Yashaswi Jaiswal GF ಯಾರು? ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಛಾಯಾಚಿತ್ರಗಳು!

Sat, 03 Feb 2024-8:46 am,

ಬ್ಯಾಟ್ ನಿಂದ ಬೆಂಕಿ ಹೊರಹಾಕುತ್ತಿರುವ ಯಶಸ್ವಿ: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ 80 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ ಯಶಸ್ವಿ ಜೈಸ್ವಾಲ್, ಎರಡನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿಯೂ ಅದೇ ಶೈಲಿಯನ್ನು ಮುಂದುವರೆಸಿದ್ದಾರೆ. ಮೊದಲ ದಿನ 179 ರನ್‌ಗಳ ಅದ್ಭುತ ಇನ್ನಿಂಗ್ಸ್‌ ಆಡುವ ಮೂಲಕ ಭಾರತಕ್ಕೆ ದೊಡ್ಡ ಮುನ್ನಡೆ ತಂದುಕೊಡುವಲ್ಲಿ ಯಶಸ್ವಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ ಅವರು ತಮ್ಮ ರೂಮರ್ಡ್ ಗರ್ಲ್ ಫ್ರೆಂಡ್ ಕಾರಣ ಮುಖ್ಯಾಂಶಗಳಲ್ಲಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಛಾಯಾಚಿತ್ರಗಳು: ಮ್ಯಾಡಿ ಹ್ಯಾಮಿಲ್ಟನ್ ಹೆಸರಿನ ಓರ್ವ ಯುವತಿಯ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ, ಆಕೆಯ ಹೆಸರನ್ನು  ಯಶಸ್ವಿಗೆ ಲಿಂಕ್ ಮಾಡಲಾಗುತ್ತಿದೆ. ಆಕೆ ಯಶಸ್ವಿ ಜೈಸ್ವಾಲ್ ಗರ್ಲ್ ಫ್ರೆಂಡ್ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಳ್ಳಲಾಗುತ್ತಿದೆ. ಆದರೆ, ಅದರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.  

ಹೈದರಾಬಾದ್ ಟೆಸ್ಟ್ ನಲ್ಲಿ ನೋಡಲಾಗಿದೆ:  ಹೈದರಾಬಾದ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್‌ನಲ್ಲಿ ಮ್ಯಾಡಿ ಹ್ಯಾಮಿಲ್ಟನ್ ಸ್ಟ್ಯಾಂಡ್‌ನಲ್ಲಿ ಜೈಸ್ವಾಲ್ ಗೆ ಬೆಂಬಳಿಸಲು ಬಂದಿದ್ದರೂ. ಅಂದಿನಿಂದ, ಹ್ಯಾಮಿಲ್ಟನ್ ಯಶಸ್ವಿ ಜೊತೆ ಸಂಪರ್ಕದಲ್ಲಿದ್ದಾರೆ ಎನ್ನಲಾಗುತ್ತಿದೆ.  

ಈ ಮೊದಲು ಯಶಸ್ವಿ ಕೂಡ ಫೋಟೋ ಹಂಚಿಕೊಂಡಿದ್ದರು:  ಯಶಸ್ವಿ ಜೈಸ್ವಾಲ್ ಅವರು ಸುಮಾರು ಒಂದು ವರ್ಷದ ಹಿಂದೆ ಒಂದು  Instagram ಪೋಸ್ಟ್ ಅನ್ನು ಹಂಚಿಕೊಂಡಿದ್ದರು, ಅದರಲ್ಲಿ ಅವರು ಇಬ್ಬರು ಮಹಿಳೆಯರೊಂದಿಗೆ ಕಾಣಿಸಿಕೊಂಡಿದ್ದಾರೆ. ಆ ಪೋಸ್ಟ್‌ನಲ್ಲಿರುವ ಹುಡುಗಿಯ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.  

ಐಪಿಎಲ್ ಸಮಯದಲ್ಲಿಯೂ ಸ್ಟ್ಯಾಂಡ್‌ನಲ್ಲಿ ಗಮನಿಸಲಾಗಿದೆ:  ಮೂರು ವರ್ಷಗಳಿಂದ ಮ್ಯಾಡಿ ಯಶಸ್ವಿ ಜೊತೆ ಮೇಲ್ನೋಟಕ್ಕೆ ಸಂಬಂಧ ಹೊಂದಿದ್ದಾರೆ ಎಂಬ ವದಂತಿ ಇದೆ. ಐಪಿಎಲ್ ವೇಳೆಯೂ ಕೂಡ ಮ್ಯಾಡಿ ಸ್ಟ್ಯಾಂಡ್‌ನಲ್ಲಿ ಜೈಸ್ವಾಲ್‌ರನ್ನು ಬೆಂಬಲಿಸುತ್ತಿರುವುದನ್ನು ಗಮನಿಸಲಾಗಿದೆ. ಯಶಸ್ವಿ ಅವರನ್ನು ಕ್ರೀಡಾಂಗಣದಲ್ಲಿ ಆಗಾಗ್ಗೆ ನೋಡುವ ಕಾರಣದಿಂದ ಆಕೆಯೊಂದಿಗಿನ ಸಂಬಂಧದ ವದಂತಿಗಳಿವೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link