World Diabetes Day: ನಿಮಗೂ ಮಧುಮೇಹ ಇದ್ಯಾ? ಫಟಾಫಟ್ ಅಂತ ಈ ರೀತಿ ಪತ್ತೆಹಚ್ಚಿ!
ವಿಶ್ವದಾದ್ಯಂತ ಇಂದು ವಿಶ್ವ ಮಧುಮೇಹ ದಿನವನ್ನು ಆಚರಿಸಲಾಗುತ್ತಿದೆ. ದೇಹವು ಸಾಕಷ್ಟು ಇನ್ಸುಲಿನ್ ಉತ್ಪಾದಿಸಲು ಸಾಧ್ಯವಾಗದ ಅಥವಾ ಇನ್ಸುಲಿನ್ ಅನ್ನು ಪರಿಣಾಮಕಾರಿಯಾಗಿ ಬಳಸಲು ಸಾಧ್ಯವಾಗದ ಪರಿಸ್ಥಿತಿಯನ್ನು ಮಧುಮೇಹ ಎನ್ನಲಾಗುತ್ತದೆ.
ಸಾಮಾನ್ಯವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಸಾಧ್ಯವಾಗದಿದ್ದಾಗ ಇದು ಕಣ್ಣು, ಕಾಲು, ಹೃದಯ, ಮೂತ್ರಪಿಂಡಗಳ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದನ್ನು ತಪ್ಪಿಸಲು ಮಧುಮೇಹ ಇದೆಯೇ ಎಂಬುದನ್ನು ಮೊದಲೇ ತಿಳಿದು ಇದಕ್ಕಾಗಿ ಸೂಕ್ತ ಚಿಕಿತ್ಸೆ ಪಡೆಯುವುದು ಉತ್ತಮವಾಗಿದೆ.
ನಮ್ಮಲ್ಲಿ ಕಂಡು ಬರುವ ಕೆಲವು ಸಾಮಾನ್ಯ ಲಕ್ಷಣಗಳೂ ಕೂಡ ಮಧುಮೇಹದ ಎಚ್ಚರಿಕೆಯ ಗಂಟೆಯಾಗಿದೆ. ಇವುಗಳಲ್ಲಿ ಕೆಲವು ನಮ್ಮ ದೇಹದಲ್ಲಿ ಮಧುಮೇಹ ಯಾವ ಹಂತದಲ್ಲಿದೆ ಎಂಬುದನ್ನೂ ಕೂಡ ತಿಳಿಸುತ್ತದೆ. ಅಂತಹ ಲಕ್ಷಣಗಳೆಂದರೆ...
ಆಗಾಗ್ಗೆ ಅಥವಾ ಅತಿಯಾದ ಮೂತ್ರ ವಿಸರ್ಜನೆ ಮಧುಮೇಹ ರೋಗಿಗಳಲ್ಲಿ ಕಂಡುಬರುವ ಸಾಮಾನ್ಯ ಲಕ್ಷಣವಾಗಿದೆ.
ಎಷ್ಟೇ ನೀರು ಕುಡಿದರೂ ಸಮಾಧಾನವಾಗದೇ ಇರುವುದು, ಹೆಚ್ಚಿನ ಬಾಯಾರಿಕೆಯೂ ಕೂಡ ಟೈಪ್-1 ಹಾಗೂ ಟೈಪ್-2 ಮಧುಮೇಹಿಗಳಲ್ಲಿ ಕಂಡು ಬರುವ ಸಾಮಾನ್ಯ ಲಕ್ಷಣ.
ಪದೇ ಪದೇ ದೃಷ್ಟಿ ಮಂದವಾಗುತ್ತಿದ್ದರೆ ಅಂತಹವರು ಸಹ ತಡಮಾಡದೆ ಶುಗರ್ ಟೆಸ್ಟ್ ಮಾಡಿಸುವುದು ಉತ್ತಮ.
ಕೈ, ಕಾಲು, ಅಂಗೈ, ಪಾದಗಳಲ್ಲಿ ಪದೇ ಪದೇ ಜುಮ್ಮೆನಿಸುವ ಅಥವಾ ಮರಗಟ್ಟುವಿಕೆ ಅನುಭವವಾಗುತ್ತಿದ್ದರೆ ಇದೂ ಸಹ ಡಯಾಬಿಟಿಸ್ ರೋಗಿಗಳಲ್ಲಿ ಕಂಡುಬರುವ ಸಾಮಾನ್ಯ ಲಕ್ಷಣ.
ಯಾವುದೇ ಗುರಿಯಿಲ್ಲದೆ ಇದ್ದಕ್ಕಿದ್ದಂತೆ ಅತಿಯಾದ ತೂಕ ಕಳೆದುಕೊಳ್ಳುವಿಕೆಯು ಮಧುಮೇಹದ ಎಚ್ಚರಿಕೆ ಗಂಟೆಯಾಗಿದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.