8 ಕೋಟಿ ಬಂಗಲೆ, ದುಬಾರಿ ಕಾರುಗಳು.. ನಟ ಯಶ್ ಆಸ್ತಿ ಒಟ್ಟು ಎಷ್ಟು ಕೋಟಿ ಗೊತ್ತಾ?
Yash Net Worth: ನಟ ಯಶ್ ಎಷ್ಟು ಕೋಟಿ ಆಸ್ತಿಯ ಒಡೆಯ ಗೊತ್ತಾ? ಈ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ...
ಕೆಜಿಫ್ ಬಳಿಕ ನಟ ಯಶ್ ಸಾಕಷ್ಟು ಗ್ಯಾಪ್ ಕೊಟ್ಟು ಟಾಕ್ಸಿಕ್ ಸಿನಿಮಾ ಅನೌನ್ಸ್ ಮಾಡಿದರು. ಕೋಟಿಗಟ್ಟಲೇ ಸಂಭಾವನೆ ಪಡೆಯುವ ಯಶ್ ಆಸ್ತಿ ಎಷ್ಟು ಕೋಟಿ ಗೊತ್ತಾ?
ಸೌತ್ ಚಿತ್ರರಂಗದ 'ರಾಕಿ ಭಾಯ್' ಅಂದರೆ ಸೂಪರ್ ಸ್ಟಾರ್ ಯಶ್ ಇಂದು (ಜನವರಿ 8) ತಮ್ಮ 38ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 'ಕೆಜಿಎಫ್' ಮೂಲಕ ಯಶ್ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಹೆಸರು ಗಳಿಸಿದರು.
ಬಸ್ ಚಾಲಕನ ಮಗನಾಗಿ ಸೂಪರ್‌ಸ್ಟಾರ್ ಆಗುವವರೆಗೆ ಯಶ್ ಅವರ ಕಥೆ ಇತರರಿಗೆ ಸ್ಪೂರ್ತಿದಾಯಕವಾಗಿದೆ. ಯಶ್ ಇಂದು ಸೂಪರ್ ಸ್ಟಾರ್ ಆಗಿರಬಹುದು, ಆದರೆ ಯಶಸ್ಸಿನ ಹಾದಿ ಅವರಿಗೆ ಅಷ್ಟು ಸುಲಭವಲ್ಲ.
ಒಂದು ಕಾಲದಲ್ಲಿ ಇಡೀ ದಿನ ದುಡಿದು 50 ರೂಪಾಯಿ ಗಳಿಸಿದ್ದ ಯಶ್ ಇಂದು ಕನ್ನಡ ಚಿತ್ರರಂಗದ ಟಾಪ್ ನಟರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಮಾಡಿರುವ ವರದಿ ಪ್ರಕಾರ ಯಶ್ ಅವರ ಒಟ್ಟು ಆಸ್ತಿ 53 ಕೋಟಿ ರೂಪಾಯಿ.
ಒಂದು ಚಿತ್ರಕ್ಕೆ 30 ಕೋಟಿ ರೂಪಾಯಿ ಸಂಭಾವನೆಯನ್ನು ವಿಧಿಸುತ್ತಾರೆ ಎನ್ನಲಾಗಿದೆ. ಸೌತ್ ಸ್ಟಾರ್ ಯಶ್ ಅವರು ತಮ್ಮ ಕುಟುಂಬದೊಂದಿಗೆ ಐಷಾರಾಮಿ ಜೀವನವನ್ನು ನಡೆಸುತ್ತಿದ್ದಾರೆ. ಯಶ್ ಅವರು ಕನ್ನಡದ ಖ್ಯಾತ ನಟಿ ರಾಧಿಕಾ ಪಂಡಿತ್ ಅವರನ್ನು ಮದುವೆಯಾಗಿದ್ದಾರೆ.
ಬೆಂಗಳೂರಿನ ವಿಂಡ್ಸರ್ ಮ್ಯಾನರ್ ಬಳಿಯ ಪ್ರೆಸ್ಟೀಜ್ ಗಾಲ್ಫ್ ಅಪಾರ್ಟ್‌ಮೆಂಟ್‌ನಲ್ಲಿರುವ ಯಶ್ ಅವರ ಮನೆ ಸುಮಾರು 8 ಕೋಟಿ ರೂಪಾಯಿ ಆಗಿದೆ.
ಯಶ್ ಐಷಾರಾಮಿ ಕಾರುಗಳ ಮಾಲೀಕರೂ ಆಗಿದ್ದಾರೆ. ಸುಮಾರು 88 ಲಕ್ಷ ಮೌಲ್ಯದ Mercedes Benz GLS, ಸುಮಾರು 70 ಲಕ್ಷ ಮೌಲ್ಯದ Mercedes GLC 250D ಸೇರಿವೆ. ಯಶ್ ಪ್ರತಿ ಜಾಹೀರಾತಿಗೆ 60 ರಿಂದ 80 ಲಕ್ಷ ರೂಪಾಯಿ ಚಾರ್ಜ್ ಮಾಡುತ್ತಾರೆ.