Siddheshwara Swamiji ಲಿಂಗೈಕ್ಯ: ಯಶ್, ರಿಷಬ್, ರಮ್ಯಾ ಸೇರಿ ಸಿನಿ ಗಣ್ಯರ ಸಂತಾಪ
ನೆನಪಿರಲಿ ಪ್ರೇಮ್, "ಜ್ಞಾನಯೋಗಾಶ್ರಮದ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರಿಗೆ ನನ್ನ ಭಾವಪೂರ್ಣ ಶ್ರದ್ಧಾಂಜಲಿ" ಎಂದು ಟ್ವೀಟ್ ಮಾಡಿದ್ದಾರೆ.
"ನುಡಿದಂತೆ ನಡೆದು, ಸರಳತೆಯ ಸಂದೇಶ ಸಾರಿ, ಶತಮಾನಗಳಿಗಾಗುವಷ್ಟು ಜ್ಞಾನದ ಬುತ್ತಿ ಕಟ್ಟಿಕೊಟ್ಟ ಸಂತ ಶ್ರೇಷ್ಠರಿಗೆ ವಿನಮ್ರ ಶ್ರದ್ಧಾಂಜಲಿ. ಓಂ ಶಾಂತಿ" ಎಂದು ನಟ ಯಶ್ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
"ಶ್ರೀ ಶ್ರೀ ಶ್ರೀ ಸಿದ್ಧೇಶ್ವರ ಮಹಾ ಸ್ವಾಮಿಗಳು ಇಂದು ನಿಧನರಾಗಿದ್ದಾರೆ. ತಮ್ಮ ಸರಳತೆ, ತಾಳ್ಮೆ ಮತ್ತು ಸಹಾನುಭೂತಿಯ ಬೋಧನೆಗಳ ಮೂಲಕ ಅಮರರಾಗಿದ್ದಾರೆ. ನಿಸ್ವಾರ್ಥ ಪ್ರೀತಿ ಮತ್ತು ತ್ಯಾಗವನ್ನು ವಿನಮ್ರ ಮತ್ತು ಶಾಂತ ರೀತಿಯಲ್ಲಿ ಪ್ರೇರೇಪಿಸಿದವರು. ಅವರು ತಮ್ಮ ಮಾರ್ಗವನ್ನು ಅನುಸರಿಸುವವರಲ್ಲಿ ಜೀವಂತವಾಗಿರುತ್ತಾರೆ" ನಟಿ ರಮ್ಯಾ ಟ್ವೀಟ್ ಮಾಡಿದ್ದಾರೆ.
ನಟ ರಿಷಬ್ ಶೆಟ್ಟಿ, "ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿ ನಿಮ್ಮ ಅಗಲಿಕೆ ಸಹಿಸಲು ಅಸಾಧ್ಯವಾಗಿದೆ. ನಮಗಾಗಿ ಇನ್ನಷ್ಟು ವರ್ಷ ಬದುಕಬೇಕಿತ್ತು. ನಿಮ್ಮ ಬದುಕೇ ನಮಗೆ ಆದರ್ಶ. ಹೋಗಿ ಬನ್ನಿ ಗುರುವರ್ಯ" ಎಂದು ಟ್ವೀಟ್ ಮಾಡಿದ್ದಾರೆ.
ನಟ ಡಾಲಿ ಧನಂಜಯ್, "ಶತಮಾನದ ಸಂತ, ನಾಡು ಕಂಡ ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಲಿಂಗೈಕ್ಯರಾಗಿರುವುದು ತುಂಬಾ ನೋವನ್ನುಂಟು ಮಾಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಟ್ವೀಟ್ ಮಾಡಿದ್ದಾರೆ.