Bigg Boss 11: ಸುದೀಪ್‌ ಸ್ಥಾನಕ್ಕೆ ಖ್ಯಾತ ಡೈರೆಕ್ಟರ್‌ ಎಂಟ್ರಿ!! ವೀಕೆಂಡ್‌ನಲ್ಲಿ ಮನೆ ಮಂದಿಯ ಬೆವರಿಳಿಸಿದ ಯೋಗರಾಜ್‌ ಭಟ್‌

Sat, 26 Oct 2024-11:27 am,

Yogaraj bhatt hosts bigg boss 11: ತಮ್ಮ ತಾಯಿಯ ಹಗಲಿಕೆಯಿಂದ ಕಿಚ್ಚ ಕುಗ್ಗಿ ಹೋಗಿದ್ದಾರೆ, ಇತ್ತೀಚೆಗಷ್ಟೆ ನಟ ಈ ಸೀಸನ್‌ ತಮ್ಮ ಕೊನೆಯ ಸೀಸನ್‌ ಎಂದು ಹೇಲುವ ಮೂಲಕ ಸಂಚಲನ ಸೃಷ್ಟಿಸಿದ್ದರು.   

ಇದೀಗ ತಮ್ಮ ತಾಯಿಯ ಹಗಲಿಕೆಯ ನೋವಿನಿಂದ ಕಿಚ್ಚ ಈ ವಾರ ಬಿಗ್‌ಬಾಸ್‌ ಮನೆಯ ತೀರ್ಪಿನಿಂದ ಹೊರಗುಳಿಯಲಿದ್ದಾರೆ, ಇದರ ಮಧ್ಯೆ ಈ ವಾರ ಬಿಗ್‌ ಬಾಸ್‌ ಮನೆಯ ತೀರ್ಪು ಯಾರು ಮಾಡಲಿದ್ದಾರೆ ಎನ್ನು ಪ್ರಶ್ನೆಗಳು ಹುಟ್ಟಿಕೊಂಡಿದ್ದವು, ಇದೀಗ ಕಲರ್ಸ್‌ ವಾಹಿನಿ ಹಂಚಿಕೊಂಡಿರುವ ಪ್ರೋಮೋದಲ್ಲಿ ತೀರ್ಪುದಾದದರು ಯಾರು ಎಂಬ ವಿಚಾರ ಹೊರಬಿದ್ದಿದೆ.   

ಕಲರ್ಸ್‌ ವಾಹಿನಿ ಹಂಚಿಕೊಂಡಿರುವ ಪ್ರೋಮೋದಲ್ಲಿ ಈ ವಾರ ಪಂಚಾಯಿತಿ ಮಾಡಲು ಮನೆಗೆ ಯೋಗರಾಜ್‌ ಭಟ್‌ ಅವರು ಬಂದಿರುವುದು ಕಾಣಿಸಿಕೊಂಡಿದೆ. ತಮ್ಮ ಮಾತಿನಲ್ಲೆ ಕನ್‌ಫ್ಯೂಸ್‌ ಮಾಡುವ ಯೋಗರಾಜ್‌ ಭಟ್ಟ್ರು ಮನೆಯ ಮಂದಿಗೆಲ್ಲಾ ಈ ವಾರ ಬೆವರಿಳಿಸುವಂತೆ ಕಾಣುತ್ತಿದೆ.  

ಯೋಗರಾಜ್‌ ಭಟ್‌ ಅವರು ಉತ್ತರ ಕರ್ನಾಟಕ ಶೈಲಿಯ ಉಡುಪು ತೊಟ್ಟು ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದಾರೆ, ಮನೆಯೊಳಗೆ ಎಂಟ್ರಿ ಕೊಟ್ಟ ಭಟ್ಟರು, ಮನೆಯ ಸದಸ್ಯರೊಂದಿಗೆ ಕಾಶ್ಯೂವಲ್‌ ಆಗಿಯಯೇ ಮಾತನಾಡುತ್ತಾ, ಮನೆಗೆ ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟಿರುವ ಹನುಮಂತನಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ.   

ಕಿಚ್ಚ ಸುದೀಪ್‌ ಅವರು ಈ ವಾರದ ವೀಕೆಂಡ್‌ ಪಂಚಾಯಿತಿಯಲ್ಲಿ ಇರುವುದಿಲ್ಲ ಎಂಬ ವಿಷಯ ಗೊತ್ತಾಗುತ್ತಿದ್ದಂತೆ, ನಟನ ಸ್ಥಾನಕ್ಕೆ ಯಾರು ಬರಲಿದ್ದಾರೆ ಎಂಬ ಚರ್ಚೆಗಳು ಬಿರುಗಾಳಿ ಎಬ್ಬಿಸಿದ್ದವು, ಯಾರು ಸುದೀಪ್‌ ಸ್ಥಾನವನ್ನು ನಿಭಾಯಿಸಲಿದ್ದಾರೆ ಎನ್ನು ಕುತೂಹಲ ಎಲ್ಲರಲ್ಲಿಯೂ ಮೂಡಿತ್ತು.  

ಇದೀಗ ಯೋಗರಾಜ್‌ ಭಟ್‌ ಅವರು ಸುದೀಪ್‌ ಅವರ ಸ್ಥಾನಕ್ಕೆ ಎಂಟ್ರಿ ಕೊಟ್ಟಿದ್ದು, ಮನೆಯವರಿಗರಲ್ಲಾ ಸಕತ್‌ ಆಗಿಯೇ ಕ್ಲಾಸ್‌ ತೆಗೆದುಕೊಂಡಂತೆ ಕಾಣುತ್ತಿದೆ. ಇನ್ನೂ ಇಂದು ಪ್ರಸಾರವಾಗಲಿರುವ ಎಪಿಸೋಡ್‌ನಲ್ಲಿ ಏನು ನಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link