World`s First Google Retail Store - ವಿಶ್ವದ ಮೊಟ್ಟಮೊದಲ ರಿಟೇಲ್ ಸ್ಟೋರ್ ತೆರೆದ Google, ಇಲ್ಲಿದೆ ಒಳನೋಟ
1. Googles First Retail Store - Apple ದಾರಿಯನ್ನು ತುಳಿದಿರುವ ವಿಶ್ವದ ತಂತ್ರಜ್ಞಾನದ ದೈತ್ಯ ಕಂಪನಿ Google, ವಿಶ್ವದ ತನ್ನ ಮೊಟ್ಟಮೊದಲ ರಿಟೇಲ್ ಸ್ಟೋರ್ ಅನ್ನು ನ್ಯೂಯಾರ್ಕ್ ನಲ್ಲಿ ತೆರೆದಿದೆ. ತನ್ನ ಈ ರಿಟೇಲ್ ಸ್ಟೋರ್ ಮೂಲಕ ಗೂಗಲ್ ಹಾರ್ಡ್ವೆಯರ್ ಹಾಗೂ ಇತರೆ ಕೆಲ ತನ್ನ ಉತ್ಪನ್ನಗಳನ್ನು ಮಾರಾಟ ಮಾಡಲಿದೆ. ಈ ಸ್ಟೋರ್ ಗ್ರಾಹಕರಿಗೆ ಒಟ್ಟು 24 ಭಾಷೆಗಳಲ್ಲಿ ಲಭ್ಯವಿದೆ.
2. Worlds First Google Retail Store - ತುಂಬಾ ಅದ್ದೂರಿಯಾಗಿದೆ ಈ ಶಾಪ್ - ಗ್ರಾಹಕರು ಈ ಡಿಜಿಟಲ್ ಸ್ಟೋರ್ ಗೆ ಕಾಲಿಡುತ್ತಿದ್ದಂತೆ, ಒಂದು ಡಿಜಿಟಲ್ ಹಾಗೂ ಫಿಸಿಕಲ್ ಸ್ಟೋರ್ ಅವರನ್ನು ಸ್ವಾಗತಿಸಲಿದೆ. ಇದಾದ ಬಳಿಕ ಅವರಿಗೆ ಲೈಟ್ ಇರುವ ಹಾಲ್ ಕಾಣಿಸಲಿದ್ದು, ಅದರಲ್ಲಿ ಹಲವು ರೀತಿಯ ಉತ್ಪನ್ನಗಳನ್ನು ಇರಿಸಲಾಗಿದೆ. ಈ ಶಾಪ್ ಅನ್ನು ತುಂಬಾ ಅದ್ದೂರಿಯಾಗಿ ನಿರ್ಮಿಸಲಾಗಿದೆ.
3. ಗೂಗಲ್ ನ ಈ ಅಂಗಡಿ ನ್ಯೂಯಾರ್ಕ್ ಸಿಟಿಯ Chelsea ಏರಿಯಾನಲ್ಲಿದೆ. ಗೂಗಲ್ ನ ಈ ಶಾಪ್ ಸುಮಾರು 5000 ಸ್ಕ್ವೆಯರ್ ಫೂಟ್ ವಿಸ್ತೀರ್ಣ ಜಾಗದಲ್ಲಿ ಹರಡಿದೆ. ಈ ಅಂಗಡಿಯಲ್ಲಿ ನಿಮಗೆ ಪಿಕ್ಸಲ್ ಫೋನ್, WearOS, Nest ಹಾಗೂ Fitbitಗಳಂತಹ ಡಿವೈಸ್ ಗಳು ಸಿಗಲಿವೆ. ಅಷ್ಟೇ ಅಲ್ಲ ಈ ಶಾಪ್ ನೋಡಲು ಕೂಡ ಆಕರ್ಷಕವಾಗಿದೆ. ಈ ಶಾಪ್ ನಲ್ಲಿ ನೀವು ನಿಮ್ಮ ಗೂಗಲ್ ಉಪಕರಣಗಳ ಸರ್ವಿಸಿಂಗ್ ಕೂಡ ಮಾಡಿಸಬಹುದು.
