ಲೇಡಿಫಿಂಗರ್‌ನ ಈ ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿದರೆ ನಿಜಕ್ಕೂ ಶಾಕ್ ಆಗ್ತೀರಾ!
ಬೆಂಡೆಕಾಯಿಯನ್ನು ಲೇಡಿಫಿಂಗರ್ ಎಂತಲೂ ಕರೆಯಲಾಗುತ್ತದೆ. ಇದರಲ್ಲಿ, ವಿಟಮಿನ್ ಎ, ಬಿ, ಸಿ, ಇ ಮತ್ತು ಕೆ ಮತ್ತು ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಸತು ಕಂಡು ಬರುತ್ತದೆ. ಈ ತರಕಾರಿಯಲ್ಲಿರುವ ಖನಿಜಗಳು, ವಿಟಮಿನ್‌ಗಳು ಮತ್ತು ಸಾವಯವ ಸಂಯುಕ್ತಗಳಿಂದಾಗಿ ಇದು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಅವುಗಳೆಂದರೆ...
ಬೆಂಡೆಕಾಯಿಯಲ್ಲಿ ಕಂಡು ಬರುವ ಗ್ಲುಟಿನಸ್ ಫೈಬರ್ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.
ಬೆಂಡೆಕಾಯಿಯಲ್ಲಿ ವಿವಿಧ ಉತ್ಕರ್ಷಣ ನಿರೋಧಕ ಸಾರಗಳು ಕಂಡು ಬರುತ್ತದೆ. ಇದು ಸ್ವತಂತ್ರ ರಾಡಿಕಲ್ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಬೆಂಡೆಕಾಯಿಯು ಪೊಟ್ಯಾಸಿಯಮ್ ಸೇರಿದಂತೆ ಜೀವಸತ್ವಗಳು ಮತ್ತು ಖನಿಜಗಳ ಅತ್ಯುತ್ತಮ ಮೂಲವಾಗಿದೆ. ಇದರ ಸೇವನೆಯಿಂದ ರಕ್ತದೊತ್ತಡ ಸಮಸ್ಯೆ ಕಡಿಮೆ ಆಗುತ್ತದೆ.
ಬೆಂಡೆಕಾಯಿಯು ವಿಟಮಿನ್ ಎ ಮತ್ತು ಬೀಟಾ, ಕ್ಯಾರೋಟಿನ್ ನಂತಹ ಹೆಚ್ಚಿನ ಪ್ರಮಾಣದ ಆಂಟಿ-ಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿದ್ದು ಇದು ಕಣ್ಣಿನ ಪೊರೆ ಸಮಸ್ಯೆ ನಿವಾರಿಸುವ ಅತ್ಯುತ್ತಮ ತರಕಾರಿಗಳಲ್ಲಿ ಒಂದಾಗಿದೆ.
ನಿಯಮಿತ ಬೆಂಡೆಕಾಯಿ ಸೇವನೆಯು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.