Work From Home: ವರ್ಕ್ ಫ್ರಮ್ ಹೋಂ ಮಾಡುವಾಗ ಈ ರೀತಿ ಹೆಚ್ಚಿಸಿ ನಿಮ್ಮ ವೈ-ಫ್ಗೈ ವೇಗ
1. ರೌಟರ್ ಅನ್ನು ಸ್ವಲ್ಪ ಕಾಲ ಸ್ಥಗಿತಗೊಳಿಸಿ - ವರ್ತಮಾನದಲ್ಲಿ ಕೊರೊನಾ ಮಹಾಮಾರಿಯ ಕಾರಣ ಎಲ್ಲರೂ ಮನೆಯಿಂದಲೇ ಕಾರ್ಯನಿರ್ವಹಿಸುತ್ತಿರುವ ಪರಿಸ್ಥಿತಿ ಮತ್ತೊಮ್ಮೆ ಎದುರಾಗಿದೆ. ಹೀಗಿರುವಾಗ ವೈ-ಫೈ ರೌಟರ್ ಇಡೀ ದಿನ ಸಕ್ರೀಯವಾಗಿರುತ್ತದೆ. ಹೀಗಾಗಿ ಅದು ಬಿಸಿಯಾಗುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ರೌಟರ್ ಅನ್ನು ಸ್ವಲ್ಪ ಹೊತ್ತು ಆಫ್ ಮಾಡಿ ಇಲ್ಲದಿದ್ದರೆ ರೀಬೂಟ್ ಮಾಡಿ. ಇದರಿಂದ ನಿಮ್ಮ ರೌಟರ್ (Router) ಸರಿಯಾಗಿ ಕಾರ್ಯನಿರ್ವಹಣೆ ಆರಂಭಿಸಿ, ನಿಮ್ಮ ಇಂಟರ್ನೆಟ್ ಸ್ಪೀಡ್ ಕೂಡ ಹೆಚ್ಚಾಗಲಿದೆ. ಈ ಪದ್ಧತಿಯನ್ನು ನೀವು ಯಾವಾಗ ಬೇಕಾದರೂ ಅನುಸರಿಸಬಹುದಾಗಿದೆ.
2. ರೌಟರ್ ಅಪ್ಡೇಟ್ ಮಾಡಿ - ರೌಟರ್ ಅಪ್ಡೇಟ್ ಗಾಗಿ ಫರ್ಮ್ ವೇರ್ ಗಳನ್ನು ಬಿಡಲಾಗುತ್ತದೆ. ಆದರೆ ಬಹುತೇಕರಿಗೆ ಈ ಕುರಿತು ಮಾಹಿತಿ ಇರುವುದಿಲ್ಲ. ಹೀಗಾಗಿ ಕೂಡಲೇ ನಿಮ್ಮ ರೌಟರ್ ಗಾಗಿ ಬಿಡಲಾಗಿರುವ ಹೊಸ ಅಪ್ಡೇಟ್ ಗಳನ್ನೂ ಚೆಕ್ ಮಾಡಿ, ಕೂಡಲೇ ನಿಮ್ಮ ಡಿವೈಸ್ ಅಪ್ಡೇಟ್ ಮಾಡಿ. ಇದರಿಂದ ನಿಮ್ಮ ಡಿವೈಸ್ ಪುನಃ ಹೊಸ ಡಿವೈಸ್ ನಂತೆ ಕಾರ್ಯನಿರ್ವಹಿಸಲು ಆರಂಭಿಸುತ್ತದೆ.
