Yash Children: ಯಶ್ ಮಕ್ಕಳ ರಕ್ಷಾಬಂಧನ, ಯಥರ್ವನಿಗೆ ರಾಖಿ ಕಟ್ಟಿ ಸಿಹಿಮುತ್ತು ನೀಡಿದ ಐರಾ

Mon, 19 Aug 2024-8:12 pm,

ರಾಕಿಂಗ್ ಸ್ಟಾರ್ ಯಶ್‌ ಮತ್ತು ನಟಿ ರಾಧಿಕಾ ಪಂಡಿತ್​ ಮನೆಯಲ್ಲಿ ರಕ್ಷಾಬಂಧನ ಸಂಭ್ರಮ‌ ಮನೆ ಮಾಡಿತ್ತು. ತಮ್ಮ ಯಥರ್ವನಿಗೆ ರಾಖಿ ಕಟ್ಟಿದ ಐರಾ ಸಿಹಿಮುತ್ತು ನೀಡಿ ಸಂಭ್ರಮಿಸಿದಳು.

ಯಥರ್ವ ಹಾಗೂ ಐರಾ ಒಂದೇ ರೀತಿಯ ಡ್ರೆಸ್​ ಧರಿಸಿದ್ದರು. ಯಶ್ ಮಗಳು ಐರಾ ತನ್ನ ತಮ್ಮನಿಗೆ ಹಣೆಗೆ ಕುಂಕುಮ ಇಟ್ಟು, ರಾಖಿ ಕಟ್ಟಿ, ಸ್ವೀಟ್ ತಿನ್ನಿಸಿದಳು.

 ನಟಿ ರಾಧಿಕಾ ಪಂಡಿತ್ ಅವರು ತಮ್ಮ ಮಕ್ಕಳ ರಕ್ಷಾಬಂಧನದ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಪುಟ್ಟ ಪುಟ್ಟ, ದೊಡ್ಡ ಪ್ರೀತಿ.. ನಮ್ಮ ರಕ್ಷಾಬಂಧನ ಆಚರಣೆಯ ಕೆಲವು ಕ್ಷಣಗಳು. ನೀವೆಲ್ಲರೂ ನಿಮ್ಮ ಪ್ರೀತಿಪಾತ್ರರ ಜೊತೆಗೆ ಆಚರಿಸುತ್ತೀರಿ ಎಂದು ಭಾವಿಸುತ್ತೇವೆ ಎಂದು ರಾಧಿಕಾ ಪಂಡಿತ್ ಬರೆದುಕೊಂಡಿದ್ದಾರೆ.

ಸ್ಯಾಂಡಲ್​​ವುಡ್​​ನ ಸ್ಟಾರ್​ ಕಿಡ್ಸ್​ ಯಥರ್ವ್​ ಹಾಗೂ ಐರಾ ಪವಿತ್ರ ರಕ್ಷಾ ಬಂಧನವನ್ನು ಸಿಂಪಲ್ ಆಗಿ ಸೆಲೆಬ್ರೇಟ್ ಮಾಡಿದರು.

ರಾಕಿ ಕಟ್ಟಿದ ಬಳಿಕ ತನ್ನ ತಮ್ಮ ಯಥರ್ವ್‌ಗೆ ಸಿಹಿ ತಿನ್ನಿಸುತ್ತಿರುವ​ ಐರಾ 

ತನ್ನ ತಮ್ಮನನ್ನು ಅಪ್ಪಿಕೊಂಡು ಮುದ್ದು ಮಾಡಿದ ಐರಾ

ZEENEWS TRENDING STORIES

By continuing to use the site, you agree to the use of cookies. You can find out more by Tapping this link