ವಿಶ್ವದ 5 ಅತ್ಯಂತ ಅಪಾಯಕಾರಿ ಸಸ್ಯ ಮತ್ತು ಹೂವುಗಳು; ಮುಟ್ಟಿದ್ರೆ ಪ್ರಾಣವೇ ಹೊಗುತ್ತೆ!
ಹಾಗ್ವೀಡ್ ಹೆಸರಿನ ಸಸ್ಯವನ್ನು ಹೆರಾಕ್ಲಿಯಮ್ ಮಾಂಟೇಜಿಯಮ್ ಎಂದು ಕರೆಯಲಾಗುತ್ತದೆ. ಇದರ ಹೂವು ಅತ್ಯಂತ ವಿಷಕಾರಿಯಾಗಿದೆ. ಯಾರಾದರೂ ಈ ಹೂವನ್ನು ಮುಟ್ಟಿದರೆ ಅದು ದೇಹದ ಮೇಲೆ ಗಾಯಗಳನ್ನುಂಟು ಮಾಡುತ್ತದೆ. ಅಲ್ಲದೆ ಇದು ಚರ್ಮದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ಹಾಗ್ವೀಡ್ ಹೂವುಗಳಿಂದ ಚರ್ಮದ ಕ್ಯಾನ್ಸರ್ ಬರುತ್ತದೆ ಎಂದು ಹೇಳಲಾಗಿದೆ.
ವಿಶ್ವದ ಅತ್ಯಂತ ವಿಷಕಾರಿ ಸಸ್ಯಗಳಲ್ಲಿ ಅಕೋನಿಟಮ್ ಕೂಡ ಸೇರಿದೆ. ಈ ಸಸ್ಯದ ಎಲೆಗಳು ಮತ್ತು ಬೇರುಗಳು ತುಂಬಾ ವಿಷಕಾರಿ. ಇದನ್ನು ಟಚ್ ಮಾಡಿದರೆ ವ್ಯಕ್ತಿಯ ಹೃದಯ ಬಡಿತವೇ ನಿಲ್ಲಲು ಪ್ರಾರಂಭಿಸುತ್ತದೆ. ಇದು ಸಾವಿಗೆ ಸಹ ಕಾರಣವಾಗಬಹುದು. ಸಸ್ಯದ ಬೇರಿನಲ್ಲಿರುವ ವಿಷವು ನೇರವಾಗಿ ಮೆದುಳಿನ ಮೇಲೆ ದಾಳಿ ಮಾಡುತ್ತದೆ. ಯಾರಾದರೂ ಅಕಸ್ಮಾತ್ ಇದನ್ನು ತಿಂದರೆ ಸಾಯುವುದು ಖಚಿತ.
ರಿಕಿನಸ್ ಕಮ್ಯುನಿಸ್ ಕಂಟಿಗಿಡವನ್ನು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಇದನ್ನು ರಿಸಿನ್ ಎಂದೂ ಕರೆಯುತ್ತಾರೆ ಮತ್ತು ಕ್ಯಾಸ್ಟರ್ ಆಯಿಲ್ ಅನ್ನು ಇದರ ಬೀಜಗಳಿಂದ ತಯಾರಿಸಲಾಗುತ್ತದೆ. ಈ ಪೊದೆ ಸಸ್ಯವು ಮಾನವ ದೇಹಕ್ಕೆ ಜೀವಕೋಶಗಳನ್ನು ತೊಡೆದುಹಾಕುತ್ತದೆ. ಈ ಕಾರಣದಿಂದಾಗಿ ಮೊದಲಿಗೆ ವಾಂತಿ ಮತ್ತು ಅತಿಸಾರದ ಸಮಸ್ಯೆಯುಂಟಾಗುತ್ತದೆ. ಇದು ಕೂಡ ಯಾವುದೇ ವ್ಯಕ್ತಿಯ ಆರೋಗ್ಯಕ್ಕೆ ಮಾರಕವೆಂದು ಪರಿಗಣಿಸಲಾಗಿದೆ.
ಫ್ಲೋರಿಡಾ ಮತ್ತು ಕೆರಿಬಿಯನ್ ದ್ವೀಪಗಳಲ್ಲಿ ಕಂಡುಬರುವ ಮಂಚಿನೀಲ್ ಸಸ್ಯವು ತುಂಬಾ ಅಪಾಯಕಾರಿಯಾಗಿದೆ. ಇದನ್ನು ಹಿಪ್ಪೋಮನೆ ಮ್ಯಾನ್ಸಿನಿಲ್ಲಾ ಎಂದೂ ಕರೆಯುತ್ತಾರೆ. ಈ ಗಿಡವೂ ಫಲ ನೀಡುತ್ತಿದ್ದು, ಗಿಡದ ಮೇಲೆ ಬೀಳುವ ನೀರನ್ನು ಯಾರಾದರೂ ಮುಟ್ಟಿದರೆ ಪ್ರಾಣ ಕಳೆದುಕೊಳ್ಳಬಹುದು. ಈ ಸಸ್ಯವನ್ನು ಸುಟ್ಟ ನಂತರ ಬರುವ ಹೊಗೆಯಿಂದ ವ್ಯಕ್ತಿ ಕುರುಡನಾಗುತ್ತಾನೆ. ಇದರೊಂದಿಗೆ ಈ ಸಸ್ಯದಿಂದ ಉಸಿರಾಟದ ಕಾಯಿಲೆಯ ಅಪಾಯವೂ ಉಂಟಾಗುತ್ತದೆ.
ಅಪಾಯಕಾರಿ ಸಸ್ಯಗಳ ಪಟ್ಟಿಯಲ್ಲಿ ಅಬ್ರಿನ್ ಕೂಡ ಸೇರಿದೆ. ಇದು ನೋಡಲು ಕೆಂಪು ಬೆರ್ರಿಯಂತೆ ಕಾಣುತ್ತದೆ. ಆದರೆ ಇದು ಯಾರನ್ನಾದರೂ ಕೊಲ್ಲಬಹುದು. ಇದರ ಹಣ್ಣಿನ ಬೀಜಗಳು ತುಂಬಾ ಅಪಾಯಕಾರಿ. ಯಾರಾದರೂ ಈ ಬೀಜವನ್ನು ತಿಂದರೆ ಸಾಯುವುದು ಗ್ಯಾರಂಟಿ.