ಮಾಲ್‌ನಲ್ಲಿ ಗೋಡೆ ಒರೆಸುತ್ತಿದ್ದವಳ ಲಕ್ ಬದಲಾಯಿಸಿದ ಶಾರುಕ್ ಖಾನ್.. ಈಕೆ ಇಂದು ಕೋಟಿ ಕೋಟಿ ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ನಟಿ!!
Mahira Khan: ವಿಧಿ ಎಂಬುದು ಯಾವಾಗ ಯಾರಿಗೆ ಹೇಗೆ ಕೈ ಹಿಡಿಯುತ್ತೆ ಹಾಗೂ ಕೈ ಬಿಡುತ್ತೆ ಎಂಬುದು ಊಹಿಸಲು ಕೂಡ ಸಾಧ್ಯವಿಲ್ಲ ಬಿಡಿ. ಹೀಗೆ ಕೆಲವೊಬ್ಬರು ಎಷ್ಟೆ ಪ್ರಯತ್ನ ಪಟ್ಟರು ಸಕ್ಸಸ್ ಕಾಣದೆ ಸೋಲು ಅನುಭವಿಸುತ್ತಾರೆ, ಇನ್ನೂ ಕೆಲವರು ಸಿಕ್ಕ ಒಂದು ಅವಕಾಶದಿಂದಲೇ ಸಿಕ್ಕಾಪಟ್ಟೆ ಹಿಟ್ ಆಗುತ್ತಾರೆ.
ಸಿನಿಮಾ ಇಂಡಸ್ಟ್ರಿಯಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವುದು ಅಷ್ಟೊಂಡು ಸುಲಭದ ಮಾತಲ್ಲ, ಅದರಲ್ಲೂ ಬಾಲಿವುಡ್ ಇಂಡಸ್ಟ್ರಿಯಲ್ಲಿ ಚ್ಯಾನ್ಸ್ ಪಡೆದುಕೊಳ್ಳಬೇಕು ಅಂದ್ರೆ ಅದಕ್ಕೆ ಅದೃಷ್ಟ ಮಾಡಿರಲೆ ಬೇಕು.
ಹೀಗೆ ಬಾಲಿವುಡ್‌ನ ಸ್ಟಾರ್ ನಟಿಯೊಬ್ಬರು ಬದುಕು ಕೂಡ ಕೇವಲ ಒಂದೆ ಒಂದು ಅವಕಾಶದಿಂದ ಚೇಂಜ್ ಆಗಿತ್ತು. ಇಂದು ಈ ನಟಿ 58 ಕೋಟಿ ಆಸ್ತಿಯ ಒಡತಿ ಎಂದರೆ ತಪ್ಪಾಗಲಾರದು.
ಬಾಲಿವುಡ್‌ನಲ್ಲಿ ಇರುವ ಸ್ಟಾರ್ ನಟರಲ್ಲಿ ಹಲವರು ನೆಪೋ ಕಿಡ್ಸ್ ಆಗಿದ್ದರೆ, ಇನ್ನೂ ಕೆಲವರು ತಮ್ಮ ಕಠಿಣವಾದ ಪರಿಶ್ರಮದ ಮೂಲಕ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟು ಗೆದ್ದವರು.
ಹೌದು, ನಾವು ಈ ದಿನ ಹೇಳಲು ಹೊರಟಿರುವುದು ಇಂತಹದ್ದೆ ಕಠಿಣ ಹಾದಿಯಲ್ಲಿ ಬೆಳೆದು ಬಂದು ಇಂದು ಸ್ಟಾರ್ ನಟಿಯಾಗಿ ಬಾಲಿವುಡ್‌ನಲ್ಲಿ ಮಿಂಚುತ್ತಿರುವ ಮಹಿರಾ ಖಾನ್ ಅವರ ಬಗ್ಗೆ.
ಮಾಲ್‌ಗಳಲ್ಲಿ ಕೆಲಸ ಮಾಡುತ್ತಾ, ತಮ್ಮ ದಿನದ ಊಟಕ್ಕೆ ಪರಿಶ್ರಮ ಪಡುತ್ತಿದ್ದ ಈ ನಟಿ, ಶಾರುಕ್ ಖಾನ್ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ. ಚ್ಯಾನ್ಸ್ ಸಿಕ್ಕ ಮೊದಲ ಸಿನಿಮಾದಲ್ಲಿಯೆ ಸಖತ್ ಆಗಿ ನಟಿಸಿ ಸೈ ಎನಿಸಿಕೊಳ್ಳುತ್ತಾರೆ.
2017 ರಲ್ಲಿ ಶಾರುಖ್ ಅವರ 'ರಯೀಸ್' ಮೂಲಕ ಮಾಹಿರಾ ಖಾನ್ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಾರೆ. ಈ ಸಿನಿಮಾದ ಮೂಲಕ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಮಾಹೀರ ಖಾನ್ ಇಂದು ಪಾಕಿಸ್ತಾನದ ಬಹು ಬೇಡಿಕೆ ನಟಿ ಅಂತಲೇ ಹೇಳಬಹುದು.
ಮಾಹಿರ ಕಾನ್ ಇಂದು ಪಾಕಿಸ್ತಾನ ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿದ್ದು, ಕೋಟಿ ಕೋಟಿ ಹನ ಸಂಪಾದನೆ ಮಾಡಿದ್ದಾರೆ.
ಈ ರೀತಿಯಾಗಿ ಮಾಡಿದ ಮೊದಲ ಸಿನಿಮಾದಲ್ಲಿಯೇ ಮಾಹಿರ ಖಾನ್ ಅವರ ಲಕ್ ಬದಲಾಗುತ್ತೆ, ಇದನ್ನು ಸ್ವತಃ ನಟಿಯೇ ಸಾಕಷ್ಟು ಸಂದರ್ಶನಗಳಲ್ಲಯೂ ಹೇಳಿಕೊಂಡಿದ್ದಾರೆ.