ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇವುಗಳನ್ನು ಯಾವಾಗಲೂ ಇಟ್ಟುಕೊಂಡಿರಬೇಕು
ಚಾಲನೆ ಮಾಡುವ ವ್ಯಕ್ತಿಗೆ ಚಾಲನಾ ಪರವಾನಗಿ ಜೊತೆಗೆ ನಿಮ್ಮ ವಾಹನದ ಉಳಿದ ದಾಖಲೆಗಳನ್ನು ಸಹ ನಿಮ್ಮ ಬಳಿ ಇಟ್ಟುಕೊಳ್ಳಬೇಕು. ಇವುಗಳಲ್ಲಿ ನಿಮ್ಮ ವಾಹನದ ವಿಮೆ ಮತ್ತು ನೋಂದಣಿ ಪ್ರಮಾಣಪತ್ರ ಸೇರಿವೆ. ಇವುಗಳ ಫೋಟೋ ತೆಗೆದ ನಂತರ ನಿಮ್ಮ ಫೋನ್‌ನಲ್ಲಿ ಭದ್ರವಾಗಿಟ್ಟುಕೊಳ್ಳಬೇಕು.
ನೀವು ವಾಹನ ಚಲಾಯಿಸುತ್ತಿದ್ದರೆ ಮನೆಯಿಂದ ಹೊರಡುವ ವೇಳೆ ನಿಮ್ಮ ಬಳಿ ಚಾಲನಾ ಪರವಾನಗಿ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ನೀವು ಎಂದಾದರೂ ಡಿಎಲ್ ಒಯ್ಯುವುದನ್ನು ಮರೆತರೆ ಫೋನ್‌ನಲ್ಲಿ ಅದರ ಡಿಜಿಟಲ್ ನಕಲನ್ನು ಇಟ್ಟುಕೊಳ್ಳುವುದು ಅಗತ್ಯ. ಡಿಜಿಲಾಕರ್ ಆ್ಯಪ್ ಮತ್ತು ಎಂ-ಪರಿವಾಹನ್ ಆ್ಯಪ್ ಡಿಜಿಟಲ್ ನಕಲನ್ನು ಸಂಗ್ರಹಿಸಿ ಇಟ್ಟುಕೊಳ್ಳಬಹುದಾದ ಪ್ರಮುಖ ಆ್ಯಪ್ ಗಳಾಗಿವೆ.
ನಮ್ಮ ಆಧಾರ್ ಕಾರ್ಡ್ ನಮ್ಮ ಗುರುತು. ಕೆಲವೊಮ್ಮೆ ನಿಮ್ಮ ಆಧಾರ್ ಕಾರ್ಡ್‌ನ ಹಾರ್ಡ್ ಕಾಪಿ ನಿಮ್ಮ ಬಳಿ ಇಲ್ಲದಿರಬಹುದು. ಇಂತಹ ಪರಿಸ್ಥಿತಿಯಲ್ಲಿ ಅದರ ಡಿಜಿಟಲ್ ಕಾಪಿ ಅಥವಾ ಹಾರ್ಡ್ ಕಾಪಿ ಫೋಟೋವನ್ನು ಫೋನಿನಲ್ಲಿ ಇಟ್ಟುಕೊಳ್ಳುವುದು ಉತ್ತಮ ಆಯ್ಕೆಯಾಗಿದೆ.
ಇಂದಿನ ಸಂದರ್ಭದಲ್ಲಿ ಬಹುಶಃ ನಮ್ಮ ಫೋನ್‌ನಲ್ಲಿ ಇರಬೇಕಾದ ಪ್ರಮುಖ ಡಾಕ್ಯುಮೆಂಟ್ ನಮ್ಮ ಲಸಿಕೆ ಪ್ರಮಾಣಪತ್ರವಾಗಿದೆ. ಕೋವಿಡ್-19 ಸೋಂಕು ತಪ್ಪಿಸಲು ನೀವು ಲಸಿಕೆಯ ಎರಡೂ ಡೋಸ್‌ಗಳನ್ನು ಸಹ ತೆಗೆದುಕೊಂಡಿದ್ದರೆ ನಿಮ್ಮ ಪ್ರಮಾಣಪತ್ರವನ್ನು ಫೋನ್‌ನಲ್ಲಿ ಕಡ್ಡಾಯವಾಗಿ ಇಟ್ಟುಕೊಳ್ಳಿ.
ನಮಗೆ ಆಧಾರ್ ಕಾರ್ಡ್ ಎಷ್ಟು ಮುಖ್ಯವೋ ಅದೇ ರೀತಿ ಪ್ಯಾನ್ ಕಾರ್ಡ್ ಕೂಡ ಅಷ್ಟೇ ಮುಖ್ಯ. ಇದು ಒಂದು ಪ್ರಮುಖ ಗುರುತಿನ ಪುರಾವೆಯಾಗಿದೆ. ಪ್ಯಾನ್ ಕಾರ್ಡ್‌ನ ಪ್ರತಿಯನ್ನು ನಮ್ಮ ಫೋನಿನಲ್ಲಿ ಇಟ್ಟುಕೊಳ್ಳುವುದು ಉತ್ತಮ. ನೀವು ಹಾರ್ಡ್ ಕಾಪಿ ನಕಲನ್ನು ಹೊಂದಿಲ್ಲದಿದ್ದರೆ ಅದರ ಚಿತ್ರ ಅಥವಾ ಡಿಜಿಟಲ್ ನಕಲು ನಿಮಗೆ ಹೆಚ್ಚು ಉಪಯೋಗವಾಗಬಹುದು.