3. ರೌಟರ್ ಅನ್ನು ಸರಿಯಾದ ಜಾಗದಲ್ಲಿಡಿ- ಸರಿಯಾದ ನೆಟ್ವರ್ಕ್ (Internet) ಪಡೆಯಲು ನೀವು ನಿಮ್ಮ ಮನೆಯಲ್ಲಿ ರೌಟರ್ ಅನ್ನು ಯಾವ ಸ್ಥಳದಲ್ಲಿ ಅಳವಡಿಸಿದ್ದೀರಿ ಎಂಬುದು ತುಂಬಾ ಮಹತ್ವವಾಗಿದೆ. ಅತಿ ಹೆಚ್ಚು ಸಿಗ್ನಲ್ ಬರುವ ಜಾಗದಲ್ಲಿ ನೀವು ನಿಮ್ಮ ವೈ-ಫೈ ರೌಟರ್ ಅನ್ನು ಅಳವಡಿಸಬೇಕು. ನಿಮ್ಮ ವೈ-ಫೈಗೆ ಸಿಗ್ನಲ್ ಎಲೆಕ್ಟ್ರೋಮ್ಯಾಗ್ನೆಟಿಕ್ ರೇಡಿಯೇಶನ್ ಗಳ ಮೂಲಕ ಪ್ರವೇಶಿಸುತ್ತದೆ. ಕೆಲ ಆಬ್ಜೆಕ್ಟ್ ಗಳು ಈ ರೇಡಿಯೇಶನ್ ಅನ್ನು ತಡೆಹಿಡಿಯುತ್ತವೆ ಮತ್ತು ಕೆಲ ಆಬ್ಜೆಕ್ಟ್ ಗಳು ಬಿಟ್ಟುಕೊಡುತ್ತವೆ.
4. ಆಂಟಿನಾದಿಂದ ಹೆಚ್ಚಿನ ಸಪೋರ್ಟ್ ಸಿಗುತ್ತದೆ - ನೀವು ನಿಮ್ಮ ಮನೆಯಲ್ಲಿ ಅಳವಡಿಸಿರುವ ರೌಟರ್ಗೆ ಹೊರಭಾಗದ ಅಂಟಿನಗಳಿವೆಯೇ ಎಂಬುದನ್ನು ಎಂದಾದರೂ ಪರಿಶೀಲಿಸಿದ್ದೀರಾ? ಉತ್ತಮ ಸಿಗ್ನಲ್ ಪಡೆಯಲು ನೀವು ಒಂದು ಎಕ್ಸ್ಟರ್ನಲ್ ಆಂಟಿನಾ ಖರೀದಿಸಿ ಅಳವಡಿಸಬಹುದು. ಹಲವು ಕಂಪನಿಗಳು ಆಂಟಿನಾಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡುತ್ತವೆ. ಯಾವ ದಿಕ್ಕಿನಲ್ಲಿ ಆಂಟಿನಾಗಳಿವೆಯೋ ಅದೇ ದಿಕ್ಕಿನಲ್ಲಿ ರೌಟರ್ ಸಿಗ್ನಲ್ ರವಾನಿಸುತ್ತದೆ.
5. ಇತರೆ ಡಿವೈಸ್ ಗಳನ್ನು ಡಿಸ್ಕನೆಕ್ಟ್ ಮಾಡಿ - ಒಂದು ವೇಳೆ ನಿಮಗೆ ಲ್ಯಾಪ್ ಟಾಪ್ ನಲ್ಲಿ ವೇಗದ ಇಂಟರ್ನೆಟ್ ಬೇಕಿದ್ದರೆ, ನೀವು ಬಳಕೆ ಮಾಡದ ಡಿವೈಸ್ ನಲ್ಲಿ ವೈ-ಫೈ ಸ್ಥಗಿತಗೊಳಿಸಿ. ಇದರಿಂದ ಕಡಿಮೆ ಉಪಕರಣಗಳ ಮೇಲೆ ಬ್ಯಾಂಡ್ ವಿಡ್ತ್ ಖರ್ಚಾಗುವ ಕಾರಣ ಇಂಟರ್ನೆಟ್ ಸ್ಪೀಡ್ ಕೂಡ ಹೆಚ್ಚಾಗಲಿದೆ.