೇವೆಯಾ ಬಗ್ಗೆ ಕಾಳಜಿ ವಹಿಸಲಾಗುತ್ತದೆಯೋ, ಆ ಮನೆಯಲ್ಲಿ ಲಕ್ಷ್ಮಿ ದೇವಿಯ ವಿಶೇಷ ಕೃಪೆ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮನೆಯ ಮಹಿಳೆ ಮಲಗುವ ಮೊದಲು ಪೋಷಕರು ಅಥವಾ ಹಿರಿಯರ ಸೇವೆ ಮಾಡಬೇಕು.

ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ಕೆಲಸಗಳನ್ನು ಮಾಡುವುದರಿಂದ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರವಾಗುತ್ತದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link