ಮಹಿಳೆಯರು ವಾರದ ಈ ದಿನ ತಪ್ಪಿಯೂ ಕುಂಕುಮ ಹಚ್ಚಬಾರದಂತೆ !ದೀರ್ಘಾಯುಷ್ಯಕ್ಕಾಗಿ ಹಚ್ಚುವ ಕುಂಕುಮವೇ ಪತಿಯ ಆಯುಷ್ಯಕ್ಕೆ ಕುತ್ತು ತರುತ್ತದೆಯಂತೆ !
ಮದುವೆಯಾದ ಹೆಂಗಸರು ಪ್ರತಿ ದಿನ ಹಣೆಗೆ ಸಿಂಧೂರ ಹಚ್ಚಬೇಕು. ಆದರೆ ವಾರದ ಒಂದು ದಿನ ಮಾತ್ರ ತಪ್ಪಿಯೂ ಹಣೆಗೆ ಸಿಂಧೂರವನ್ನು ಹಚ್ಚಬಾರದು. ಶಾಸ್ತ್ರದಲ್ಲಿ ಈ ಬಗ್ಗೆ ವಿವರವಾಗಿ ಹೇಳಲಾಗಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವಿವಾಹಿತ ಮಹಿಳೆಯರು ಸೋಮವಾರದಂದು ತಲೆ ಸ್ನಾನ ಮಾಡಬಾರದು. ಹೀಗೆ ಮಾಡುವುದರಿಂದ ಗಂಡ ಮತ್ತು ಮಕ್ಕಳು ಜೀವನದಲ್ಲಿ ಕಷ್ಟಗಳನ್ನು ಎದುರಿಸಬೇಕಾಗಬಹುದು ಎಂದು ಹೇಳಲಾಗುತ್ತದೆ.
ವಿವಾಹಿತ ಮಹಿಳೆಯರು ತಮ್ಮ ಸಿಂಧೂರ ಹಚ್ಚುವಾಗ ಅವರ ಮುಖವು ಯಾವಾಗಲೂ ಪೂರ್ವ ಅಥವಾ ಉತ್ತರದ ಕಡೆಗೆ ಇರಬೇಕು. ಈ ಎರಡೂ ದಿಕ್ಕುಗಳಲ್ಲಿ ದೇವತೆಗಳು ನೆಲೆಸುತ್ತಾರೆ ಎಂದು ಹೇಳಲಾಗುತ್ತದೆ.
ಸಿಂಧೂರ ಹಚ್ಚಲು ಬೆಳ್ಳಿಯ ನಾಣ್ಯವನ್ನು ಬಳಸಬೇಕಂತೆ. ಹೀಗೆ ಮಾಡುವುದರಿಂದ ಲಕ್ಷ್ಮೀ ದೇವಿಯು ಸಂತುಷ್ಟಳಾಗುತ್ತಾಳೆ ಮತ್ತು ಆಕೆಯ ಆಶೀರ್ವಾದವು ಕುಟುಂಬದ ಮೇಲೆ ಸದಾ ಇರುತ್ತದೆ.
ಮಹಿಳೆಯರು ಮಂಗಳವಾರ ತಪ್ಪಿಯೂ ಸಿಂಧೂರವನ್ನು ಹಚ್ಚಬಾರದು. ಈ ದಿನವನ್ನು ಭಗವಾನ್ ಹನುಮಂತನ ಆರಾಧನೆಗೆ ಸಮರ್ಪಿಸಲಾಗಿದೆ. ಹನುಮಂತ ಬ್ರಹ್ಮಚಾರಿ. ಮಂಗಳವಾರ ಹನುಮಾನ್ ಮೂರ್ತಿಗೆ ಸಿಂಧೂರ ಹಚ್ಚುವ ಸಂಪ್ರದಾಯವಿದೆ.
ಈ ಕಾರಣದಿಂದ ಮಂಗಳವಾರ ವಿವಾಹಿತ ಮಹಿಳೆ ಹಣೆಗೆ ಸಿಂಧೂರ ಹಚ್ಚಬಾರದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.