ಅಜ್ಜ-ಮೊಮ್ಮಕಳ ಭರ್ಜರಿ ಸವಾರಿ : ʼಅಪ್ಪ ಜಗತ್ತಿನಲ್ಲಿಯೇ ಸೇಫ್ ಡ್ರೈವರ್ʼ ಎಂದ ರಾಧಿಕಾ..!
ನಟ ಯಶ್-ರಾಧಿಕಾ ಚಂದನವನದ ಮುದ್ದಾದ ಜೋಡಿಗಳಲ್ಲಿ ಒಂದು. ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಇರುವ ರಾಧಿಕಾ ತಮ್ಮ ಮಕ್ಕಳ ತುಂಟಾಟದ ವಿಡಿಯೋವನ್ನು ಫ್ಯಾನ್ಸ್ ಜೊತೆ ಹಂಚಿಕೊಳ್ಳುತ್ತಿರುತ್ತಾರೆ.
ಇದೀಗ ಅಜ್ಜನ ಬೈಕ್ ಮೇಲೆ ಐರಾ, ಅಥರ್ವ ಕುಳಿತಿರುವ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, ಅಪ್ಪನ ಗಾಡಿಯ ಮೇಲೆ ಮಕ್ಕಳ ಜೊತೆ ತಾವು ಕುಳಿತು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ ರಾಧಿಕಾ ಪಂಡಿತ್.
ʼನನ್ನ ಅಪ್ಪ ಜಗತ್ತಿನಲ್ಲಿಯೇ ಸೇಫ್ ಡ್ರೈವರ್. ಅವರು ಡ್ರೈವ್ ಮಾಡುವಾಗ ನಾನು ನಿಜಕ್ಕೂ ಮಲಗಬಹುದು. ಶಾಲೆ ಹಾಗೂ ಕಾಲೇಜ್ ಲೈಫ್ನಲ್ಲಿ ಅಪ್ಪ ನನ್ನನ್ನು ಪಿಕಪ್-ಡ್ರಾಪ್ ಮಾಡುತ್ತಿದ್ದರುʼ ಎಂದು ನೆನಪಿಸಿಕೊಂಡಿದ್ದಾರೆ.
ಅಲ್ಲದೆ, ನಾನು ತರಗತಿಗೆ ಬಂಕ್ ಮಾಡಿದ್ರೂ ಸಹ, ಅಗ್ಲೂ ನನ್ನ ಬೈಕ್ ಮೇಲೆ ಕರೆದುಕೊಂಡು ಹೋಗ್ತಿದ್ರು ಅಂತ ತುಂಟಾಟದ ದಿನಗಳನ್ನು ಮೆಲೆಕು ಹಾಕಿದರು.
ಅಂದಹಾಗೆ ರಾಧಿಕಾ ಪಂಡಿತ್ ತಂದೆಯ ಹೆಸರು ಕೃಷ್ಣ ಪ್ರಸಾದ್ ಪಂಡಿತ್, ಅಮ್ಮನ ಹೆಸರು ಮಂಗಳ ಪಂಡಿತ್. ರಾಕಿ ಭಾಯ್ ಮಕ್ಕಳಿಗೆ ಅಜ್ಜ, ಅಜ್ಜಿ ಅಂದ್ರೆ ತುಂಬಾನೆ ಇಷ್ಟ. ಆಗಾಗ ಅವರ ಜೊತೆ ತುಂಟಾಟ ಆಡ್ತಾ ಇರ್ತಾರೆ.