World Milk Day: ಈ 5 ಆಹಾರಗಳ ಸೇವನೆ ಬಳಿಕ ಎಂದಿಗೂ ಹಾಲು ಕುಡಿಯಬೇಡಿ
ನಿಂಬೆಹಣ್ಣಿನ ಸೇವನೆಯ ನಂತರ ಹಾಲು : ನಿಂಬೆಹಣ್ಣಿನ ಸೇವನೆಯ ನಂತರ ಹಾಲು ಸೇವಿಸಬಾರದು. ಇದರ ಹೊರತಾಗಿ ಹುಳಿ ಪದಾರ್ಥಗಳನ್ನು ಸೇವಿಸಿದ ನಂತರವೂ ಹಾಲು ಸೇವಿಸಬಾರದು. ಇದರಿಂದ ಆರೋಗ್ಯ ಕೆಡಬಹುದು.
ಮಾಂಸಾಹಾರ ಸೇವನೆ ಬಳಿಕ ಹಾಲು: ನೀವು ಮಾಂಸಾಹಾರ ಮತ್ತು ಮೀನು ಸೇವಿಸುವವರಾಗಿದ್ದರೆ, ಮೀನು ಸೇವಿಸಿದ ತಕ್ಷಣ ಹಾಲನ್ನು ಸೇವಿಸುವುದನ್ನು ತಪ್ಪಿಸಬೇಕು. ಇದರಿಂದ ಹಲವು ಆರೋಗ್ಯ ಸಮಸ್ಯೆಗಳು ನಿಮ್ಮನ್ನು ತೊಂದರೆಗೊಳಿಸಬಹುದು.
ಮೊಸರು ಹಾಲು ಒಟ್ಟಿಗೆ ಸೇವಿಸಲೇಬಾರದು : ಮೊಸರು ತಿಂದ ತಕ್ಷಣ ಹಾಲನ್ನು ಸೇವಿಸಬಾರದು. ಹೀಗೆ ಮಾಡುವುದರಿಂದ ಅಜೀರ್ಣ ಸಮಸ್ಯೆ ಉಂಟಾಗಬಹುದು.
ಉದ್ದಿನಬೇಳೆಯಿಂದ ತಯಾರಿಸಿದ ಆಹಾರ ಸೇವನೆ ಬಳಿಕ ಹಾಲು ಸೇವಿಸದಿದ್ದರೆ ಒಳಿತು : ನೀವು ಉದ್ದಿನಬೇಳೆಯನ್ನು ಸೇವಿಸುತ್ತಿದ್ದರೆ, ಸುಮಾರು 2 ಅಥವಾ 3 ಗಂಟೆಗಳ ನಂತರ ಹಾಲನ್ನು ಸೇವಿಸಿ. ಇಲ್ಲದಿದ್ದರೆ ಇದು ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು.
ಉಪ್ಪು ಸೇವಿಸಿದ ನಂತರ ಹಾಲು ಸೇವನೆ ಹಾನಿಕಾರಕ: ಉಪ್ಪು ಸೇವಿಸಿದ ನಂತರ ಸ್ವಲ್ಪ ಸಮಯದ ನಂತರ ಹಾಲು ಸೇವಿಸಬಹುದು. ಆದರೆ, ಉಪ್ಪು ಸೇವಿಸಿದ ನಂತರ ಹಾಲು ಸೇವನೆ ಹಾನಿಕಾರಕ. ಏಕೆಂದರೆ ಹೊಟ್ಟೆಯೊಳಗೆ ಉಪ್ಪು ಮತ್ತು ಹಾಲು ಬೆರೆತಾಗ ಹೊಟ್ಟೆಗೆ ಹಾನಿಯಾಗುತ್ತದೆ.