Health Tips: 50 ವರ್ಷದ ನಂತರವೂ ನೀವು ಆರೋಗ್ಯವಾಗಿರಬೇಕೇ..? ಈ ಅಭ್ಯಾಸ ರೂಢಿಸಿಕೊಳ್ಳಿ

Fri, 23 Jun 2023-11:52 am,

ನೀವು ದೀರ್ಘಕಾಲ ಆರೋಗ್ಯವಾಗಿರಲು ಪೋಷಕಾಂಶಗಳು ಸಮೃದ್ಧವಾಗಿರುವ ಆಹಾರ ಸೇವಿಸಬೇಕು. ಇದಕ್ಕಾಗಿ ನೀವು ದೈನಂದಿನ ಆಹಾರದಲ್ಲಿ ಧಾನ್ಯಗಳು, ಕಾಳುಗಳು ಮತ್ತು ಬೀಜಗಳನ್ನು ಸೇರಿಸಿಕೊಳ್ಳಬೇಕು. ಈ ಆಹಾರಗಳು ಅನೇಕ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ.

ಶಾರೀರಿಕವಾಗಿ ಕ್ರಿಯಾಶೀಲವಾಗದಿದ್ರೆ ನೀವು ಸ್ಥೂಲಕಾಯಕ್ಕೆ ಬಲಿಯಾಗುವುದು ಮಾತ್ರವಲ್ಲ, ಮೂಳೆಗಳು, ಸ್ನಾಯುಗಳು ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ. ಇದಲ್ಲದೆ ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ಆಗುವುದಿಲ್ಲ. ಒಂದು ವರದಿಯ ಪ್ರಕಾರ, ದೀರ್ಘಾಯುಷ್ಯವನ್ನು ಹೊಂದಲು ಪ್ರತಿದಿನ 10 ಸಾವಿರ ಹೆಜ್ಜೆಗಳನ್ನು ನಡೆಯುವುದು ಬಹಳ ಮುಖ್ಯ. ಜಿಮ್ಮಿಂಗ್, ತೀವ್ರವಾದ ವರ್ಕೌಟ್‌ಗಳನ್ನು ಮಾಡದ ಜನರು, ಫಿಟ್ ಮತ್ತು ಆ್ಯಕ್ಟಿವ್ ಆಗಿರಲು ವಾಕ್ ಮಾಡುವುದು ತುಂಬಾ ಮುಖ್ಯ.

ದಿನವಿಡೀ ಲ್ಯಾಪ್ ಟಾಪ್, ಮೊಬೈಲ್ ಬೆಳಕಿನಲ್ಲಿ ಇರುವುದಕ್ಕಿಂತ ಸ್ವಲ್ಪ ಹೊತ್ತು ಹೊರಗೆ ಹೋಗಿ ನೈಸರ್ಗಿಕ ಬೆಳಕಿನಲ್ಲಿ ಇರುವುದು ಒಳ್ಳೆಯದು ಎನ್ನುತ್ತಾರೆ ಆರೋಗ್ಯ ತಜ್ಞರು. ಸೂರ್ಯನ ಬೆಳಕು ನೈಸರ್ಗಿಕ ಬೆಳಕಿನ ಮೂಲವಾಗಿದೆ, ಜೊತೆಗೆ ವಿಟಮಿನ್ ಡಿ ಸಹ ಇದರಿಂದ ಲಭಿಸುತ್ತದೆ. ಇದು ಮೂಳೆಗಳು, ಹಲ್ಲುಗಳು ಮತ್ತು ದೇಹದ ಅನೇಕ ಆಂತರಿಕ ಕಾರ್ಯಗಳಿಗೆ ಸಹಾಯ ಮಾಡುತ್ತದೆ. ನೀವು ದೀರ್ಘಕಾಲದವರೆಗೆ ಮೂಳೆ ರೋಗವನ್ನು ತಪ್ಪಿಸಬಯಸಿದರೆ, ವಿಟಮಿನ್ ಡಿಗಾಗಿ ಬೆಳಗ್ಗೆ ಸೂರ್ಯನ ಬೆಳಕಿನಲ್ಲಿ ಅರ್ಧ ಘಂಟೆಯವರೆಗೆ ಕುಳಿತುಕೊಳ್ಳಬೇಕು.

ದೇಹಕ್ಕೆ ಪ್ರೋಟೀನ್ ಅಗತ್ಯವಿದ್ದರೂ ನೀವು ರೆಡ್ ಮೀಟ್‍ಅನ್ನು ಹೆಚ್ಚು ತಿನ್ನಬಾರದು. ಕೆಂಪು ಮಾಂಸವು ಕೊಲೆಸ್ಟ್ರಾಲ್, ಅನಾರೋಗ್ಯಕರ ಕೊಬ್ಬನ್ನು ಹೊಂದಿರುತ್ತದೆ. ಇದು ಹೃದಯ ಕಾಯಿಲೆಗಳನ್ನು ಹೆಚ್ಚಿಸುತ್ತದೆ. ಜೊತೆಗೆ ಸಂಸ್ಕರಿಸಿದ ಮಾಂಸ ಅಥವಾ ಆಹಾರಗಳು ಹೊಟ್ಟೆಯ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು. ಆದ್ದರಿಂದ ಈ ಆಹಾರ ತಿನ್ನುವುದನ್ನು ಆದಷ್ಟು ತಪ್ಪಿಸಬೇಕು.

ಒತ್ತಡವು ನಿಮ್ಮ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರ ಹಿಂದೆ ಕೆಲಸದ ಒತ್ತಡ, ಸಂಸಾರ, ಆರ್ಥಿಕ ಅಡಚಣೆ, ಕೆಲಸಕ್ಕೆ ಹೋಗುವ ಚಿಂತೆ, ಒಳ್ಳೆಯ ಕೆಲಸ ಸಿಗದ ಟೆನ್ಶನ್ ಸೇರಿದಂತೆ ಹಲವು ಕಾರಣಗಳಿರಬಹುದು. ಒತ್ತಡ, ಆತಂಕ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುವುದು ಉತ್ತಮ. ಇದಕ್ಕಾಗಿ ಧ್ಯಾನ ಮಾಡಿ, ಮನಸ್ಸಿಗೆ ಶಾಂತಿ ನೀಡುವುದರ ಜೊತೆಗೆ ಶಕ್ತಿ ತುಂಬಿದ ಅನುಭವವಾಗುತ್ತದೆ.

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಬೇಕು. ZEE NEWS ಇದನ್ನು ದೃಢಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link