ಒಮ್ಮೆ ಗೌರಿ ಪೂಜೆ ಆರಂಭಿಸಿದರೆ ಸತತ ಇಷ್ಟು ವರ್ಷ ಅನುಸರಿಸಿಕೊಂಡು ಬರಲೇ ಬೇಕು ! ಪೂಜೆ ಮಾಡುವ ಮುನ್ನ ಈ ನಿಯಮ ತಿಳಿದುಕೊಳ್ಳಿ
ನಾಳೆ ಗೌರಿ ಹಬ್ಬ.ಮಹಿಳೆಯರ ನೆಚ್ಚಿನ ಹಬ್ಬ ಇದು. ಈ ಹಬ್ಬ ವಿವಾಹಿತ ಮತ್ತು ಅವಿವಾಹಿತ ಹೀಗೆ ಎರಡೂ ವರ್ಗದ ಮಹಿಳೆಯರಿಗೆ ವಿಶೇಷವಾಗಿರುತ್ತದೆ.
ಮಹಿಳೆಯರು ಗೌರಿ ಪೂಜೆ ಮಾಡುವುದರಿಂದ ಗೌರಿ ಅವರನ್ನು ವಿಶೇಷವಾಗಿ ಹರಸುತ್ತಾಳೆಯಂತೆ. ವಯಸ್ಸು ಮೀರಿದರೂ ಮದುವೆಯಾಗದ ಹೆಣ್ಣು ಮಕ್ಕಳು ಗೌರಿ ಪೂಜೆ ಮಾಡಿದರೆ ಶೀಘ್ರದಲ್ಲೇ ವಿವಾಹ ಭಾಗ್ಯ ಒಲಿದು ಬರುತ್ತದೆ ಎನ್ನುವುದು ನಂಬಿಕೆ.
ಇನ್ನು ವಿವಾಹಿತ ಮಹಿಳೆ ಈ ಪೂಜೆ ಮಾಡಿದರೆ ಆಕೆಯ ಮಾಂಗಲ್ಯ ಭಾಗ್ಯ ಗಟ್ಟಿಯಾಗಿರುತ್ತದೆ. ವೈವಾಹಿಕ ಜೀವನ ಸುಖಮಯವಾಗಿರುತ್ತದೆ ಎಂದು ಹೇಳಲಾಗುತ್ತದೆ.
ಆದರೆ ಗೌರಿ ಪೂಜೆಯನ್ನು ಹೇಗೆ ಬೇಕೋ ಹಾಗೆ ಮಾಡುವುದಲ್ಲ.ಅದಕ್ಕೂ ಒಂದು ನಿಯಮ ಅನ್ನುವುದು ಇದೆ. ಅದನ್ನು ಪಾಲಿಸಿಕೊಂಡು ಪೂಜೆ ಮಾಡಿದರೆ ಮಾತ್ರ ಗೌರಿ ಒಲಿಯುತ್ತಾಳೆ
ಗೌರಿ ಪೂಜೆ ಮಾಡುವಾಗ ೧೬ ಬಗೆಯ ಹೂವನ್ನು ಅರ್ಪಿಸಬೇಕು, ೧೬ ಎಳೆಯ ದಾರದ ಪೂಜೆ ಮಾಡಬೇಕು. ೧೬ ಬಗೆಯ ನೈವೆದಯ ಅರ್ಪಿಸಬೇಕು. ಆರತಿ ಮಾಡುವಾಗಲೂ ೧೬ ಬತ್ತಿ ಬಳಸಿ ಆರತಿ ಮಾಡಬೇಕು ಎಂದು ಹೇಳಲಾಗುತ್ತದೆ.
ಹಾಗೆಯೇ ಒಮ್ಮೆ ಗೌರಿ ಪೂಜೆ ಆರಂಭಿಸಿದರೆ ಸತತ 16 ವರ್ಷಗಳ ಕಾಲ ಪೂಜೆ ಮಾಡುತ್ತಾ ಬರಬೇಕು. ಹೀಗೆ ನಿಯಮಾನುಸಾರವಾಗಿ, ವಿಧಿವತ್ತಾಗಿ ತಾಯಿ ಗೌರಿಯನ್ನು ಪೂಜಿಸಿದರೆ ಆ ಮನೆ ಅಭಿವೃದ್ದಿಯನ್ನು ಯಾರೂ ತಡೆಯಲು ಸಾಧ್ಯವೇ ಇಲ್ಲ ಎನ್ನುವ ನಂಬಿಕೆಯೂ ಇದೆ.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.