4. ಸಂತಸ ವ್ಯಕ್ತಪಡಿಸಿದ ಸುಂದರ್ ಪಿಚೈ - ಗೂಗಲ್ (Google) ಹಾಗೂ ಅಲ್ಫಾಬೆಟ್ (Alphabet) ಸಿಇಓ ಆಗಿರುವ ಸುಂದರ್ ಪಿಚೈ (Sunder Pichai), ತಮ್ಮ ಕಂಪನಿಯ ರಿಟೇಲ್ ಸ್ಟೋರ್ ಗೆ ಸಂಬಂಧಿಸಿದಂತೆ ಒಂದು ಟ್ವೀಟ್ ಮಾಡುವ ಮೂಲಕ 'ಈ ಸ್ಟೋರ್ ಇರುವ ಜಾಗಕ್ಕೆ LEED ಪ್ಲಾಟಿನಂ ರೇಟಿಂಗ್ ನೀಡಲಾಗಿದೆ. ತಾವು ನ್ಯೂಯಾರ್ಕ್ ಗೆ ಭೇಟಿ ನೀಡಿದಾಗ ಸ್ಟೋರ್ ಗೆ ಖಂಡಿತ ಭೇಟಿ ನೀಡುವುದಾಗಿ' ಹೇಳಿದ್ದಾರೆ.
5. ಈ ಸ್ಟೋರ್ ಅನ್ನು ತುಂಬಾ ಆಕರ್ಷಕ ಹಾಗೂ ಹೈ ಟೆಕ್ ಮಾಡಲಾಗಿದೆ. ಗ್ರಾಹಕರ ಎಂಜಾಯ್ ಮೆಂಟ್ ಗಾಗಿ ಅಲ್ಲಿ ಗೇಮಿಂಗ್ ಏರಿಯಾ ಕೂಡ ರಚಿಸಲಾಗಿದೆ. ಹೋಮ್ ಥಿಯೇಟರ್ ಟೆಸ್ಟಿಂಗ್ ಗಾಗಿ ಇದರಲ್ಲಿ ಸೌಂಡ್ ಪ್ರೂಫ್ ರೂಮ್ ಗಳನ್ನೂ ಕೂಡ ರಚಿಸಲಾಗಿದೆ. ಒಂದು ವೇಳೆ ಗ್ರಾಹಕ ಗೂಗಲ್ ನ ಪಿಕ್ಸೆಲ್ ಫೋನ್ ಬಳಸುವವರಾಗಿದ್ದರೆ ಹಾಗೂ ಅವರ ಫೋನ್ ನಲ್ಲಿ ದೋಷ ಇದ್ದರೆ, ಅವರು ಈ ರಿಟೇಲ್ ಶಾಪ್ ಗೆ ಭೇಟಿ ನೀಡಿ ತಮ್ಮ ಫೋನ್ ಅನ್ನು ಸರಿಪಡಿಸಬಹುದಾಗಿದೆ.
6. ಈ ರಿಟೇಲ್ ಸ್ಟೋರ್ ಜಾಗದಲ್ಲಿ ಈ ಮೊದಲು ಪೋಸ್ಟ್ ಆಫೀಸ್ ಹಾಗೂ ಸ್ಟಾರ್ಬಾಕ್ಸ್ ಕೆಫೆಟೇರಿಯಾ ಇರುತ್ತಿತ್ತು. ನೂತನ ಕಾರ್ಪೋರೆಟ್ ಲ್ಯಾಂಡ್ ಲಾರ್ಡ್ ನಿಯಾಗಳ ಅಡಿ ಇದೀಗ ಅವೆರಡರ ಲೀಸ್ ಅವಧಿ ಮುಕ್ತಾಯಗೊಂಡಿದೆ. ಹೀಗಾಗಿ ಅವುಗಳನ್ನು ಖಾಲಿಗೊಳಿಸಿ, ಆ ಜಾಗದಲ್ಲಿ ಗೂಗಲ್ ಶಾಪ್ ತೆರೆಯಲಾಗಿದೆ.