ಜಸ್ಟ್ ಇದೊಂದು ಹಾಲಿನ ಉತ್ಪನ್ನ ಬಳಸಿ..ನಿಮ್ಮ ಎಲ್ಲಾ ಕೂದಲಿನ ಸಮಸ್ಯೆಗಳಿಗೆ ಗುಡ್ ಬೈ ಹೇಳಿ..!
ಮೊಸರು ತಿನ್ನುವುದರಿಂದ ದೇಹಕ್ಕೆ ಎಷ್ಟು ಒಳ್ಳೆಯದೊ, ಚರ್ಮಕ್ಕೂ ಕೂಡ ಮೊಸರು ಅಷ್ಟೆ ಒಳ್ಳೆಯದ್ದು. ಕೇವಲ ದೇಹಕ್ಕೆ, ಚಮರ್ಕ್ಕೆ ಅಷ್ಟೆ ಅಲ್ಲ, ಕೂದಲಿಗೆ ಮೊಸರಿನ ಬಳಕೆ ತುಂಬಾ ಒಳ್ಳೆಯದ್ದು. ಹಾಗಾದರೆ ಮೊಸರನ್ನು ಕೂದಲಿಗೆ ಲೇಪಿಸುವುದರಿಂದ ಆಗುವ ಪ್ರಯೋಜನಗಳೇನು..?ತಿಳಿಯಲು ಮುಂದೆ ಓದಿ...
ಮೊಸರು ಪ್ರೋಟೀನ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ವಿಟಮಿನ್ ಎ, ವಿಟಮಿನ್ ಬಿ 5 ಮತ್ತು ವಿಟಮಿನ್ ಡಿ ನಂತಹ ಅಂಶಗಳೊಂದಿಗೆ ಸಮೃದ್ದವಾಗಿದೆ. ಇದು ಕೂದಲಿನ ಬೆಳವಣಿಗೆ, ತಲೆಹೊಟ್ಟು ನಿವಾರಣೆ, ನಯವಾದ ಕೂದಲು ನೀಡುವುದಷ್ಟೆ ಅಲ್ಲದೆ ನಿಮ್ಮ ಎಲ್ಲಾ ಕೂದಲಿನ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
ಮೊಟ್ಟೆಯನ್ನು ಮೊಸರಿನೊಂದಿಗೆ ಬೆರಸಿ ಕೂದಲಿಗೆ ಹಚ್ಚುವುದರಿಂದ ಕೂದಲು ಉದ್ದವಾಗಿ ಬೆಳೆಯುತ್ತದೆ. ಒಂದು ಬಟ್ಟಲಿನಲ್ಲಿ ಒಂದು ಮೊಟ್ಟೆ ಹಾಗೂ 2 ಚಮಚ ಮೊಸರು ಬೆರಸಿ, ಹೇರ್ ಮಾಸ್ಕ್ ತಯಾರಿಸಿ ತಲೆಗೆ ಹಚ್ಚಿ. ಸ್ವಲ್ಪ ಹೊತ್ತು ಕಳೆದ ನಂತರ ಶಾಂಪೂ ಹಾಕಿ ಕೂದಲನ್ನು ವಾಶ್ ಮಾಡಿ. ಈ ಪ್ಯಾಕ್ ಅನ್ನು ವಾರಕ್ಕೆ ಒಂದು ಭಾರಿ ಹಚ್ಚಬಹುದು.
ಮೊಸರಿನೊಂದಿಗೆ ಜೇನು ತುಪ್ಪ ಬೆರೆಸಿ ಕೂದಲಿಗೆ ಹಚ್ಚುವುದರಿಂದ ಕೂದಲ ಉದ್ದವಾಗಿ ಬೆಳೆಯುವುದಷ್ಟೆ ಅಲ್ಲದೆ ಮೃದುವಾಗಿಸುವಲ್ಲಿ ಸಹಾಯ ಮಾಡುತ್ತದೆ. ಇದಕ್ಕೆ ಒಂದು ಕಪ್ ಮೊಸರನ್ನು ಒಂದು ಬೌಲ್‌ನಲ್ಲಿ ತೆಗೆದುಕೊಳ್ಳಿ, ಅದಕ್ಕೆ 2 ಚಮಚ ಜೇನು ತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ 20 ನಿಮಿಷಗಳ ನಂತರ ನಿಮ್ಮ ಕೂದಲನ್ನು ತೊಳೆಯಿರಿ.
ಒಂದು ಬಟ್ಟಲಿನಲ್ಲಿ 7 ಚಮಚ ಮೊಸರು, 2 ಚಮಚ ಜೇನು ತುಪ್ಪ ಹಾಗೂ ಒಂದು ಮೊಟ್ಟೆಯನ್ನು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ. 20 ರಿಂದ 25 ನಿಮಿಷಗಳ ನಂತರ ಶಾಂಪುವಿನಿಂದ ನಿಮ್ಮ ಕೂದಲನ್ನು ತೊಳೆಯಿರಿ. ಇದರಿಂದ ನಿಮ್ಮ ಕೂದಲು ಉದುರುವುದು ಕಡಿಮೆಯಾಗುತ್ತದೆ.
ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.