World Liver Day: ಯಕೃತ್ತಿನ ಕಾಯಿಲೆಗಳಿಂದ ರಕ್ಷಣೆಗಾಗಿ ಇಂದಿನಿಂದಲೇ ಈ ಆಹಾರಗಳಿಂದ ಅಂತರ ಕಾಯ್ದುಕೊಳ್ಳಿ
ಪ್ರತಿ ವರ್ಷ ಏಪ್ರಿಲ್ 19 ರಂದು ವಿಶ್ವ ಯಕೃತ್ತಿನ ದಿನವನ್ನು ಆಚರಿಸಲಾಗುತ್ತದೆ. ನಮ್ಮ ಕಳಪೆ ಆಹಾರ ಪದ್ದತಿಯಿಂದಾಗಿ ಕೊಬ್ಬಿನ ಲಿವರ್/ಫ್ಯಾಟಿ ಲಿವರ್ ಸಮಸ್ಯೆ ಸರ್ವೇ ಸಾಮಾನ್ಯವಾಗಿದೆ. ನೀವು ಕೆಲವು ಆಹಾರ-ಪಾನೀಯಗಳಿಂದ ಅಂತರ ಕಾಯ್ದುಕೊಳ್ಳುವ ಮೂಲಕ ನಿಮ್ಮ ಯಕೃತ್ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅವುಗಳೆಂದರೆ...
ಮದ್ಯಪಾನ ಸೇವನೆಯು ಲಿವರ್ ಎಂದರೆ ಯಕೃತ್ ಅನ್ನು ಹಾನಿಗೊಳಿಸುತ್ತದೆ. ಫ್ಯಾಟಿ ಲಿವರ್ ನಂತಹ ಲಿವರ್ ಸಂಬಂಧಿತ ಸಮಸ್ಯೆಗಳಿಂದ ರಕ್ಷಣೆಗಾಗಿ ಮದ್ಯಪಾನವನ್ನು ತ್ಯಜಿಸುವುದು ಒಳ್ಳೆಯದು.
ಅತಿಯಾದ ಸಕ್ಕರೆ ಬಳಕೆಯು ಯಕೃತ್ತಿನ ಸಮಸ್ಯೆಗೆ ಕಾರಣವಾಗಬಹುದು. ಇದನ್ನು ತಪ್ಪಿಸಲು ಸಕ್ಕರೆ ಅಥವಾ ಸಕ್ಕರೆ ಪರ್ಯಾಯಗಳ ಬಳಕೆಯನ್ನು ಕಡಿಮೆ ಮಾಡಿ.
ಅತಿಯಾದ ಕರಿದ ಆಹಾರಗಳು ಕೊಬ್ಬಿನ ಯಕೃತ್ತಿನಂತಹ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಮಾತ್ರವಲ್ಲದೆ, ಇದು ತೂಕ ಹೆಚ್ಚಳಕ್ಕೂ ಕಾರಣವಾಗುತ್ತದೆ. ಆರೋಗ್ಯಕರ ಯಕೃತ್ ಗಾಗಿ ಕರಿದ ಆಹಾರಗಳ ಸೇವನೆಯನ್ನು ತಪ್ಪಿಸಿ.
ಹೆಚ್ಚುವರಿ ಉಪ್ಪನ್ನು ಸೇವಿಸುವುದರಿಂದ NAFLD ಅಪಾಯವನ್ನು ಹೆಚ್ಚಿಸುತ್ತದೆ. ಇದು ಯಕೃತ್ತಿಗೆ ಹೆಚ್ಚಿನ ಹಾನಿಯನ್ನುಂಟುಮಾಡುತ್ತದೆ.
ಬಿಳಿ ಬ್ರೆಡ್, ಅತಿಯಾದ ಮೈದಾ ಬಳಕೆಯೂ ಯಕೃತ್ತಿನ ಸಮಸ್ಯೆಯನ್ನು ಹೆಚ್ಚಿಸುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.