Yearly Horoscope 2023: ವರ್ಷ 2023 ರಲ್ಲಿ ಈ 5 ರಾಶಿಗಳ ಜನರ ಮೇಲೆ ಗ್ರಹಗಳ ಜಬರ್ದಸ್ತ್ ಕೃಪಾಕಟಾಕ್ಷ

Sat, 24 Dec 2022-1:38 pm,

ಮೇಷ ರಾಶಿ- ಮೇಷ ರಾಶಿಯವರಿಗೆ 2023 ರ ವರ್ಷವು ತುಂಬಾ ಒಳ್ಳೆಯ ವರ್ಷ ಸಾಬೀತಾಗಲಿದೆ. ಈ ವರ್ಷ, ಮೇಷ ರಾಶಿಯ ಉದ್ಯೋಗಿಗಳಿಗೆ ಉದ್ಯೋಗದಲ್ಲಿ ಬಡ್ತಿಯ ಅವಕಾಶಗಳು ಸಿಗಲಿವೆ, ಇದರೊಂದಿಗೆ ಉದ್ಯಮಿಗಳಿಗೂ ಕೂಡ ಸಾಕಷ್ಟು ಲಾಭ ಸಿಗಲಿದೆ. ಸ್ಥಗಿತಗೊಂಡಿರುವ ಎಲ್ಲ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ. ಇದೇ ವೇಳೆ ಅವಿವಾಹಿತರಿಗೆ ಕಂಕಣಭಾಗ್ಯ ಕೂಡಿ ಬರಲಿದೆ.  

2. ಸಿಂಹ ರಾಶಿ: ಸಿಂಹ ರಾಶಿಯ ಜನರಿಗೆ ಸಾಕಷ್ಟು ಅದೃಷ್ಟವನ್ನು ಹೊತ್ತು ತರಲಿದೆ. ಮನಮೆಚ್ಚಿದ ಬಾಳ ಸಂಗಾತಿಗಾಗಿ ಹುಡುಕಾಟಕ್ಕೆ ತೆರೆಬೀಳಲಿದೆ. ಉದ್ಯೋಗ ಮತ್ತು ವ್ಯವಹಾರದ ವಿಷಯದಲ್ಲಿ ಈ ರಾಶಿಯವರಿಗೆ ಈ ವರ್ಷವು ತುಂಬಾ ಶುಭಕರವಾಗಿರುತ್ತದೆ. ಹೊಸ ವರ್ಷದಲ್ಲಿ ಹಲವು ಯೋಜನೆಗಳನ್ನು ನೀವು ರೂಪಿಸುವಿರಿ.  

3. ಧನು ರಾಶಿ- ಹೊಸ ವರ್ಷದಲ್ಲಿ, ಧನು ರಾಶಿಯ ಜನರ ಆರ್ಥಿಕ ಸ್ಥಿತಿಯು ತುಂಬಾ ಬಲಿಷ್ಠವಾಗಿರಲಿದೆ. ಈ ರಾಶಿಯವರಿಗೆ ಸಾಕಷ್ಟು ಹಣ ಸಿಗಲಿದೆ. ವ್ಯಾಪಾರಸ್ಥರಿಗೆ ವ್ಯಾಪಾರದಲ್ಲಿ ಲಾಭದ ಪರಿಸ್ಥಿತಿ ಇರಲಿದೆ. ಗೌರವದಲ್ಲಿ ಹೆಚ್ಚಳವಾಗಲಿದೆ. ಕೆಲ ಶುಭ ಸಮಾಚಾರದಿಂದ ಮನಸ್ಸಿನಲ್ಲಿ ಸಂತೋಷದ ಭಾವ ಇರಲಿದೆ.

4. ಮಕರ ರಾಶಿ -ಹೊಸ ವರ್ಷವು ಮಕರ ರಾಶಿಯವರಿಗೆ ಸಂತೋಷದ ಉಡುಗೊರೆಯನ್ನು ಹೊತ್ತು ತರಲಿದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಮನೆಯಲ್ಲಿ ಕಾಲಕಾಲಕ್ಕೆ ಸಂತಸದ ಸುದ್ದಿ ಸಿಗುತ್ತಲೇ ಇರುತ್ತದೆ. ಈ ವರ್ಷ, ವಿಶೇಷವಾಗಿ ಪ್ರೀತಿಯ ಸಂಬಂಧಗಳಲ್ಲಿ, ದೊಡ್ಡ ಬದಲಾವಣೆಗಳು ನಡೆಯಲಿವೆ.   

5. ಕುಂಭ ರಾಶಿ- ಕುಂಭ ರಾಶಿಯವರಿಗೆ ಆರ್ಥಿಕ ದೃಷ್ಟಿಯಿಂದ 2023 ರ ವರ್ಷವು ತುಂಬಾ ಉತ್ತಮವಾಗಿರಲಿದೆ. ಆದಾಯ ಹೆಚ್ಚಾಗಲಿದೆ, ಇದರಿಂದಾಗಿ ಆರ್ಥಿಕ ಸ್ಥಿತಿಯು ಮೊದಲಿಗಿಂತ ಉತ್ತಮವಾಗಿರುತ್ತದೆ. ಹಣದ ಕೊರತೆಯಿಂದ ನೀವು ಯಾವುದೇ ವ್ಯವಹಾರವನ್ನು ಪ್ರಾರಂಭಿಸಲು ಸಾಧ್ಯವಾಗದಿದ್ದರೆ, ಹೊಸ ವರ್ಷದಲ್ಲಿ ನಿಮ್ಮ ಈ ಆಸೆ ಈಡೇರಲಿದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link