ರಾಶಿ ಯಾವುದೇ ಇರಲಿ ವಿವಾಹಿತ ಮಹಿಳೆ ಕಪ್ಪು ದಾರವನ್ನು ಈ ಕೈಗೆ ಮಾತ್ರ ಕಟ್ಟ ಬೇಕು!ಕಟ್ಟುವ ಮುನ್ನ ದಾರದಲ್ಲಿ ಇಷ್ಟು ಗಂಟು ಹಾಕಿರಲೇ ಬೇಕು !ಇಲ್ಲವಾದರೆ...!
ಮಣಿಕಟ್ಟು ಅಥವಾ ಕಾಲಿಗೆ ಧರಿಸಿರುವ ಕಪ್ಪು ದಾರವು ದುಷ್ಟ ಕಣ್ಣುಗಳಿಂದ ರಕ್ಷಣೆ ನೀಡುತ್ತದೆ ಎನ್ನುವುದು ನಂಬಿಕೆ. ಕಪ್ಪು ದಾರವು ಮೂಲತಃ ನಕಾರಾತ್ಮಕ ಶಕ್ತಿಗಳನ್ನು ದೂರ ಇಡುತ್ತದೆ.
ಕಪ್ಪು ದಾರವನ್ನು ನಮಗಿಷ್ಟ ಬಂದ ಹಾಗೆ ಧರಿಸುವಂತಿಲ್ಲ. ಅದನ್ನು ಯಾರು ಯಾವ ಕೈ ಅಥವಾ ಕಾಲಿಗೆ ಕಟ್ಟಬೇಕು ಎನ್ನುವ ನಿಯಮವಿದೆ.
ವಿವಾಹಿತ ಮಹಿಳೆಯರು ಕಪ್ಪುದಾರವನ್ನು ಕಟ್ಟುವಾಗ ತಮ್ಮ ಎಡಗೈ ಅಥವಾ ಎಡ ಕಾಲಿಗೆ ಮಾತ್ರ ಕಟ್ಟಬೇಕು.ಇಲ್ಲವಾದರೆ ಇದು ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎನ್ನಲಾಗುತ್ತದೆ.
ಮದುವೆಯಾಗದವರು ಬಲ ಅಥವಾ ಎಡ ಯಾವ ಕೈಗೆ ಬೇಕಾದರೂ ಕಟ್ಟಬಹುದು. ಇದನ್ನು ಶುಭ ಎಂದೇ ಹೇಳಲಾಗುತ್ತದೆ.
ಇನ್ನು ವಿವಾಹಿತ ಮಹಿಳೆಯರು ಕಪ್ಪು ದಾರವನ್ನು ಕಟ್ಟುವ ಮುನ್ನ ಆ ದಾರಕ್ಕೆ ಸಣ್ಣ ಸಣ್ಣ 9 ಗಂಟುಗಳನ್ನು ಹಾಕಬೇಕು. ಈ ಗಂಟುಗಳನ್ನು ಹಾಕದೆ ಕೈಗೆ ದಾರ ಕಟ್ಟುವುದು ಅಶುಭ.
ವಿವಾಹಿತ ಮಹಿಳೆಯರು ಈ ರೀತಿ ನಿಯಮ ಅನುಸರಿಸಿ ಕೈಗೆ ದಾರ ಕಟ್ಟಿದರೆ ಅವರ ವೈವಾಹಿಕ ಬದುಕು ಸುಖಕರವಾಗಿ ಇರುವುದು. ಇವರ ಸುಂದರ ಬದುಕಿಗೆ ಯಾರ ಕೆಟ್ಟ ಕಣ್ಣೂ ಬೀಳುವುದಿಲ್ಲ ಎನ್ನಲಾಗುತ್ತದೆ.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