Worst Foods For Joint Pain: ಮಂಡಿ ನೋವಿಗೆ ಶತ್ರುಗಳಿದ್ದಂತೆ ಈ ಆಹಾರಗಳು
ಸಂಧಿವಾತವು ಕೀಲುಗಳಲ್ಲಿ ಊತ ಮತ್ತು ಅಪಾರನೋವನ್ನು ಉಂಟುಮಾಡುತ್ತದೆ. ಇದು ವಯೋಸಹಜವಾಗಿ ಸಂಭವಿಸುತ್ತದೆ. ಆದರೆ, ಕೆಲವು ಆಹಾರಗಳ ಸೇವನೆಯನ್ನು ತಪ್ಪಿಸುವುದರಿಂದ ಈ ಸಮಸ್ಯೆಗೆ ಸ್ವಲ್ಪ ಪರಿಹಾರ ಪಡೆಯಬಹುದು. ಅವುಗಳೆಂದರೆ...
ಅಕ್ಕಿಯಲ್ಲಿ ಕಂಡು ಬರುವ ಸಂಸ್ಕರಿಸಿದ ಕಾರ್ಬೋಹೈಡ್ರೇಟ್ಗಳು ಉರಿಯೂತವನ್ನು ಹೆಚ್ಚಿಸುತ್ತದೆ. ಅಕ್ಕಿ ಬದಲಿಗೆ ಸಿರಿಧಾನ್ಯಗಳನ್ನು ಬಳಸಬಹುದು.
ಮೊಸರು ಆರೋಗ್ಯಕ್ಕೆ ಒಳ್ಳೆಯದೇ ಆಗಿದ್ದರೂ ಇದರಲ್ಲಿರುವ ಕೆಸಿನ್ ಎಂಬ ಪ್ರೋಟೀನ್ ಉರಿಯೂತವನ್ನು ಉಂಟುಮಾಡಬಹುದು. ಇದು ಕೀಲು ನೋವನ್ನು ಹೆಚ್ಚಿಸಬಹುದು.
ಕೋಲ್ಡ್ ವಾಟರ್ ಕೂಡ ಕೀಲು ನೋವಿಗೆ ಶತ್ರುವಿದ್ದಂತೆ. ತಣ್ಣೀರು ಕುಡಿಯುವುದರಿಂದ ಕೀಲುಗಳಲ್ಲಿ ಬಿಗಿತ, ನೋವು ಹೆಚ್ಚಾಗಬಹುದು.
ತಂಪು ಪಾನೀಯಗಳಲ್ಲಿ ಕೃತಕ ಸಿಹಿಕಾರಕಗಳನ್ನು ಹೆಚ್ಚಾಗಿ ಬಳಸಲಾಗಿರುತ್ತದೆ. ಇದರ ಸೇವನೆಯು ಊತವನ್ನು ಹೆಚ್ಚಿಸಬಹುದು.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.