ವಾಕ್ಸಿನ್ ಸೆಂಟರ್ ನಿಂದ ಟೆಸ್ಟಿಂಗ್ ಕೇಂದ್ರದವರೆಗೆ ಎಲ್ಲಾ ಮಾಹಿತಿ ನೀಡುತ್ತದೆ Google Map
Google ಮ್ಯಾಪ್ ಮೂಲಕ ನಿಮ್ಮ ಸುತ್ತ ವ್ಯಾಕ್ಸಿನೇಷನ್ ಎಲ್ಲಿ ನಡೆಯುತ್ತಿದೆ ಎಂಬುದರ ಮಾಹಿತಿಯನ್ನು ಪಡೆಯಬಹುದು. ಗೂಗಲ್ ನಕ್ಷೆಗಳ ಬಳಕೆದಾರರು ವ್ಯಾಕ್ಸಿನೇಷನ್ ಕೇಂದ್ರಗಳನ್ನು ಅಪ್ಲಿಕೇಶನ್‌ನಲ್ಲಿ ಹುಡುಕಿದಾಗ, ಹತ್ತಿರದ ಎಲ್ಲಾ ಕೇಂದ್ರಗಳನ್ನು ಸ್ಕ್ರೀನ್ ನಲ್ಲಿ ತೋರಿಸಲಾಗುತ್ತದೆ. ಅಲ್ಲದೆ ಈ ಕೇಂದ್ರಗಳು ಓಪನ್ ಇವೆಯಾ ಅಥವಾ ಕ್ಲೋಸ್ ಆಗಿದೆಯಾ ಎಂಬ ಮಾಹಿತಿ ಕೂಡಾ ಲಭಿಸುತ್ತದೆ.
ಗೂಗಲ್ ಮ್ಯಾಪ್ ನಲ್ಲಿ ಕೇಂದ್ರದ ಫೋನ್ ನಂಬರ್ ಗಳನ್ನು ಕೂಡಾ ಒದಗಿಸಲಾಗಿದೆ. ಈ ಕಾರಣದಿಂದಾಗಿ, ಅಗತ್ಯವಿರುವವರು ಕೇಂದ್ರಕ್ಕೆ ಕರೆ ಮಾಡಿ ವಿಚಾರಿಸಿಕೊಂಡು ಲಸಿಕೆ ಪಡೆಯಲು ಹೋಗಬಹುದು. ಇನ್ನು ಪರೀಕ್ಷೆ ಮಾಡಿಸಬೇಕಾದರೆ ಇದರಲ್ಲಿ, ಲ್ಯಾಬ್ ನ ಫೋನ್ ನಂಬರ್ ಕೂಡಾ ನೀಡಲಾಗಿರುತ್ತದೆ.
ನಿಮ್ಮ ಫೋನ್‌ನ Google ಅಪ್ಲಿಕೇಶನ್‌ಗೆ ಅಥವಾ Chrome ಬ್ರೌಸರ್‌ನಲ್ಲಿ ಹೋಗಿ "COVID 19 ಲಸಿಕೆ" ಎಂದು ಟೈಪ್ ಮಾಡಿ ಮತ್ತು ಸರ್ಚ್ ಕೊಡಿ. ಇದರ ನಂತರ “Where to Get it” ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಆಗ ನಿಮ್ಮ ಸುತ್ತಲಿನ ಎಲ್ಲಾ ಆಸ್ಪತ್ರೆಗಳ ಪಟ್ಟಿಯಲ್ಲಿ ಎಲ್ಲಿ ಕರೋನಾ ಲಸಿಕೆ ನೀಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗುತ್ತದೆ.
ಅಲ್ಲದೆ ಇದರಲ್ಲಿ “More places” ಎಂಬ ಯ್ಕೆಯನ್ನು ಕೂಡಾ ನೀಡಲಾಗಿದೆ. ಇದನ್ನುಕ್ಲಿಕ್ ಮಾಡಿದರೆ, ಇತರ ಕರೋನಾ ಲಸಿಕೆ ಕೇಂದ್ರಗಳ ಬಗ್ಗೆ ಮಾಹಿತಿ ದೊರೆಯಲಿದೆ.