Bad Cholesterol ಮಟ್ಟವನ್ನು ನಿಯಂತ್ರಿಸಬೇಕೆ? ಅಪ್ಪಿತಪ್ಪಿಯೂ ಕೂಡ ಈ 5 ಆಹಾರಗಳನ್ನು ಸೇವಿಸಬೇಡಿ
ಆಹಾರವನ್ನು ಬೇಯಲು ನಾವು ಸಾಮಾನ್ಯವಾಗಿ ಅಡುಗೆ ಸೋಡಾವನ್ನು ಬಳಸುತ್ತೇವೆ, ಆದರೆ ಇದು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಹೃದಯಾಘಾತದ ಅಪಾಯವನ್ನು ಉಂಟುಮಾಡುತ್ತದೆ, ಹೀಗಾಗಿ ಸೀಮಿತ ಪ್ರಮಾಣದಲ್ಲಿ ತಿನ್ನುವ ಸೋಡಾವನ್ನು ಬಳಸುವುದು ಉತ್ತಮ.
ಭಾರತದಲ್ಲಿ ಬೆಣ್ಣೆ ಪ್ರಿಯರ ಕೊರತೆಯಿಲ್ಲ, ಹೆಚ್ಚಿನ ಆಹಾರಗಳಲ್ಲಿ ರುಚಿಯನ್ನು ಹೆಚ್ಚಿಸಲು ಬೆಣ್ಣೆಯನ್ನು ಬಳಸಲಾಗುತ್ತದೆ, ಆದರೆ ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಕಂಡುಬರುವ ಬೆಣ್ಣೆಯಲ್ಲಿ ಸ್ಯಾಚುರೇಟೆಡ್ ಕೊಬ್ಬಿನ ಅಂಶ ತುಂಬಾ ಹೆಚ್ಚಾಗಿರುತ್ತದೆ, ಇದು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ.
ಎಣ್ಣೆಯುಕ್ತ ಆಹಾರವು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಲು ಪ್ರಮುಖ ಕಾರಣವೆಂದು ಪರಿಗಣಿಸಲಾಗಿದೆ, ಎಣ್ಣೆಯುಕ್ತ ಆಹಾರವನ್ನು ತಿನ್ನುವ ಪ್ರವೃತ್ತಿಯು ಭಾರತದಲ್ಲಿ ಹೆಚ್ಚು, ಆದರೆ ಅಂತಹ ಅಭ್ಯಾಸಗಳನ್ನು ಎಷ್ಟು ಬೇಗ ತ್ಯಜಿಸುವಿರೋ ಅಷ್ಟು ಉತ್ತಮ. ಮಾರುಕಟ್ಟೆಯಲ್ಲಿ ಸಿಗುವ ಡೀಪ್ ಫ್ರೈಡ್ ಫುಡ್ ನಮ್ಮನ್ನು ಆಕರ್ಷಿಸಬಹುದು, ಆದರೆ ಇದು ನಮ್ಮ ಆರೋಗ್ಯದ ದೊಡ್ಡ ಶತ್ರು ಎಂಬುದು ನಿಮಗೆ ಗೊತ್ತಿರಲಿ.
ಮಾರುಕಟ್ಟೆಯಲ್ಲಿ ಸಿಗುವ ಹೆಚ್ಚಿನ ಪಾಪ್‌ಕಾರ್ನ್‌ನಲ್ಲಿ ಹೈಡ್ರೋಜನೇಟೆಡ್ ಆಯಿಲ್ ಇರುತ್ತದೆ, ಇದರಲ್ಲಿ ಅತಿ ಹೆಚ್ಚಿನ ಪ್ರಮಾಣದ ಕ್ಯಾಲೋರಿ ಹೊಂದಿರುತ್ತದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಬಹುದು. ಆದ್ದರಿಂದ ನೀವು ಮನೆಯಲ್ಲಿಯೇ ಪಾಪ್ ಕಾರ್ನ್ ತಯಾರಿಸಿ ಸೇವಿಸುವುದು ಎಂದಿಗೂ ಉತ್ತಮ.
ಮಾಂಸಾಹಾರ ಸೇವನೆಯಿಂದ ದೇಹಕ್ಕೆ ಪ್ರೋಟೀನ್ ಸಿಗುತ್ತದೆ, ದೇಹದ ಬೆಳವಣಿಗೆಗೆ ಅದು ಬಹಳ ಮುಖ್ಯವಾಗಿದೆ, ಆದರೆ ನೀವು ಸಂಸ್ಕರಿಸಿದ ಮಾಂಸವನ್ನು ಸೇವಿಸಿದರೆ, ಅದರಲ್ಲಿರುವ ಹೆಚ್ಚಿನ ಪ್ರಮಾಣದ ಕೊಲೆಸ್ಟ್ರಾಲ್ ಕಾರಣ ಹೃದ್ರೋಗದ ಅಪಾಯವು ಹೆಚ್ಚಾಗುತ್ತದೆ.