ಸಕ್ಕರೆ ಮಟ್ಟ 300ರ ಗಡಿ ದಾಟಿದ್ರೂ ಸುಲಭವಾಗಿ ಕಂಟ್ರೋಲ್ ಮಾಡಬಲ್ಲ ಯೋಗಾಸನಗಳಿವು: ಈ ಅಭ್ಯಾಸದಿಂದ ಸದಾ ನಿಯಂತ್ರಣದಲ್ಲಿರುತ್ತೆ ಬ್ಲಡ್ ಶುಗರ್!
ಮಧುಮೇಹ ರೋಗಿಗಳು ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿವಹಿಸುವುದಷ್ಟೇ ಅಲ್ಲ, ಜೀವನಶೈಲಿಯ ಬಗ್ಗೆಯೂ ವಿಶೇಷ ಗಮನವಹಿಸಬೇಕು. ಇಲ್ಲದಿದ್ದರೆ, ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಿ ಇದು ಗಂಭೀರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು.
ಕೇವಲ ಔಷದೋಪಚಾರಗಳಿಂದ ಮಾತ್ರವಲ್ಲ ನೈಸರ್ಗಿಕ ಮಾರ್ಗಗಳಿಂದಲೂ ಮಧುಮೇಹವನ್ನು ನಿಯಂತ್ರಿಸಬಹುದು.
ಯೋಗಾಭ್ಯಾಸ ಮಾಡುವುದರಿಂದ ದೈಹಿಕ ಫಿಟ್ನೆಸ್ ಕಾಪಾಡಿಕೊಳ್ಳಬಹುದು. ಅಷ್ಟೇ ಅಲ್ಲ, ಕೆಲವು ಯೋಗಾಭ್ಯಾಸಗಳು ಮಧುಮೇಹ ನಿಯಂತ್ರಣಕ್ಕೂ ದಿವ್ಯೌಷಧಿ ಇದ್ದಂತೆ. ನಿತ್ಯ ಕೆಲವು ಯೋಗಾಭ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ಮಧುಮೇಹಿಗಳಲ್ಲಿ ಎಂದಿಗೂ ಕೂಡ ಶುಗರ್ ಲೆವೆಲ್ ಹೆಚ್ಚಾಗುವುದಿಲ್ಲ.
ವೃಕ್ಷಾಸನ ಮಾಡುವುದರಿಂದ ದೈಹಿಕ ಒತ್ತಡ ನಿವಾರಿಸಿ ಏಕಾಗ್ರತೆಯನ್ನು ಸುಧಾರಿಸುತ್ತದೆ. ಅಷ್ಟೇ ಅಲ್ಲ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕೂಡ ನಿಯಂತ್ರಿಸುತ್ತದೆ.
ಧನುರಾಸನವು ಮೇದೋಜ್ಜೀರಕ ಗ್ರಂತಿಯನ್ನು ಸಕ್ರಿಯಗೊಳಿಸಿ ಇನ್ಸುಲಿನ್ ಉತ್ಪಾದನೆಯನ್ನು ಸುಧಾರಿಸುತ್ತದೆ. ಈ ಯೋಗಾಭ್ಯಾಸ ಮಾಡುವವರಲ್ಲಿ ಎಂದಿಗೂ ಶುಗರ್ ಲೆವೆಲ್ ಹೆಚ್ಚಾಗಲ್ಲ.
ಸಾಮಾನ್ಯವಾಗಿ ಹೈ ಬ್ಲಡ್ ಪ್ರಶರ್ ನಿಯಂತ್ರಿಸಲು ಸಹಕಾರಿ ಎನ್ನಲಾಗುವ ಪಶ್ಚಿಮೋತ್ತನಾಸನವು ಜೀರ್ಣಕಾರಿ ವ್ಯವಸ್ಥೆಯನ್ನು ಸುಧಾರಿಸುವ ಮೂಲಕ ದೇಹದಲ್ಲಿ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ.
ನಿತ್ಯ ಹಲಾಸನ ಮಾಡುವುದರಿಂದ ಜೀರ್ಣಾಂಗ ವ್ಯವಸ್ಥೆ ಬಲಗೊಳ್ಳುತ್ತದೆ. ಇದು ಥೈರಾಯ್ಡ್, ಪ್ಯಾರಾಥೈರಾಯ್ಡ್ ಗ್ರಂಥಿಗಳ ಕಾರ್ಯನಿರ್ವಹಣೆ ಸುಧಾರಿಸುತ್ತದೆ. ಜೊತೆಗೆ ಮಧುಮೇಹಿಗಳಲ್ಲಿ ಬ್ಲಡ್ ಶುಗರ್ ನಿಯಂತ್ರಣಕ್ಕೂ ಸಹಕಾರಿ ಆಗಿದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.