ಚೀನಾ ಪರಿಚಯಿಸಿದ ವಿಶ್ವದ ಅತಿ ವೇಗದ ಮೆಗ್ಲೇವ್ ರೈಲಿನ ಬಗ್ಗೆ ನಿಮಗೆಷ್ಟು ಗೊತ್ತು..?
ಮ್ಯಾಗ್ಲೆವ್ ಬುಲೆಟ್ ರೈಲು ಚೀನಾದ ಕಿಂಗ್ಡಾವೊ ನಗರದಲ್ಲಿ ಪಾದಾರ್ಪಣೆ ಮಾಡಿತು. ಈ ಅಪ್ರತಿಮ ಕ್ಷಣವನ್ನು ಸೆರೆಹಿಡಿಯಲು ಪ್ರವಾಸಿಗರ ದಂಡೇ ಆಗಮಿಸಿತ್ತು. ಮ್ಯಾಗ್ನೆಟಿಕ್ ಲೆವಿಟೇಶನ್ ತಂತ್ರಜ್ಞಾನವನ್ನು ಬಳಸಿಕೊಂಡು, ವಿದ್ಯುತ್ಕಾಂತೀಯ ಶಕ್ತಿಗಳಿಂದ ರೈಲು ಹಳಿಗಳ ಮೇಲೆ ಸಂಚರಿಸುತ್ತದೆ. ಆಯಸ್ಕಾಂತೀಯ ತೇಲುವಿಕೆಯಿಂದ ರೈಲು ಹಳಿಯನ್ನು ಸ್ಪರ್ಶಿಸದೇ ವೇಗವಾಗಿ ಚಲಿಸುತ್ತದೆ.
ಮ್ಯಾಗ್ಲೆವ್ ಬುಲೆಟ್ ರೈಲು ಗಂಟೆಗೆ 600 ಕಿಲೋಮೀಟರ್ ಅಥವಾ ಗಂಟೆಗೆ 373 ಮೈಲಿ ವೇಗದಲ್ಲಿ ಚಲಿಸಬಹುದು. ಇದು ಶಾಂಘೈ ಮತ್ತು ಬೀಜಿಂಗ್ ನಡುವಿನ 1,000 ಕಿ.ಮೀ ದೂರವನ್ನು ಕೇವಲ 2.5 ಗಂಟೆಯಲ್ಲಿ ತಲುಪುತ್ತದೆ. ಇದೇ ದೂರವನ್ನು ವಿಮಾನದಲ್ಲಿ ಕ್ರಮಿಸಲು 3 ಗಂಟೆ ಹಾಗೂ ಹೈಸ್ಪೀಡ್ ರೈಲಿನಲ್ಲಿ 5.5 ಗಂಟೆ ಬೇಕಾಗುತ್ತದೆ. ಹಾಲಿ ಇರುವ ಬುಲೆಟ್ ರೈಲುಗಳು ಗಂಟೆಗೆ ಗರಿಷ್ಠ 350 ಕಿ.ಮೀ. ವೇಗದಲ್ಲಿ ಚಲಿಸುತ್ತವೆ.
ದೇಶದ ಆರ್ಥಿಕತೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲು 3 ಗಂಟೆಗಳ ಪ್ರಯಾಣ ವಲಯಗಳನ್ನು ರಚಿಸುವ ಚೀನಾದ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವೇ ಈ ಮ್ಯಾಗ್ಲೆವ್ ರೈಲು. ಹೆಚ್ಚಿನ ಆಸನ ಸಾಮರ್ಥ್ಯದೊಂದಿಗೆ, ರೈಲು ಸುಧಾರಿತ ಸಾರಿಗೆ ವ್ಯವಸ್ಥೆಗೆ ಬಹುದೊಡ್ಡ ಕೊಡುಗೆ ನೀಡುತ್ತದೆ ಎಂದು ಅಂದಾಜಿಸಲಾಗಿದೆ.
ಹೈಸ್ಪೀಡ್ ರೈಲು ಸೇವೆಯಲ್ಲಿ ಚೀನಾ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಮೆಗ್ಲೇವ್ ರೈಲಿನ ಹೈಸ್ಪೀಡ್ ಮಾದರಿಯನ್ನು ಚೀನಾ ಸಿದ್ಧಪಡಿಸಿರುವುದು ಇದೇ ಮೊದಲು. ಸರ್ಕಾರಿ ಸ್ವಾಮ್ಯದ CRRC ಮ್ಯಾಗ್ಲೆವ್ ರೈಲಿನ ತಯಾರಕರು.
ಮ್ಯಾಗ್ಲೆವ್ ರೈಲಿನಲ್ಲಿ ಪೈಲಟ್ ಕುಳಿತುಕೊಳ್ಳುವ ಡೆಕ್ ಈ ಚಿತ್ರದಲ್ಲಿ ತೋರಿಸಿರುವಂತೆ ಭವಿಷ್ಯದಲ್ಲಿ ವಿನ್ಯಾಸಗೊಳಿಸಲಾಗುತ್ತದೆ. ಪ್ರಯಾಣಿಕರ ಅನುಕೂಲಕ್ಕಾಗಿ ಅತ್ಯದ್ಭುತ ಒಳಾಂಗಣ ಮಾದರಿಯನ್ನು ಈ ರೈಲು ಹೊಂದಿರಲಿದೆ.